“ಕೈಲಾಶ್‌ ಸತ್ಯಾರ್ಥಿ” ಕುರಿತ ಸಾಕ್ಷ್ಯಚಿತ್ರ ಖರೀದಿಸಿದ ಯೂಟ್ಯೂಬ್‌

0
659

ಮಕ್ಕಳ ಹಕ್ಕುಗಳ ಹೋರಾಟಗಾರ, ನೊಬೆಲ್‌ ಪುರಸ್ಕೃತ ಭಾರತೀಯ ಕೈಲಾಶ್‌ ಸತ್ಯಾರ್ಥಿ ಅವರ ಮಕ್ಕಳ ರಕ್ಷಣೆಯ ಕಾರ್ಯಚಟುವಟಿಕೆಗಳನ್ನು ಒಳಗೊಂಡ ಪ್ರಶಸ್ತಿ ವಿಜೇತ ಸಾಕ್ಷ್ಯ ಚಿತ್ರವನ್ನು ಅಮೆರಿಕದ ವೀಡಿಯೋ ಶೇರಿಂಗ್‌ ವೆಬ್‌ಸೈಟ್‌ ಯೂಟ್ಯೂಬ್‌ ಖರೀದಿಸಿದೆ.

ನ್ಯೂಯಾರ್ಕ್‌: ಮಕ್ಕಳ ಹಕ್ಕುಗಳ ಹೋರಾಟಗಾರ, ನೊಬೆಲ್‌ ಪುರಸ್ಕೃತ ಭಾರತೀಯ ಕೈಲಾಶ್‌ ಸತ್ಯಾರ್ಥಿ ಅವರ ಮಕ್ಕಳ ರಕ್ಷಣೆಯ ಕಾರ್ಯಚಟುವಟಿಕೆಗಳನ್ನು ಒಳಗೊಂಡ ಪ್ರಶಸ್ತಿ ವಿಜೇತ ಸಾಕ್ಷ್ಯ ಚಿತ್ರವನ್ನು ಅಮೆರಿಕದ ವೀಡಿಯೋ ಶೇರಿಂಗ್‌ ವೆಬ್‌ಸೈಟ್‌ ಯೂಟ್ಯೂಬ್‌ ಖರೀದಿಸಿದೆ. 

ಈ ಮೂಲಕ ಬಾಲ ಕಾರ್ಮಿಕತೆಯನ್ನು ಅಂತ್ಯಗೊಳಿಸುವುದಕ್ಕಾಗಿ ಅವರು ನಡೆಸಿದ ನಿರಂತರ ಹೋರಾಟವನ್ನು ಜಗತ್ತಿನ ಮುಂದೆ ತೆರೆದಿಡಲಿದೆ. ‘ದಿ ಪ್ರೈಸ್‌ ಆಫ್‌ ಫ್ರೀ’ ಎಂಬ ಹೆಸರಿನ ಈ ಸಾಕ್ಷ್ಯ ಚಿತ್ರವನ್ನು ಡೆರೆಕ್‌ ಡೊನೀನ್‌ ನಿರ್ದೇಶಿಸಿದ್ದು, ಸತ್ಯಾರ್ಥಿ ಮತ್ತು ಅವರ ತಂಡ ಮಕ್ಕಳ ರಕ್ಷಣೆಗಾಗಿ ನಡೆಸಿದ ಗುಪ್ತ ದಾಳಿಗಳು ಮತ್ತು ಇತರ ಕಾರ್ಯಾಚರಣೆಗಳನ್ನು ಚಿತ್ರೀಕರಿಸಿದೆ. ಚಿತ್ರವು ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಪ್ರಶಸ್ತಿಗಳನ್ನು ಪಡೆದಿದೆ. ಸತ್ಯಾರ್ಥಿ ಅವರ ಕೆಲಸವನ್ನು ಮುಂದಿನ ಪೀಳಿಗೆಗೂ ಹಂಚುವ ಪ್ರಯತ್ನ ಇದೆಂದು ಯೂಟ್ಯೂಬ್‌ ಹೇಳಿದೆ.