ಕ್ರಿಕೆಟ್‌: ಇಂಗ್ಲೆಂಡ್‌ಗೆ ಆಘಾತ ನೀಡಿದ ಸ್ಕಾಟ್ಲೆಂಡ್‌

0
13

ಸ್ಕಾಟ್ಲೆಂಡ್‌ ತಂಡ ಜೂನ್ 10 ರ ಭಾನುವಾರ ಗ್ರ್ಯಾಂಗ್‌ ಕ್ರಿಕೆಟ್‌ ಕ್ಲಬ್‌ನ ಮೈದಾನದಲ್ಲಿ ಹೊಸ ಭಾಷ್ಯ ಬರೆಯಿತು.

ಎಡಿನ್‌ಬರ್ಗ್‌ (ಎಎಫ್‌ಪಿ): ಸ್ಕಾಟ್ಲೆಂಡ್‌ ತಂಡ ಜೂನ್ 10 ರ ಭಾನುವಾರ ಗ್ರ್ಯಾಂಗ್‌ ಕ್ರಿಕೆಟ್‌ ಕ್ಲಬ್‌ನ ಮೈದಾನದಲ್ಲಿ ಹೊಸ ಭಾಷ್ಯ ಬರೆಯಿತು.

ಕೈಲ್‌ ಕೊಯೆಟ್‌ಜರ್‌ ಸಾರಥ್ಯದ ತಂಡ ಏಕೈಕ ಏಕದಿನ ಪಂದ್ಯದಲ್ಲಿ, ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ದಲ್ಲಿರುವ ಇಂಗ್ಲೆಂಡ್‌ಗೆ ಆಘಾತ ನೀಡಿತು.

ಮೊದಲು ಬ್ಯಾಟ್‌ ಮಾಡಿದ ಸ್ಕಾಟ್ಲೆಂಡ್‌ 50 ಓವರ್‌ಗಳಲ್ಲಿ 5 ವಿಕೆಟ್‌ಗೆ 371 ರನ್‌ ದಾಖಲಿಸಿತು. ಈ ತಂಡದ ಕಾಲಮ್‌ ಮೆಕ್‌ಲಿಯೊಡ್‌ (ಔಟಾಗದೆ 140; 94ಎಸೆತ, 16ಬೌಂಡರಿ, 3ಸಿಕ್ಸರ್) ಅಜೇಯ ಶತಕ ಸಿಡಿಸಿ ಮಿಂಚಿದರು.

ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ 48.5 ಓವರ್‌ಗಳಲ್ಲಿ 365ರನ್‌ಗಳಿಗೆ ಆಲೌಟ್‌ ಆಯಿತು.

ಜೇಸನ್‌ ರಾಯ್‌ (34; 32ಎ, 3ಬೌಂ) ಮತ್ತು ಜಾನಿ ಬೇಸ್ಟೋ (105; 59ಎ, 12ಬೌಂ, 6ಸಿ) ಏಯೊನ್‌ ಮಾರ್ಗನ್‌ ಪಡೆಗೆ ಉತ್ತಮ ಆರಂಭ ನೀಡಿದರು. ಇವರು ಮೊದಲ ವಿಕೆಟ್‌ಗೆ 129ರನ್‌ ದಾಖಲಿಸಿದರು.

ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಗಳು ಬೇಗನೆ ಔಟಾಗಿದ್ದರಿಂದ ಮಾರ್ಗನ್‌ ಬಳಗದ ಗೆಲುವಿನ ಕನಸು ಕಮರಿತು.

ಸಂಕ್ಷಿಪ್ತ ಸ್ಕೋರ್‌: ಸ್ಕಾಟ್ಲೆಂಡ್‌, 50 ಓವರ್‌ಗಳಲ್ಲಿ 5 ವಿಕೆಟ್‌ಗೆ 371 (ಮ್ಯಾಥ್ಯೂ ಕ್ರಾಸ್‌ 48, ಕೈಲ್‌ ಕೊಯೆಟ್‌ಜರ್‌ 58, ಕಾಲಮ್‌ ಮೆಕ್‌ಲಿಯೊಡ್‌ ಔಟಾಗದೆ 140, ರಿಚಿ ಬೆರಿಂಗ್ಟನ್‌ 39, ಜಾರ್ಜ್‌ ಮುನ್ಶಿ 55; ಆದಿಲ್‌ ರಶೀದ್‌ 72ಕ್ಕೆ2, ಲಿಯಾಮ್‌ ಫ್ಲಂಕೆಟ್‌ 85ಕ್ಕೆ2, ಮಾರ್ಕ್‌ ವುಡ್‌ 71ಕ್ಕೆ1).

ಇಂಗ್ಲೆಂಡ್‌: 48.5 ಓವರ್‌ಗಳಲ್ಲಿ 365 (ಜೇಸನ್‌ ರಾಯ್‌ 34, ಜಾನಿ ಬೇಸ್ಟೋ 105, ಅಲೆಕ್ಸ್‌ ಹೇಲ್ಸ್‌ 52, ಜೋ ರೂಟ್‌ 29, ಮೊಯೀನ್‌ ಅಲಿ 46, ಲಿಯಾಮ್‌ ಫ್ಲಂಕೆಟ್‌ ಔಟಾಗದೆ 47; ಮಾರ್ಕ್‌ ವ್ಯಾಟ್‌ 55ಕ್ಕೆ3, ಅಲಸ್ದೇರ್‌ ಇವಾನ್ಸ್‌ 50ಕ್ಕೆ2, ರಿಚಿ ಬೆರಿಂಗ್ಟನ್‌ 67ಕ್ಕೆ2).

ಫಲಿತಾಂಶ: ಸ್ಕಾಟ್ಲೆಂಡ್‌ಗೆ ಆರು ರನ್‌ ಗೆಲುವು.

ಪಂದ್ಯ ಶ್ರೇಷ್ಠ: ಕಾಲಮ್‌ ಮೆಕ್‌ಲಿಯೊಡ್‌.