ಕೇಂದ್ರ ಸರ್ಕಾರ : ಎಲ್‌ಟಿಟಿಇ ಮೇಲಿನ ನಿಷೇಧ ವಿಸ್ತರಣೆ

0
12

ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆಗೆ ಕಾರಣವಾದ ಉಗ್ರ ಸಂಘಟನೆ ಲಿಬರೇಷನ್‌ ಟೈಗರ್ಸ್‌ ಆಫ್‌ ತಮಿಳ್‌ ಈಳಂ (ಎಲ್‌ಟಿಟಿಇ) ಸಂಘಟನೆ ಮೇಲಿನ ನಿಷೇಧವನ್ನು ಕೇಂದ್ರ ಸರ್ಕಾರ ಮತ್ತೆ ಐದು ವರ್ಷಗಳವರೆಗೆ ವಿಸ್ತರಿಸಿದೆ.

ನವದೆಹಲಿ (ಪಿಟಿಐ): ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆಗೆ ಕಾರಣವಾದ ಉಗ್ರ ಸಂಘಟನೆ ಲಿಬರೇಷನ್‌ ಟೈಗರ್ಸ್‌ ಆಫ್‌ ತಮಿಳ್‌ ಈಳಂ (ಎಲ್‌ಟಿಟಿಇ) ಸಂಘಟನೆ ಮೇಲಿನ ನಿಷೇಧವನ್ನು ಕೇಂದ್ರ ಸರ್ಕಾರ ಮತ್ತೆ ಐದು ವರ್ಷಗಳವರೆಗೆ ವಿಸ್ತರಿಸಿದೆ.

ಯಾವ ಕಾಯ್ದೆ ಅಡಿ ನಿಷೇದ :  ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ– 1967ರ ಅಡಿಯಲ್ಲಿ ನಿಷೇಧ ವಿಸ್ತರಿಸಿರುವುದಾಗಿ ಗೃಹ ಸಚಿವಾಲಯ ಮಂಗಳವಾರ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಿದೆ.

ಯಾವ ವರ್ಷ ಮಾಜಿ ಪ್ರಧಾನಿ ಯವರ ಹತ್ಯೆ :  1991ರಲ್ಲಿ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆಯಾದ ಬಳಿಕ ಎಲ್‌ಟಿಟಿಇ ಸಂಘಟನೆಯನ್ನು ಭಾರತ ನಿಷೇಧಿಸಿತ್ತು. ಈ ನಿಷೇಧವನ್ನು 2014ರಲ್ಲಿ ಐದು ವರ್ಷಗಳವರೆಗೆ ವಿಸ್ತರಿಸಲಾಗಿತ್ತು.

ಯಾವ ದೇಶದ ಉಗ್ರ ಸಂಘಟನೆ :  ಶ್ರೀಲಂಕಾ ಮೂಲದ ಈ ಉಗ್ರ ಸಂಘಟನೆಗೆ 1976ರಿಂದ ಭಾರತದಲ್ಲಿ ಬೆಂಬಲಿಗರು, ಸಹಾನುಭೂತಿ ಹೊಂದಿರುವವರು ಮತ್ತು ಏಜೆಂಟರು ಇದ್ದಾರೆ.
 
ಎಲ್‌ಟಿಟಿಇ ಸಂಘಟನೆಯ ಪ್ರಮುಖ ಉದ್ದೇಶ :   ‘ಎಲ್ಲ ತಮಿಳರಿಗೂ ಪ್ರತ್ಯೇಕ ತಾಯ್ನಾಡಿನ (ತಮಿಳು ಈಳಂ) ಪ್ರಮುಖ ಉದ್ದೇಶವನ್ನು ಈ ಸಂಘಟನೆ ಹೊಂದಿದೆ. ಇದು ಭಾರತದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಏಕತೆಗೆ ಬೆದರಿಕೆಯೊಡ್ಡುತ್ತದೆ. ಹಾಗಾಗಿ ಈ ಸಂಘಟನೆ  ಕಾನೂನುಬಾಹಿರ ಚಟುವಟಿಕೆಗಳ ವ್ಯಾಪ್ತಿಯಲ್ಲಿ ಬರುತ್ತದೆ’ ಎಂದು ಅಧಿಸೂಚನೆ ಹೇಳಿದೆ.

ಶ್ರೀಲಂಕಾದಲ್ಲಿ ಮೇ 2009ರಲ್ಲಿ ಮಿಲಿಟರಿ ಸೋಲಿನ ನಂತರವೂ ಎಲ್‌ಟಿಟಿಇ ‘ಈಳಂ’ ಪರಿಕಲ್ಪನೆ ಬಿಟ್ಟಿಲ್ಲ.