ಕ್ರಿಕೆಟಿಗ “ಸಬ್ಬೀರ್​ ರಹ​ಮಾನ್” ಗೆ 6 ತಿಂಗಳ ಕಾಲ ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿಷೇಧ : ಬಿಸಿಬಿ ಶಿಸ್ತು ಪಾಲನಾ ಸಮಿತಿ ಆದೇಶ

0
677

ಬಾಂಗ್ಲಾದೇಶದ ಕ್ರಿಕೆಟಿಗ ಸಬ್ಬೀರ್​ ರಹ​ಮಾನ್ ಅವರು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಯೊಬ್ಬರನ್ನು ನಿಂದಿಸಿದ್ದಕ್ಕೆ ಮತ್ತು ಅವರ ಹಳೆಯ ನಡವಳಿಕೆಗಳನ್ನು ಪರಿಗಣಿಸಿ ಬಾಂಗ್ಲಾದೇಶ ಕ್ರಿಕೆಟ್ ಸಂಸ್ಥೆಯ(ಬಿಸಿಬಿ) ಶಿಸ್ತು ಪಾಲನಾ ಸಮಿತಿ ನಿಷೇಧ ಆದೇಶ ಹೊರಡಿಸಿದೆ.

ಡಾಕಾ: ಬಾಂಗ್ಲಾದೇಶದ ಕ್ರಿಕೆಟಿಗ ಸಬ್ಬೀರ್​ ರಹ​ಮಾನ್ ಅವರು  ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಯೊಬ್ಬರನ್ನು ನಿಂದಿಸಿದ್ದಕ್ಕೆ ಮತ್ತು ಅವರ ಹಳೆಯ ನಡವಳಿಕೆಗಳನ್ನು ಪರಿಗಣಿಸಿ ಬಾಂಗ್ಲಾದೇಶ ಕ್ರಿಕೆಟ್ ಸಂಸ್ಥೆಯ(ಬಿಸಿಬಿ) ಶಿಸ್ತು ಪಾಲನಾ ಸಮಿತಿ 6 ತಿಂಗಳ ಕಾಲ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡದಂತೆ ನಿಷೇಧ ಆದೇಶ ಹೊರಡಿಸಿದೆ.

ಬಿಸಿಬಿ ಅಧ್ಯಕ್ಷ ನಜ್ಮುಲ್​ ಹಸನ್​ ಈ ಆದೇಶಕ್ಕೆ ಗ್ರೀನ್​ ಸಿಗ್ನಲ್​ ನೀಡಿದ್ದಾರೆ. ಈ ನಿಷೇಧದಿಂದಾಗಿ ಸೆಪ್ಟೆಂಬರ್​ 15ರಂದು ಆರಂಭವಾಗಲಿರುವ ಏಷ್ಯ ಕಪ್​ನಿಂದಲೂ ದೂರ ಉಳಿಯಬೇಕಿದೆ.

ಸಬ್ಬೀರ್​ ಮೇಲೆ ಬಿಸಿಬಿ ಶಿಸ್ತು ಪಾಲನಾ ಸಮಿತಿ ಎರಡನೇ ಬಾರಿ ನಿಷೇಧ ಹೇರಿದ್ದು, ಇನ್ನೊಮ್ಮೆ ಇದೇ ತಪ್ಪು ಮಾಡಿದರೆ ದೀರ್ಘಕಾಲದ ಅಥವಾ ಜೀವನ ಪರ್ಯಂತ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿಷೇಧ ಹೇರುವುದಾಗಿ ಸಮಿತಿ ಎಚ್ಚರಿಸಿದೆ.

ಈ ಹಿಂದೆ ಖಾಸಗಿ ಹೊಟೆಲ್ ಗೆ ಅನುಮತಿ ಇಲ್ಲದೇ ಮಹಿಳೆಯನ್ನು ಕರೆತಂದು ಕೊಠಡಿಯೊಳಗೆ ಇರಿಸಿದ್ದಕ್ಕೆ ಸಂಬಂಧಿಸಿದಂತೆ ಸಬ್ಬೀರ್​ 6 ತಿಂಗಳ ನಿಷೇಧ ಶಿಕ್ಷೆಗೆ ಒಳಗಾಗಿದ್ದರು. ಈ ಶಿಕ್ಷೆಯೇ ಇನ್ನು ಪೂರ್ಣಗೊಂಡಿಲ್ಲ. ಅಷ್ಟರಲ್ಲಿ ಮತ್ತೆ ಸಬ್ಬೀರ್ ನಿಷೇಧ ಶಿಕ್ಷೆಗೆ ಗುರಿಯಾಗಿದ್ದಾರೆ.

ಭಾರತದ ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾ ಅವರನ್ನು ಸಬ್ಬೀರ್​ ಚುಡಾಯಿಸಿದ್ದರು ಎಂದು ಸಾನಿಯಾ ಪತಿ ಶೋಯೆಬ್​ ಮಲಿಕ್​ ಆರೋಪಿಸಿದ್ದರು.