ಕ್ಯಾಪ್ಟನ್ ಕೊಹ್ಲಿಗೆ ಬಾರ್ಮಿ ಆರ್ಮಿ ಪ್ರಶಸ್ತಿ

0
12

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್‌ನ ಪ್ರತಿಷ್ಠಿತ ಬಾರ್ಮಿ ಆರ್ಮಿ ಪ್ರಶಸ್ತಿಗೆ ಭಾಜನವಾಗಿದ್ದಾರೆ.2017 ಹಾಗೂ 2018ನೇ ಸಾಲಿನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಕೊಹ್ಲಿ ಅವರನ್ನು 2017 ಹಾಗೂ 2018ನೇ ಸತತ ಎರಡು ಸಾಲಿನ ಅಂತರಾಷ್ಟ್ರೀಯ ವರ್ಷದ ಕ್ರಿಕೆಟಿಗ ಪ್ರಶಸ್ತಿ ನೀಡಿ ಬಾರ್ಮಿ ಆರ್ಮಿ ಗೌರವಿಸಿದೆ.

ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್‌ನ ಪ್ರತಿಷ್ಠಿತ ಬಾರ್ಮಿ ಆರ್ಮಿ ಪ್ರಶಸ್ತಿಗೆ ಭಾಜನವಾಗಿದ್ದಾರೆ. 

2017 ಹಾಗೂ 2018ನೇ ಸಾಲಿನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಕೊಹ್ಲಿ ಅವರನ್ನು 2017 ಹಾಗೂ 2018ನೇ ಸತತ ಎರಡು ಸಾಲಿನ ಅಂತರಾಷ್ಟ್ರೀಯ ವರ್ಷದ ಕ್ರಿಕೆಟಿಗ ಪ್ರಶಸ್ತಿ ನೀಡಿ ಬಾರ್ಮಿ ಆರ್ಮಿ ಗೌರವಿಸಿದೆ. 

ಪ್ರಸ್ತುತ ಎಸೆಕ್ಸ್ ವಿರುದ್ಧ ಸಾಗುತ್ತಿರುವ ಮೊದಲ ದಿನದ ಅಭ್ಯಾಸ ಅವಧಿಯ ಬಳಿಕ ಕೊಹ್ಲಿ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. 

ಇಂಗ್ಲೆಂಡ್ ಕ್ರಿಕೆಟ್ ತಂಡದ ಅಭಿಮಾನಿಗಳ ಬಹುದೊಡ್ಡ ಕ್ಲಬ್ ಆಗಿರುವ ಬಾರ್ಮಿ ಆರ್ಮಿ, ಹಲವಾರು ವರ್ಷಗಳಿಂದಲೂ ಇಂಗ್ಲೆಂಡ್ ತಂಡಕ್ಕೆ ನಿರಂತರ ಹುರುಪು ತುಂಬುತ್ತಲೇ ಇದೆ. ಬಳಿಕ ಪ್ರತಿಕ್ರಿಯಿಸಿದ ಕೊಹ್ಲಿ, ಇತರೆ ದೇಶದ ಅಭಿಮಾನಿಗಳ ಬಳಗದಿಂದಲೂ ಗುರುತಿಸಿಕೊಂಡಿರುವುದು ಅತೀವ ಸಂತಸವನ್ನು ನೀಡುತ್ತಿದೆ. ಓರ್ವ ಕ್ರಿಕೆಟಿಗನಾಗಿ ಜಾಗತಿಕ ಕ್ರಿಕೆಟ್ ಅಭಿಮಾನಿಗಳ ಪ್ರೀತಿ ಗಿಟ್ಟಿಸುವುದು ನಿಜಕ್ಕೂ ವಿಶೇಷ ಎಂದರು.