ಕೇಂದ್ರದ ಜಂಟಿ ಕಾರ್ಯದರ್ಶಿ ಹುದ್ದೆಗೇರಿದ ವಿಷಯ ಪರಿಣತರು (ಐಎಎಸ್‌–ಐಪಿಎಸ್‌ ಅಧಿಕಾರಿಗಳ ಬದಲು ಖಾಸಗಿ ವಲಯದವರಿಗೆ ಮಣೆ)

0
414

ಕೇಂದ್ರ ಸರ್ಕಾರದ ಸಚಿವಾಲಯಗಳಿಗೆ ಇದೇ ಮೊದಲ ಬಾರಿ ವಿವಿಧ ಕ್ಷೇತ್ರಗಳ ಒಂಬತ್ತು ವೃತ್ತಿಪರರನ್ನು ಜಂಟಿ ಕಾರ್ಯದರ್ಶಿ
ಗಳನ್ನಾಗಿ ನೇಮಕ ಮಾಡಲಾಗಿದೆ. ಈ ಪ್ರಕ್ರಿಯೆ ಪ್ರಾರಂಭಗೊಂಡು ಹತ್ತು ತಿಂಗಳ ಬಳಿಕ ಖಾಸಗಿ ವಲಯದ ಪರಿಣತರನ್ನು ಈ ಹುದ್ದೆಗೆ ಆಯ್ಕೆ ಮಾಡಲಾಗಿದೆ.

ನವದೆಹಲಿ: ಕೇಂದ್ರ ಸರ್ಕಾರದ ಸಚಿವಾಲಯಗಳಿಗೆ ಇದೇ ಮೊದಲ ಬಾರಿ ವಿವಿಧ ಕ್ಷೇತ್ರಗಳ ಒಂಬತ್ತು ವೃತ್ತಿಪರರನ್ನು ಜಂಟಿ ಕಾರ್ಯದರ್ಶಿ
ಗಳನ್ನಾಗಿ ನೇಮಕ ಮಾಡಲಾಗಿದೆ. ಈ ಪ್ರಕ್ರಿಯೆ ಪ್ರಾರಂಭಗೊಂಡು ಹತ್ತು ತಿಂಗಳ ಬಳಿಕ ಖಾಸಗಿ ವಲಯದ ಪರಿಣತರನ್ನು ಈ ಹುದ್ದೆಗೆ ಆಯ್ಕೆ ಮಾಡಲಾಗಿದೆ.

ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣರಾದವರ ಬದಲು ಇದೇ ಮೊದಲ ಬಾರಿಗೆ ಖಾಸಗಿ ವಲಯದ ವಿಷಯ ಪರಿಣತರನ್ನು ಈ ಹುದ್ದೆಗಳಿಗೆ ಪರಿಗಣಿಸಲಾಗಿದೆ.

ಅಂಬರ್‌ ದುಬೆ (ನಾಗರಿಕ ವಿಮಾನಯಾನ ಸಚಿವಾಲಯ), ದಿನೇಶ್‌ ದಯಾನಂದ ಜಗದಾಳೆ (ನವೀನ ಮತ್ತು ನವೀಕರಿಸಬಹುದಾದ ಇಂಧನ), ಕಕೊಲೀ ಘೋಷ್‌ (ಕೃಷಿ), ಅರುಣ್‌ ಗೋಯಲ್‌ (ವಾಣಿಜ್ಯ), ರಾಜೀವ್‌ ಸಕ್ಸೇನಾ (ಆರ್ಥಿಕ ವ್ಯವಹಾರ) ಸೌರಭ್‌ ಮಿಶ್ರಾ (ಹಣಕಾಸು ಸೇವೆಗಳು), ಸುಮನ್‌ ಪ್ರಸಾದ್‌ ಸಿಂಗ್‌ (ಸಾರಿಗೆ) ಮತ್ತು ಭೂಷಣ್‌ ಕುಮಾರ್‌ (ಬಂದರು), ಸುಜಿತ್‌ಕುಮಾರ್‌ ವಾಜಪೇಯಿ (ಪರಿಸರ) ಅವರನ್ನು ಜಂಟಿ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. 

ಕಳೆದ ಜೂನ್‌ನಲ್ಲಿ ಈ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. 6,077 ಮಂದಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ, 89 ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗಿತ್ತು. ಕಂದಾಯ ಇಲಾಖೆ ಸಂದರ್ಶನ ನಡೆಸಿತ್ತು. ಗುತ್ತಿಗೆ ಆಧಾರದ ಮೇಲೆ ಈ ತಜ್ಞರು ಕಾರ್ಯನಿರ್ವಹಿಸಲಿದ್ದಾರೆ.