ಕೇಂದ್ರ ಸರ್ಕಾರ : ಮಾಜಿ ರಾಷ್ಟ್ರಪತಿಗೆ ₹1 ಲಕ್ಷ ಕಚೇರಿ ವೆಚ್ಚ

0
16

ಕಚೇರಿ ವೆಚ್ಚದ ರೂಪದಲ್ಲಿ ಮಾಜಿ ರಾಷ್ಟ್ರಪತಿಗೆ ₹1 ಲಕ್ಷ ಮತ್ತು ಮಾಜಿ ಉಪರಾಷ್ಟ್ರಪತಿಗೆ ವಾರ್ಷಿಕ ₹90 ಸಾವಿರ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ನವದೆಹಲಿ: ಕಚೇರಿ ವೆಚ್ಚದ ರೂಪದಲ್ಲಿ ಮಾಜಿ ರಾಷ್ಟ್ರಪತಿಗೆ 1 ಲಕ್ಷ ಮತ್ತು ಮಾಜಿ ಉಪರಾಷ್ಟ್ರಪತಿಗೆ ವಾರ್ಷಿಕ 90 ಸಾವಿರ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ರಾಷ್ಟ್ರಪತಿಗಳ ಪಿಂಚಣಿ ನಿಯಮ– 1956 ಮತ್ತು ಉಪರಾಷ್ಟ್ರಪತಿಗಳ ವಸತಿ ಮತ್ತು ಇತರ ಸೌಲಭ್ಯಗಳ ನಿಯಮ –1999 ತಿದ್ದುಪಡಿ ಮಾಡಿ ಈ ಹೊಸ ಸೌಲಭ್ಯವನ್ನು ಕಲ್ಪಿಸಲು ಸರ್ಕಾರ ಮುಂದಾಗಿದೆ.

ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಅವರ ಪ್ರತಿ ತಿಂಗಳ ಸಂಬಳವನ್ನು ಕ್ರಮವಾಗಿ 5 ಲಕ್ಷ ಮತ್ತು 4 ಲಕ್ಷಕ್ಕೆ ನಾಲ್ಕು ತಿಂಗಳ ಹಿಂದೆ ಹೆಚ್ಚಿಸಲಾಗಿತ್ತು. ರಾಜ್ಯಪಾಲರ ಸಂಬಳವನ್ನು ಸಹ ಪ್ರತಿ ತಿಂಗಳು 3.5 ಲಕ್ಷಕ್ಕೆ ಹೆಚ್ಚಿಸಲಾಗಿತ್ತು.

ನಿಧನರಾಗಿರುವ ರಾಷ್ಟ್ರಪತಿ ಅವರ ಪತ್ನಿಗೆ ನೆರವು ನೀಡಲು ಸಿಬ್ಬಂದಿ ನಿಯೋಜಿಸಲು ಸಹ ನಿರ್ಧರಿಸಲಾಗಿದೆ. ಇವರಿಗಾಗಿಯೇ ಒಬ್ಬ ಆಪ್ತ ಕಾರ್ಯದರ್ಶಿ ಮತ್ತು ಜವಾನ ಅವರನ್ನು ನೇಮಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ ಪ್ರತೀ ಹಣಕಾಸು ವರ್ಷದಲ್ಲಿ 20 ಸಾವಿರಕ್ಕೂ ಮೀರದಂತೆ, ಕಚೇರಿ ವೆಚ್ಚ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.