ಕೈಲಾಶ್ ಸತ್ಯಾರ್ಥಿ ಹಾಡು: ಒಂದೇ ದಿನದಲ್ಲಿ 20 ಲಕ್ಷ ಜನ ವೀಕ್ಷಣೆ

0
32

ಕೈಲಾಶ್ ಸತ್ಯಾರ್ಥಿ ಅವರು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಕಿರುಕುಳ ಮತ್ತು ಕಳ್ಳಸಾಗಣೆಯ ವಿರುದ್ಧ ಅಭಿಯಾನ ನಡೆಸುವ ಸಲುವಾಗಿ 35 ದಿನಗಳ ಭಾರತ ಯಾತ್ರೆ ಕೈಗೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಈ ಹಾಡನ್ನು ಅವರು ರಚನೆ ಮಾಡಿದ್ದಾರೆ.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಮಕ್ಕಳ ಕಳ್ಳ ಸಾಗಾಣಿಕೆ ವಿರುದ್ಧ ಜಾಗತಿಕವಾಗಿ ಹೋರಾಟ ನಡೆಸುತ್ತಿರುವ ನೊಬೆಲ್ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಅವರು ರಚಿಸಿರುವ ಹಾಡನ್ನು ಒಂದೇ ದಿನದಲ್ಲಿ 20 ಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ.

ಸತ್ಯಾರ್ಥಿ ಬರೆದಿರುವ ‘ನಿಕಲ್ ಪಡೇ ಹೇ’ ಹಾಡನ್ನು ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್‌ ಮತ್ತು ಫೇಸ್‌ಬುಕ್‌ನಲ್ಲಿ 20 ಲಕ್ಷ ಜನರು ವೀಕ್ಷಿಸಿದ್ದಾರೆ.

ಈ ಹಾಡಿಗೆ ‘ಇಂಡಿಯನ್ ಒಷಿಯನ್’ ಸಂಸ್ಥೆ ರಾಗ ಸಂಯೋಜನೆ ಮಾಡಿದ್ದು, ಸೋನಾಮ್ ಕಲ್ರಾ ಅವರು ಹಾಡಿದ್ದಾರೆ.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಕಿರುಕುಳ ಮತ್ತು ಕಳ್ಳಸಾಗಣೆಯ ವಿರುದ್ಧ ಅಭಿಯಾನ ನಡೆಸುವ ಸಲುವಾಗಿ 35 ದಿನಗಳ ಭಾರತ ಯಾತ್ರೆ ಕೈಗೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಈ ಹಾಡನ್ನು ರಚನೆ ಮಾಡಿದ್ದಾರೆ.

ಈ ಹಾಡಿನಲ್ಲಿ ಸತ್ಯಾರ್ಥಿ ಅವರ ಹೋರಾಟ, ಪ್ರತಿಭಟನೆ, ಅಭಿಯಾನದ ಚಿತ್ರಗಳು ಮತ್ತು ವಿಡಿಯೊಗಳನ್ನು ಬಳಕೆ ಮಾಡಲಾಗಿದೆ. ಕೈಲಾಶ್ ಸತ್ಯಾರ್ಥಿ ಅವರು 36 ವರ್ಷಗಳಿಂದ ಮಕ್ಕಳ ಸ್ವಾತಂತ್ರ್ಯ, ಸುರಕ್ಷತೆ  ಹಾಗೂ ಭದ್ರತೆಗಾಗಿ ಶ್ರಮಿಸುತ್ತಿದ್ದಾರೆ.

ಈ ಕೈಲಾಶ್ ಸಥ್ಯಾರ್ಥಿ ಯಾರು?

ಕೈಲಾಸ್ ಸತ್ಯಾರ್ಥಿ ಅವರು ಕಳೆದ 34 ವರ್ಷಗಳಿಂದಲೂ ಅತ್ಯಂತ ನಿಷ್ಠೆಯಿಂದ, ಸಂಪೂರ್ಣ ಸಮರ್ಪಣಾ ಭಾವದಿಂದ ಮಕ್ಕಳ ಹಕ್ಕುಗಳ ಹೋರಾಟಗಾರರಾಗಿ ದುಡಿಯುತ್ತಿದ್ದಾರೆ. ಸತ್ಯಾರ್ಥಿಯವರಿಗೆ 2014 ರ ಸಾಲಿನ ನೋಬೆಲ್ ಶಾಂತಿ ಪ್ರಶಸ್ತಿ ದೊರೆತಿದೆ. ಇವರು ದೆಹಲಿಯಲ್ಲಿ “ಬಚ್‍ಪನ್ ಬಚಾವೋ ಆಂದೋಳನ”ದ ಮೂಲಕ ಸುಮಾರು 80 ಸಾವಿರಕ್ಕೂ ಹೆಚ್ಚು ಬಾಲ ಕಾರ್ಮಿಕರ ಮುಕ್ತಿ, ಮತ್ತು ಪುನರ್ವಸತಿಗೆ ದುಡಿಯುತ್ತಿದ್ದಾರೆ. ಆ ಮಕ್ಕಳಿಗೆ ಶಿಕ್ಷಣ, ಉದ್ಯೋಗ ಒದಗಿಸಿ ಮಕ್ಕಳ ಜೀವನಕ್ಕೆ ಒಂದು ಭವಿಷ್ಯವನ್ನು ಕಲ್ಪಿಸಿದ್ದಾರೆ. ಇವರ ಬಚ್ಪನ್ ಬಚಾವೂ ಆಂದೋಲನದ ಮಹತ್ವದ ಕೆಲಸವನ್ನು ಗಮನಿಸಿ 2014 ರ ನೋಬೆಲ್ ಶಾಂತಿ ಪ್ರಶಸ್ತಿಯನ್ನು ಪಾಕಿಸ್ತಾನ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಮಲಾಲ ಯೂಸಫ್ ಝಾಯಿಯೊಂದಿಗೆ ನೀಡಲಾಗಿದೆ.