‘ಕೊಲ್ಲಿಯಿಂದ ತೈಲ ಪೂರೈಕೆ ಬಂದ್’ (ಇರಾನ್ ಅಧ್ಯಕ್ಷ ಹಸನ್ ರೌಹಾನಿ ಬೆದರಿಕೆ)

0
693

ಅಮೆರಿಕ ಹೇರಿರುವ ದಿಗ್ಬಂಧನಗಳಿಗೆ ತಿರುಗೇಟು ನೀಡಿರುವ ಇರಾನ್ ಅಧ್ಯಕ್ಷ ಹಸನ್ ರೌಹಾನಿ ಅವರು, ಅಂತರರಾಷ್ಟ್ರೀಯ ಮಾರುಕಟ್ಟೆಗೆ ಕೊಲ್ಲಿಯಿಂದ ಸರಬರಾಜಾಗುವ ತೈಲವನ್ನು ಸ್ಥಗಿತಗೊಳಿಸುವ ಬೆದರಿಕೆ ಒಡ್ಡಿದ್ದಾರೆ.

ಟೆಹರಾನ್ (ಎಎಫ್‌ಪಿ): ಅಮೆರಿಕ ಹೇರಿರುವ ದಿಗ್ಬಂಧನಗಳಿಗೆ ತಿರುಗೇಟು ನೀಡಿರುವ ಇರಾನ್ ಅಧ್ಯಕ್ಷ ಹಸನ್ ರೌಹಾನಿ ಅವರು, ಅಂತರರಾಷ್ಟ್ರೀಯ ಮಾರುಕಟ್ಟೆಗೆ ಕೊಲ್ಲಿಯಿಂದ ಸರಬರಾಜಾಗುವ ತೈಲವನ್ನು ಸ್ಥಗಿತಗೊಳಿಸುವ ಬೆದರಿಕೆ ಒಡ್ಡಿದ್ದಾರೆ.  

‘ಇರಾನ್‌ನಿಂದ ತೈಲ ಸರಬರಾಜನ್ನು ತಡೆಯುವ ಸಾಮರ್ಥ್ಯ ಅಮೆರಿಕಕ್ಕೆ ಇಲ್ಲ. ಅಮೆರಿಕ ಇದನ್ನು ತಿಳಿದುಕೊಳ್ಳಲಿ. ಒಂದು ವೇಳೆ ಈ ಯತ್ನಕ್ಕೆ ಕೈಹಾಕಿದರೆ, ಪರ್ಶಿಯನ್ ಕೊಲ್ಲಿಯಿಂದ ತೈಲ ರಫ್ತಾಗದು’ ಎಂದು ಹೇಳಿದ್ದಾರೆ.

ಅಂತರರಾಷ್ಟ್ರೀಯ ಒತ್ತಡದ ಕಾರಣ, 1980ರಿಂದಲೂ ಕೊಲ್ಲಿಯನ್ನು ಬಂದ್ ಮಾಡುವುದಾಗಿ ಇರಾನ್ ಹೇಳುತ್ತಾ ಬಂದಿದ್ದರೂ, ಈವರೆಗೆ ಹಾಗೆ ಮಾಡಿಲ್ಲ.  ಸಿಂಹದ ಬಾಲದ ಜೊತೆ ಆಟವಾಡಬೇಡಿ ಎಂದು ಇದೇ ಜುಲೈನಲ್ಲಿ ಅಮೆರಿಕಕ್ಕೆ ತಾಕೀತು ಮಾಡಿದ್ದ ರೌಹಾನಿ ಕೊಲ್ಲಿಯನ್ನು ಬಂದ್ ಮಾಡುವ ಬೆದರಿಕೆ ಒಡ್ಡಿದ್ದರು. ನಿರ್ಬಂಧ ಹೇರುವುದರಿಂದ ಗಂಭೀರ ಆರ್ಥಿಕ ಪರಿಣಾಮ ಉಂಟಾಗಲಿದೆ ಎಂಬ ಮಾಧ್ಯಮ ವರದಿಗಳನ್ನೂ ಅವರು ತಳ್ಳಿ
ಹಾಕಿದ್ದರು.

ಇರಾನ್ ಜೊತೆಗಿನ 2015ರ ಒಪ್ಪಂದವನ್ನು ಅಮೆರಿಕ ಹಿಂಪಡೆದ ಬಳಿಕ ಅದರ ಮೇಲೆ ತೈಲ ನಿಷೇಧ ಸೇರಿ ದಂತೆ ಹಲವು ನಿರ್ಬಂಧಗಳನ್ನು ಮತ್ತೆ ಜಾರಿಗೊಳಿಸಿದೆ.