ಕೇಂಬ್ರಿಜ್‌ನಲ್ಲಿ ಭೌತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಅಂತ್ಯಕ್ರಿಯೆ

0
28

ಖ್ಯಾತ ಭೌತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಅವರ ಅಂತ್ಯಕ್ರಿಯೆ ವಿಧಿವಿಧಾನ 2018 ರ ಮಾರ್ಚ್ 31 ರ ಶನಿವಾರ ಕೇಂಬ್ರಿಜ್‌ ಯೂನಿವರ್ಸಿಟಿ ಕಾಲೇಜಿನ ಸಮೀಪದ ಚರ್ಚ್‌ನಲ್ಲಿ ನಡೆಯಿತು. ಮಾರ್ಚ್‌ 14ರಂದು ಕೇಂಬ್ರಿಜ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸ್ಟೀಫನ್‌ (76) ಅವರು ಕೊನೆಯುಸಿರೆಳೆದಿದ್ದರು.

ಲಂಡನ್‌: ಖ್ಯಾತ ಭೌತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಅವರ ಅಂತ್ಯಕ್ರಿಯೆ ವಿಧಿವಿಧಾನ 2018 ಮಾರ್ಚ್ 31 ರ ಶನಿವಾರ ಕೇಂಬ್ರಿಜ್‌ ಯೂನಿವರ್ಸಿಟಿ ಕಾಲೇಜಿನ ಸಮೀಪದ ಚರ್ಚ್‌ನಲ್ಲಿ ನಡೆಯಿತು. 2018 ಮಾರ್ಚ್‌ 14 ರಂದು ಕೇಂಬ್ರಿಜ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸ್ಟೀಫನ್‌ (76) ಅವರು ಕೊನೆಯುಸಿರೆಳೆದಿದ್ದರು.

‘ತಂದೆ ಅತಿಯಾಗಿ ಪ್ರೀತಿಸಿದ ಸ್ಥಳವಾದ ಕೇಂಬ್ರಿಜ್‌ನಲ್ಲೇ ಅಂತ್ಯಸಂಸ್ಕಾರ ನಡೆಸುವ ನಿರ್ಧಾರ ಕೈಗೊಳ್ಳಲಾಯಿತು’ ಎಂದು ಸ್ಟೀಫನ್‌ ಮಕ್ಕಳಾದ ಲೂಸಿ, ರಾಬರ್ಟ್‌ ಹಾಗೂ ಟಿಮ್‌ ಹಾಕಿಂಗ್‌ ತಿಳಿಸಿದರು.

ಗಾನ್‌ವಿಲ್ಲೆ ಹಾಗೂ ಕೈಯುಸ್‌ ಕಾಲೇಜಿನ ಆರುಮಂದಿ ದ್ವಾರಪಾಲಕರು ಹಾಕಿಂಗ್‌ ಮೃತದೇಹವಿದ್ದ ಪೆಟ್ಟಿಗೆಯನ್ನು ಹೊತ್ತುತಂದರು.