ಕೇಂದ್ರ ಸಚಿವ, ಬಿಜೆಪಿ ಹಿರಿಯ ನಾಯಕ ಎಚ್‌.ಎನ್‌ ಅನಂತಕುಮಾರ್‌ ವಿಧಿವಶ

0
615

ಕರ್ನಾಟಕ ಬಿಜೆಪಿಯ ಹಿರಿಯ ನಾಯಕ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಎಚ್‌.ಎನ್‌. ಅನಂತಕುಮಾರ್‌ (59) ನಿಧನರಾದರು.

ಸಕಲ ಸರಕಾರಿ ಗೌರವದೊಂದಿಗೆ ಅನಂತ್ ಅಂತ್ಯಕ್ರಿಯೆ ನಾಳೆ

ಬೆಂಗಳೂರು: ಕರ್ನಾಟಕ ಬಿಜೆಪಿಯ ಹಿರಿಯ ನಾಯಕ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಎಚ್‌.ಎನ್‌. ಅನಂತಕುಮಾರ್‌ (59) ನಿಧನರಾದರು. 

ಕಳೆದ ಕೆಲವು ದಿನಗಳಿಂದ ಅನಂತಕುಮಾರ್‌ ಅವರು ತೀವ್ರ ಅಸ್ವಸ್ಥರಾಗಿದ್ದರು. ಇತ್ತೀಚೆಗೆ ತೀವ್ರ ಅನಾರೋಗ್ಯಪೀಡಿತರಾಗಿದ್ದ ಅನಂತಕುಮಾರ್‌ ಅವರನ್ನು ಕಳೆದ ಎರಡು ದಿನಗಳಿಂದ ವೆಂಟಿಲೇಟರ್‌ನಲ್ಲಿ ಇಡಲಾಗಿತ್ತು. 

ನವೆಂಬರ್ 12 ರ ಸೋಮವಾರ ನಸುಕಿನ ಜಾವ ಎರಡು ಗಂಟೆ ಸುಮಾರಿಗೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಕುಟುಂಬ ಮೂಲಗಳು ತಿಳಿಸಿವೆ. 

ಅನಂತಕುಮಾರ್‌ ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. 

ಸಕಲ ಸರಕಾರಿ ಗೌರವದೊಂದಿಗೆ ಅನಂತ್ ಅಂತ್ಯಕ್ರಿಯೆ ನಾಳೆ
ಬೆಳಗ್ಗೆ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ನಂತರ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ. 

ಜುಲೈ 22, 1959ರಂದು ಜನಿಸಿದ ಅನಂತಕುಮಾರ್‌ ಅವರು ಕೇಂದ್ರ ಬಿಜೆಪಿಯಲ್ಲಿ ಪ್ರಭಾವಿ ನಾಯಕರಾಗಿದ್ದರು. ಬಿಎ, ಎಲ್‌ಎಲ್‌ಎಂ ಪದವಿ ಪಡೆದಿದ್ದ ಅನಂತಕುಮಾರ್‌ ಕೇಂದ್ರದಲ್ಲಿ ಹಲವು ಬಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. 
ನಾರಾಯಣಶಾಸ್ತ್ರಿ, ಗಿರಿಜಾ ದಂಪತಿಯ ಪುತ್ರರಾಗಿದ್ದ ಅನಂತಕುಮಾರ್‌, ವಿದ್ಯಾರ್ಥಿ ಜೀವನದಿಂದಲೇ ಸಂಘಟನೆಯ ಹೋರಾಟ ಮೈಗೂಡಿಸಿಕೊಂಡಿದ್ದರು. 
ರಾಜ್ಯ ಬಿಜೆಪಿಯಿಂದ ರಾಷ್ಟ್ರ ರಾಜಕಾರಣಕ್ಕೆ ತೆರಳಿ ಸಾಕಷ್ಟು ಪ್ರಭಾವ ಹೊಂದಿದ್ದರು. ಅದಮ್ಯ ಚೇತನದಿಂದ ‘ಅನಂತ’ದ ಕಡೆಗೆ ಸಾಗಿದ ಅನಂತಕುಮಾರ್‌ 
ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನ ಅನಂತಕುಮಾರ್‌ ಅವರಿಗೆ ಕ್ಯಾನ್ಸರ್‌ ಇರುವುದು ಪತ್ತೆಯಾಗಿತ್ತು. ಆ ನಂತರ ಪ್ರಚಾರ ನಡೆಸಿ ಕೆಲವು ದಿನ ವಿಶ್ರಾಂತಿ ಮೊರೆ ಹೋಗಿದ್ದರು. ನಂತರ ವಿದೇಶದಲ್ಲಿ ಚಿಕಿತ್ಸೆ ಪಡೆದ ನಂತರ ಅನಂತಕುಮಾರ್‌ ಬೆಂಗಳೂರಿಗೆ ಆಗಮಿಸಿದ್ದರು. 
ಬೆಂಗಳೂರಿನ ಶಂಕರ ಕ್ಯಾನ್ಸರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಸೋಮವಾರ ನಸುಕಿನ ಜಾವ ಕೊನೆಯುಸಿರೆಳೆದರು. 

ಪ್ರಧಾನಿ ಮೋದಿ ಸೇರಿ ಅನೇಕ ಗಣ್ಯರ ಸಂತಾಪ
ಅನಂತ್‌ ನಿಧನ: ಸರಕಾರಿ ರಜೆ ಘೋಷಣೆ, ಎಲ್ಲ ವಿವಿಗಳ ಪರೀಕ್ಷೆಗಳು ಮುಂದಕ್ಕೆ
ಕೇಂದ್ರ ಸಚಿವ ಅನಂತಕುಮಾರ್ ನಿಧನಕ್ಕೆ ಮುಖ್ಯಮಂತ್ರಿ ಶೋಕ
ಜನೌಷಧಿಯ ರೂವಾರಿ; ವಿಶ್ವಸಂಸ್ಥೆಯಲ್ಲಿ ಕನ್ನಡದ ಕಹಳೆಯೂದಿದ ಸಂಸದೀಯ ಪಟು

ಈಗಾಗಲೇ ಅನಂತಕುಮಾರ್‌ ನಿವಾಸಕ್ಕೆ ಬಿಜೆಪಿ ನಾಯಕರು ಆಗಮಿಸಿದ್ದು, ಅಂತಿಮ ದರ್ಶನ ಪಡೆದರು. ಕೇಂದ್ರದ ಹಲವು ನಾಯಕರು ಮಧ್ಯಾಹ್ನ ವೇಳೆಗೆ ಆಗಮಿಸುವ ನಿರೀಕ್ಷೆ ಇದೆ.