ಕೋಲ್ಕತದಲ್ಲಿ ರಸ್ತೆಗೆ ಕಸ ಎಸೆದರೆ 1 ಲಕ್ಷ ರೂ. ದಂಡ

0
431

ಕೋಲ್ಕತ ಮಹಾನಗರದಲ್ಲಿ ರಸ್ತೆ ಮೇಲೆ ಕಸ ಎಸೆದರೆ ಕನಿಷ್ಠ 5 ಸಾವಿರ ರೂ.ನಿಂದ 1 ಲಕ್ಷ ರೂ.ವರೆಗೆ ದಂಡ ವಿಧಿಸುವ ಮಸೂದೆಯನ್ನು ಪಶ್ಚಿಮಬಂಗಾಳ ವಿಧಾನಸಭೆ ಅನುಮೋದಿಸಿದೆ.

ಕೋಲ್ಕತ: ಕೋಲ್ಕತ ಮಹಾನಗರದಲ್ಲಿ ರಸ್ತೆ ಮೇಲೆ ಕಸ ಎಸೆದರೆ ಕನಿಷ್ಠ 5 ಸಾವಿರ ರೂ.ನಿಂದ 1 ಲಕ್ಷ ರೂ.ವರೆಗೆ ದಂಡ ವಿಧಿಸುವ ಮಸೂದೆಯನ್ನು ಪಶ್ಚಿಮಬಂಗಾಳ ವಿಧಾನಸಭೆ ಅನುಮೋದಿಸಿದೆ.

ನವೆಂಬರ್ 22 ರ ಗುರುವಾರ ನಡೆದ ಅಧಿವೇಶನದಲ್ಲಿ ಕೋಲ್ಕತ ಮುನ್ಸಿಪಲ್ ಕಾಪೋರೇಷನ್ (2ನೇ ತಿದ್ದುಪಡಿ) ಮಸೂದೆ, 2018ರಲ್ಲಿ 338ನೇ ವಿಧಿಗೆ ತಿದ್ದುಪಡಿ ತರುವ ಮಸೂದೆಗೆ ಅನುಮೋದನೆ ನೀಡಲಾಗಿದೆ. ಇದಕ್ಕೂ ಮುನ್ನ ರಸ್ತೆಗಳಲ್ಲಿ ಕಸ ಎಸೆದರೆ 50 ರೂ.ನಿಂದ 5 ಸಾವಿರ ರೂ.ವರೆಗೆ ಜುಲ್ಮಾನೆ ವಿಧಿಸಲಾಗುತ್ತಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಮತ್ತು ಕಸ ವಿಲೇವಾರಿ ಸಮಸ್ಯೆ ಪರಿಹರಿಸಲು ಕೈಗೊಳ್ಳಬೇಕಾದ ಕಠಿಣ ಕ್ರಮಗಳ ಕುರಿತು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮುಖ್ಯ ಕಾರ್ಯದರ್ಶಿ ಮೊಲೊಯ್ ಡೇ ನೇತೃತ್ವದಲ್ಲಿ ಸಮಿತಿ ರಚಿಸಿದ್ದರು. ಈ ಸಮಿತಿ ಮಾಡಿದ ಶಿಫಾರಸನ್ನು ಆಧರಿಸಿ, ಜುಲ್ಮಾನೆ ಹೆಚ್ಚಿಸುವ ಮಸೂದೆ ರೂಪಿಸಲಾಗಿತ್ತು.