ಕೇಂದ್ರ ಸರ್ಕಾರ : ಎನ್‌ಡಿಎಫ್‌ ವಿದ್ಯಾರ್ಥಿವೇತನ ವ್ಯಾಪ್ತಿ ವಿಸ್ತರಣೆ; ಮೊತ್ತ ಏರಿಕೆ

0
28

ವಿಧವೆಯರು ಮತ್ತು ಹುತಾತ್ಮರಾದ ಯೋಧರ ಮಕ್ಕಳಿಗೆ ನೀಡುವ ವಿದ್ಯಾರ್ಥಿ ವೇತನದ ಮೊತ್ತವನ್ನು ಹೆಚ್ಚಿಸಿರುವುದಲ್ಲದೆ, ಅದನ್ನು ನಕ್ಸಲರ ದಾಳಿಯಲ್ಲಿ ಮೃತಪಟ್ಟ ರಾಜ್ಯಗಳ ಪೊಲೀಸ್‌ ಸಿಬ್ಬಂದಿ ಮಕ್ಕಳಿಗೂ ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮೋದಿ ಅವರು ಕೈಗೊಂಡ ಮೊದಲ ನಿರ್ಧಾರ
ಇದಾಗಿದೆ.

ನವದೆಹಲಿ(ಪಿಟಿಐ): ವಿಧವೆಯರು ಮತ್ತು ಹುತಾತ್ಮರಾದ ಯೋಧರ ಮಕ್ಕಳಿಗೆ ನೀಡುವ ವಿದ್ಯಾರ್ಥಿ ವೇತನದ ಮೊತ್ತವನ್ನು ಹೆಚ್ಚಿಸಿರುವುದಲ್ಲದೆ, ಅದನ್ನು ನಕ್ಸಲರ ದಾಳಿಯಲ್ಲಿ ಮೃತಪಟ್ಟ ರಾಜ್ಯಗಳ ಪೊಲೀಸ್‌ ಸಿಬ್ಬಂದಿ ಮಕ್ಕಳಿಗೂ ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮೋದಿ ಅವರು ಕೈಗೊಂಡ ಮೊದಲ ನಿರ್ಧಾರ ಇದಾಗಿದೆ.

ರಾಷ್ಟ್ರೀಯ ರಕ್ಷಣಾ ನಿಧಿಯಡಿ ವಿತರಿಸಲಾಗುವ ಈ ವಿದ್ಯಾರ್ಥಿವೇತನದ ಮೊತ್ತವನ್ನು ಬಾಲಕರಿಗೆ ಈಗಿರುವ ಮಾಸಿಕ 2,000 ದಿಂದ  2,500ಕ್ಕೆ, ಬಾಲಕಿಯರಿಗೆ ಈಗಿನ  2,250 ರಿಂದ  3,000ಕ್ಕೆ ಏರಿಸುವ ತೀರ್ಮಾನಕ್ಕೆ ಪ್ರಧಾನಿ ಮೋದಿ ಅನುಮೋದನೆ ನೀಡಿದ್ದಾರೆ. ರಾಜ್ಯ ಪೊಲೀಸರ ಕೋಟಾದಲ್ಲಿ ವಾರ್ಷಿಕ 500 ಮಕ್ಕಳನ್ನು ಈ ಪಟ್ಟಿಗೆ ಸೇರಿಸಲು ಅವಕಾಶವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರಾಷ್ಟ್ರೀಯ ರಕ್ಷಣಾ ನಿಧಿ (ಎನ್‌ಡಿಎಫ್‌) ಅನ್ನು 1962ರಲ್ಲಿ ಸ್ಥಾಪಿಸಿದ್ದು, ಇದಕ್ಕೆ ಸಾರ್ವಜನಿಕರಿಂದ ದೇಣಿಗೆ ಸ್ವೀಕರಿಸಲಾಗುತ್ತದೆ. ಪ್ರಧಾನಿ ಅಧ್ಯಕ್ಷತೆಯ ಸಮಿತಿಯು ಇದರ ನಿರ್ವಹಣೆ ಮಾಡುತ್ತದೆ. ರಕ್ಷಣೆ, ಹಣಕಾಸು ಮತ್ತು ಗೃಹ ಸಚಿವರು ಸಮಿತಿಯ ಸದಸ್ಯರಾಗಿರುತ್ತಾರೆ.