ಕೇರಳದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ಮೋದಿ: 500 ಕೋಟಿ ರೂ. ತುರ್ತು ಪರಿಹಾರ ಘೋಷಣೆ

0
798

ಶತಮಾನದ ಮಹಾಮಳೆಗೆ ದೇವರ ನಾಡು ಕೇರಳ ನಲುಗಿ ಹೋಗಿದ್ದು, ಜನರ ಬದುಕು ಮೂರಾಬಟ್ಟೆಯಾಗಿದೆ. ಈ ಹಿನ್ನೆಲೆ ನಿನ್ನೆ(ಆಗಸ್ಟ್ 17 ರ) ರಾತ್ರಿ ಕೇರಳಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಪ್ರವಾಹ ಪೀಡಿತ ಪ್ರದೇಶಗಳನ್ನು ವೈಮಾನಿಕ ಸಮೀಕ್ಷೆ ನಡೆಸಿದರು. ಅಲ್ಲದೆ, ತುರ್ತು ಪರಿಹಾರವಾಗಿ 500ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಪ್ರಧಾನಿ ಆದೇಶಿಸಿದ್ದಾರೆ.

ತಿರುವನಂತಪುರ: ಶತಮಾನದ ಮಹಾಮಳೆಗೆ ದೇವರ ನಾಡು ಕೇರಳ ನಲುಗಿ ಹೋಗಿದ್ದು, ಜನರ ಬದುಕು ಮೂರಾಬಟ್ಟೆಯಾಗಿದೆ. ಈ ಹಿನ್ನೆಲೆ ನಿನ್ನೆ (ಆಗಸ್ಟ್ 17 ರ)  ರಾತ್ರಿ ಕೇರಳಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಪ್ರವಾಹ ಪೀಡಿತ ಪ್ರದೇಶಗಳನ್ನು ವೈಮಾನಿಕ ಸಮೀಕ್ಷೆ ನಡೆಸಿದರು. ಅಲ್ಲದೆ, ತುರ್ತು ಪರಿಹಾರವಾಗಿ 500ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಪ್ರಧಾನಿ ಆದೇಶಿಸಿದ್ದಾರೆ. 

ಬೆಳಗ್ಗೆಯಿಂದ ಅಧಿಕಾರಿಗಳೊಂದಿಗೆ ಕೇರಳ ಪರಿಸ್ಥಿತಿ ಕುರಿತು ಸುದೀರ್ಘ ಸಮಾಲೋಚನೆ ನಡೆಸಿದ ಪ್ರಧಾನಿ ಮೋದಿ, ಅಲ್ಲಿನ ಪರಿಸ್ಥಿತಿಯನ್ನು ತಿಳಿದುಕೊಂಡರು. ಈ ವೇಳೆ, ಕೇರಳ ರಾಜ್ಯಪಾಲ ಪಿ.ಸದಾಶಿವಂ ಹಾಗೂ ಸಿಎಂ ಪಿಣರಾಯಿ ವಿಜಯನ್‌ ಜತೆಗೂ ಮೋದಿ ಸಮಾಲೋಚನೆ ನಡೆಸಿದರು. ಅಲ್ಲದೆ, ಕೇರಳ ರಾಜ್ಯಕ್ಕೆ ಕೇಂದ್ರ ಸರಕಾರದಿಂದ 500 ಕೋಟಿ ರೂ. ಅನ್ನು ತುರ್ತು ಪರಿಹಾರವಾಗಿ ಘೋಷಿಸಿದರು. ಹಣಕಾಸಿನ ಸಹಾಯದ ಜತೆಗೆ ಆಹಾರ ಧಾನ್ಯ, ಔಷಧ ಮುಂತಾದ ಎಲ್ಲ ರೀತಿಯ ಸಹಾಯಕ್ಕೆ ಕೇಂದ್ರ ಸರಕಾರ ಸಿದ್ಧವಿದೆ ಎಂದು ಮೋದಿ ಭರವಸೆ ನೀಡಿದ್ದಾರೆ. ಇತ್ತೀಚೆಗಷ್ಟೇ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ 100 ಕೋಟಿ ರೂ. ಗಳ ತುರ್ತು ಪರಿಹಾರ ಘೋಷಿಸಿದ್ದರು. ಈಗ, ಮತ್ತೆ 500 ಕೋಟಿ ರೂ. ಘೋಷಿಸಿದ್ದಾರೆ. 

ಇನ್ನು, ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ವೇಳೆ ಪ್ರಧಾನಿ ಜತೆಗೆ ಕೇರಳ ರಾಜ್ಯಪಾಲ ಸದಾಶಿವಂ, ಸಿಎಂ ಪಿಣರಾಯಿ ವಿಜಯನ್, ಕೇಂದ್ರ ಪ್ರವಾಸೋದ್ಯಮ ಖಾತೆ ಸಚಿವ ಕೆ.ಜೆ.ಆಲ್ಫೋನ್ಸ್‌ ಸಾಥ್ ನೀಡಿದ್ದರು. ಇದರೊಂದಿಗೆ ಎನ್‌ಡಿಆರ್‌ಎಫ್ ಸಿಬ್ಬಂದಿ, ಸೇನೆ ಪ್ರವಾಹದಲ್ಲಿ ತೊಂದರಗೆ ಸಿಲುಕಿರುವ ಜನರನ್ನು ರಕ್ಷಣೆ ಮಾಡುತ್ತಿದ್ದಾರೆ.