ಕೇಂದ್ರ ಗೃಹ ಕಾರ್ಯದರ್ಶಿಯಾಗಿ ಅಜಯ್ ಕುಮಾರ್ ಭಲ್ಲ ನೇಮಕ

0
28

ಕೇಂದ್ರ ಸರ್ಕಾರ ನೂತನ ಕೇಂದ್ರ ಗೃಹ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ಅಜಯ್ ಕುಮಾರ್ ಭಲ್ಲ ಅವರನ್ನು
ಆಗಸ್ಟ್ 22 ರ ಗುರುವಾರ ನೇಮಕ ಮಾಡಿದೆ.

ನವದೆಹಲಿ: ಕೇಂದ್ರ ಸರ್ಕಾರ ನೂತನ ಕೇಂದ್ರ ಗೃಹ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ಅಜಯ್ ಕುಮಾರ್ ಭಲ್ಲ ಅವರನ್ನು ಗುರುವಾರ ನೇಮಕ ಮಾಡಿದೆ.

ಕಳೆದ ಜುಲೈ 24ರಂದು ಮಾಜಿ ಇಂಧನ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲ ಅವರನ್ನು ಕೇಂದ್ರ ಗೃಹ ಸಚಿವಾಲಯದಲ್ಲಿ ವಿಶೇಷ ಕರ್ತವ್ಯದ ಮೇಲೆ ನೇಮಕ ಮಾಡಲಾಗಿತ್ತು. ಇದೀಗ ಅಧಿಕೃತವಾಗಿ ಗೃಹ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನೇಮಕಾತಿ ಸಮಿತಿ ಇಂದು ಭಲ್ಲ ನೇಮಕಾತಿಗೆ ಒಪ್ಪಿಗೆ ಸೂಚಿಸಿದೆ.

1984ನೇ ಬ್ಯಾಚ್ ಅಸ್ಸಾಂ, ಮೇಘಾಲಯ ಕೇಡರ್ ನ ಐಎಎಸ್ ಅಧಿಕಾರಿಯಾಗಿರುವ ಭಲ್ಲ ಅವರು ಎರಡು ವರ್ಷಗಳ ಕಾಲ, ಅಂದರೆ ಆಗಸ್ಟ್ 2021ರ ವರೆಗೆ ಕೇಂದ್ರ ಗೃಹ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ರಾಜೀವ್ ಗೌಬಾ ಹಾಲಿ ಗೃಹ ಕಾರ್ಯದರ್ಶಿಯಾಗಿದ್ದು, ಆಗಸ್ಟ್ 31ಕ್ಕೆ ಅವರ ಅಧಿಕಾರವಧಿ ಪೂರ್ಣಗೊಳ್ಳಲಿದೆ. ಅವರ ಸ್ಥಾನಕ್ಕೆ ಭಲ್ಲ ಅವರನ್ನು ನೇಮಕ ಮಾಡಲಾಗಿದೆ.