ಕೇಂದ್ರ ಸರ್ಕಾರಿ ನೌಕರರು ವಿದ್ಯಾರ್ಹತೆ ಹೆಚ್ಚಿಸಿಕೊಂಡರೆ ನೀಡಲಾಗುವ ವ ಪ್ರೋತ್ಸಾಹಧನ 5 ಪಟ್ಟು ಹೆಚ್ಚಳ

0
1030

ಕೇಂದ್ರ ಸರಕಾರಿ ಉದ್ಯೋಗಿಗಳು ತಮ್ಮ ವಿದ್ಯಾರ್ಹತೆಯನ್ನು ಹೆಚ್ಚಿಸಿಕೊಂಡರೆ ನೀಡಲಾಗುವ ಪ್ರೋತ್ಸಾಹಧವನ್ನು ಐದು ಪಟ್ಟು ಹೆಚ್ಚಿಸಲಾಗಿದೆ. ಅಂದರೆ, ಯಾವುದೇ ಹೆಚ್ಚುವರಿ ಡಿಗ್ರಿ ಪಡೆದರೆ ಕನಿಷ್ಠ 10,000 ರೂ.ಗಳಿಂದ 30000 ರೂ. ಪ್ರೋತ್ಸಾಹಧನ ದೊರೆಯಲಿದೆ.

ಹೊಸದಿಲ್ಲಿ: ಕೇಂದ್ರ ಸರಕಾರಿ ಉದ್ಯೋಗಿಗಳು ತಮ್ಮ ವಿದ್ಯಾರ್ಹತೆಯನ್ನು ಹೆಚ್ಚಿಸಿಕೊಂಡರೆ ನೀಡಲಾಗುವ ಪ್ರೋತ್ಸಾಹಧವನ್ನು ಐದು ಪಟ್ಟು ಹೆಚ್ಚಿಸಲಾಗಿದೆ. ಅಂದರೆ, ಯಾವುದೇ ಹೆಚ್ಚುವರಿ ಡಿಗ್ರಿ ಪಡೆದರೆ ಕನಿಷ್ಠ 10,000 ರೂ.ಗಳಿಂದ 30000 ರೂ. ಪ್ರೋತ್ಸಾಹಧನ ದೊರೆಯಲಿದೆ. 

ಸಿಬ್ಬಂದಿ ಇಲಾಖೆಯು 20 ವರ್ಷ ಹಿಂದಿನ ನಿಯಮಾವಳಿಯನ್ನು ಬದಲಾಯಿಸಿ ಹೊಸ ಮೊತ್ತವನ್ನು ನಿಗದಿಪಡಿಸಿದೆ. ಈ ಹಿಂದೆ, ಸೇವೆಗೆ ಸೇರ್ಪಡೆಗೊಂಡ ಬಳಿಕ ಪಡೆಯುವ ಹೆಚ್ಚುವರಿ ವಿದ್ಯಾರ್ಹತೆಗೆ 2000 ರೂ.ನಿಂದ 10000 ರೂ.ವರೆಗೆ ಏಕಗಂಟಿನ ಪ್ರೋತ್ಸಾಹಧನ ನೀಡಲಾಗುತ್ತಿತ್ತು. 

ದೇಶದಲ್ಲಿರುವ ಕೇಂದ್ರ ಸರಕಾರಿ ನೌಕರರು : 48.41 ಲಕ್ಷ 

ಉದ್ಯೋಗ ಸಂಬಂಧಿ ಶಿಕ್ಷಣಕ್ಕೆ ಮಾತ್ರ ಅನ್ವಯ 

* ಮಾಡುತ್ತಿರುವ ಉದ್ಯೋಗ ಅಥವಾ ಮೇಲಿನ ಹುದ್ದೆಗೆ ಅನುಕೂಲವಾಗುವ ಶಿಕ್ಷಣ ಪಡೆದರೆ ಮಾತ್ರ ಪ್ರೋತ್ಸಾಹಧನ ಸಿಗುತ್ತದೆ. 

* ಕೇವಲ ಶೈಕ್ಷಣಿಕ ಅಧ್ಯಯನದ ಉದ್ದೇಶ ಮತ್ತು ಸಾಹಿತ್ಯದ ವಿಷಯಗಳಿಗೆ ಪ್ರೋತ್ಸಾಹಧನ ಅನ್ವಯವಿಲ್ಲ. 

* ಸರಕಾರ ಪ್ರಾಯೋಜಿತ ಅಧ್ಯಯನ ಇಲ್ಲವೇ, ಹೆಚ್ಚಿನ ವಿದ್ಯಾರ್ಹತೆಗಾಗಿ ರಜಾ ಸೌಲಭ್ಯ ಪಡೆದಿದ್ದರೆ ಪ್ರೋತ್ಸಾಹಧನವಿಲ್ಲ. 

* ವೃತ್ತಿಬದುಕಿನಲ್ಲಿ ಎರಡು ಬಾರಿ ಮಾತ್ರ ಲಭ್ಯ. 

* ಒಂದು ಪ್ರೋತ್ಸಾಹಧನ ಪಡೆದು ಎರಡು ವರ್ಷದ ಬಳಿಕವಷ್ಟೇ ಇನ್ನೊಂದು. 


ಯಾವ ಡಿಗ್ರಿಗೆ ಎಷ್ಟು? 

 
 3 ವರ್ಷದೊಳಗಿನ ಡಿಗ್ರಿ/ಡಿಪ್ಲೊಮಾ 10,000 ರೂ. 

3 ವರ್ಷ ಮೀರಿದ ಡಿಗ್ರಿ/ಡಿಪ್ಲೊಮಾ 15,000 ರೂ. 

1 ವರ್ಷದೊಳಗಿನ ಪಿಜಿ/ಡಿಪ್ಲೊಮಾ 20,000 ರೂ. 

1 ವರ್ಷ ಮೀರಿದ ಪಿಜಿ/ಡಿಪ್ಲೊಮಾ 25,000 ರೂ. 

ಪಿಎಚ್‌ಡಿ/ಸಮಾನ ಪದವಿ ಪಡೆದರೆ 30,000 ರೂ.