ಕ್ಯೂಎಸ್‌ ಇಂಡಿಯಾ ರ‍್ಯಾಂಕಿಂಗ್: ಬೆಂಗಳೂರಿನ ಐಐಎಸ್‌ಸಿಗೆ 2ನೇ ಸ್ಥಾನ (ಅಗ್ರ 50ರ ಪಟ್ಟಿಯಲ್ಲಿ ಕರ್ನಾಟಕದ 5 ಉನ್ನತ ಶಿಕ್ಷಣ ಸಂಸ್ಥೆಗಳು)

0
16

ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ರ‍್ಯಾಂಕಿಂಗ್ ಅನ್ನು ಕ್ಯೂಎಸ್‌ ಇಂಡಿಯಾ ಪ್ರಕಟಿಸಿದೆ. ಪಟ್ಟಿಯಲ್ಲಿ ಐಐಟಿ ಬಾಂಬೆ ಪ್ರಥಮ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ದ್ವಿತೀಯ ಸ್ಥಾನ ಪಡೆದಿವೆ. ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (ಐಐಟಿ) ಮೇಲುಗೈ ಸಾಧಿಸಿವೆ.

ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ರ‍್ಯಾಂಕಿಂಗ್ ಅನ್ನು ಕ್ಯೂಎಸ್‌ ಇಂಡಿಯಾ ಪ್ರಕಟಿಸಿದೆ. ಪಟ್ಟಿಯಲ್ಲಿ ಐಐಟಿ ಬಾಂಬೆ ಪ್ರಥಮ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ದ್ವಿತೀಯ ಸ್ಥಾನ ಪಡೆದಿವೆ. ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (ಐಐಟಿ) ಮೇಲುಗೈ ಸಾಧಿಸಿವೆ.

ರ‍್ಯಾಂಕಿಂಗ್ ನಿಗದಿ: ಶೈಕ್ಷಣಿಕ ಗುಣಮಟ್ಟ, ಶಿಕ್ಷಣ ಸಂಸ್ಥೆಯ ಸಾಧನೆ, ಶಿಕ್ಷಕ – ವಿದ್ಯಾರ್ಥಿಗಳ ಅನುಪಾತ; ಪಿಎಚ್.ಡಿ ಪಡೆದಿರುವ ಅಧ್ಯಾಪಕರು, ವಿದೇಶಿ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಸಂಖ್ಯೆ ಸೇರಿ 8 ವಿಭಾಗಗಳಿಗೆ ಪ್ರತ್ಯೇಕ ಅಂಕ ನಿಗದಿಪಡಿಸಲಾಗಿದೆ. ಇವುಗಳ ಸರಾಸರಿ ಅಂಕದ ಆಧಾರದ ಮೇಲೆ ರ‍್ಯಾಂಕಿಂಗ್ ನಿಗದಿಪಡಿಸಲಾಗಿದೆ.

ಕರ್ನಾಟಕ ರಾಜ್ಯದ ಶಿಕ್ಷಣ ಸಂಸ್ಥೆಗಳ ಶ್ರೇಯಾಂಕ

ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ) ಬೆಂಗಳೂರು

ರ‍್ಯಾಂಕ್ :  2 ನೇ 

ಒಟ್ಟು ಅಂಕ : 45.9

ಶೈಕ್ಷಣಿಕ ಸಾಧನೆಗೆ ಪಡೆದ ಅಂಕ: 33.3

ಜಾಗತಿಕ ಶ್ರೇಯಾಂಕ ಪಟ್ಟಿಯಲ್ಲಿ ಐಐಎಸ್‌ಸಿ ಸ್ಥಾನ: 184

 

ಮಣಿಪಾಲ್  ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಮಣಿಪಾಲ

ರ‍್ಯಾಂಕ್ :  26 ನೇ 

ಜಾಗತಿಕ ಶ್ರೇಯಾಂಕ ಪಟ್ಟಿಯಲ್ಲಿ ಐಐಎಸ್‌ಸಿ ಸ್ಥಾನ: 701 – 750 ವಿಭಾಗ

ವೈದ್ಯಕೀಯ ವಿಜ್ಞಾನ, ಎಂಜಿನಿಯರಿಂಗ್, ಮ್ಯಾನೇಜ್ ಮೆಂಟ್ ಅಧ್ಯಯನ

 

ಜೆ.ಎಸ್.ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಎಂಡ್  ರಿಸರ್ಚ್ ಮೈಸೂರು

ರ‍್ಯಾಂಕ್ : 31 ನೇ 

ಶೈಕ್ಷಣಿಕ ಸಾಧನೆಗೆ ಪಡೆದ ಅಂಕ: 8.2

ವೈದ್ಯಕೀಯ ಹಾಗೂ ಆರೋಗ್ಯ ಸಂಬಂಧಿ ಅಧ್ಯಯನಕ್ಕೆ ಅವಕಾಶ

 

ಬೆಂಗಳೂರು ವಿಶ್ವವಿದ್ಯಾಲಯ

ರ‍್ಯಾಂಕ್ : 38 ನೇ 

ಒಟ್ಟು ಅಂಕ : 35.6

ಶೈಕ್ಷಣಿಕ ಸಾಧನೆಗೆ ಪಡೆದ ಅಂಕ: 26.4

ಏಷ್ಯನ್ ಯೂನಿವರ್ಸಿಟಿ ರ‍್ಯಾಂಕಿಂಗ್ : 301-350 ವಿಭಾಗ

 

ಮಂಗಳೂರು ವಿಶ್ವ ವಿದ್ಯಾಲಯ

ರ‍್ಯಾಂಕ್ : 48 ನೇ 

ಒಟ್ಟು ಅಂಕ : 31.6

ಶೈಕ್ಷಣಿಕ ಸಾಧನೆಗೆ ಪಡೆದ ಅಂಕ: 6.2

ಏಷ್ಯನ್ ಯೂನಿವರ್ಸಿಟಿ ರ‍್ಯಾಂಕಿಂಗ್ : 401-450 ವಿಭಾಗ

 

ರಾಜ್ಯದ ಇತರೆ ಶಿಕ್ಷಣ ಸಂಸ್ಥೆಗಳ ರ‍್ಯಾಂಕಿಂಗ್ 

# ಮೈಸೂರು ವಿಶ್ವವಿದ್ಯಾಲಯ : 58

# ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯ : 60

# ಎನ್.ಐ.ಟಿ ಸುರತ್ಕಲ್ : 63

# ಕೆ.ಎಲ್.ಇ  ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ರಿಸರ್ಚ್ ಬೆಳಗಾವಿ : 69

# ಗುಲ್ಬರ್ಗಾ ವಿಶ್ವವಿದ್ಯಾಲಯ : 79

# ಕ್ರೈಸ್ಟ್ ವಿಶ್ವವಿದ್ಯಾಲಯ ಬೆಂಗಳೂರು : 81

# ಜೈನ್ ವಿಶ್ವವಿದ್ಯಾಲಯ ಬೆಂಗಳೂರು : 91

# ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ : 92

# ಕುವೆಂಪು ವಿಶ್ವವಿದ್ಯಾಲಯ ಶಿವಮೊಗ್ಗ : 94