ಕೆವೈಸಿ ಸಲ್ಲಿಸದಿದ್ದರೆ ಸಿಲಿಂಡರ್ ಸಿಗಲ್ಲ

0
613

ಅಡುಗೆ ಅನಿಲ (ಎಲ್​ಪಿಜಿ) ಸಂಪರ್ಕ ಪಡೆದಿರುವ ಗ್ರಾಹಕರು ನ. 30ರೊಳಗೆ ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿಯಿರಿ) ಅರ್ಜಿ ಸಲ್ಲಿಸದಿದ್ದಲ್ಲಿ ಅಂಥವರಿಗೆ ಸಿಲಿಂಡರ್ ಪೂರೈಕೆ ಸ್ಥಗಿತಗೊಳ್ಳಲಿದೆ.

ನವದೆಹಲಿ: ಅಡುಗೆ ಅನಿಲ (ಎಲ್​ಪಿಜಿ) ಸಂಪರ್ಕ ಪಡೆದಿರುವ ಗ್ರಾಹಕರು ನ. 30ರೊಳಗೆ ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿಯಿರಿ) ಅರ್ಜಿ ಸಲ್ಲಿಸದಿದ್ದಲ್ಲಿ ಅಂಥವರಿಗೆ ಸಿಲಿಂಡರ್ ಪೂರೈಕೆ ಸ್ಥಗಿತಗೊಳ್ಳಲಿದೆ.

ಈ ಸಂಬಂಧ ಭಾರತ್, ಇಂಡೇನ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಂಪನಿಗಳಿಗೆ ಕೇಂದ್ರ ಸರ್ಕಾರ ಸುತ್ತೋಲೆ ಕಳುಹಿಸಿದೆ. ಎಲ್​ಪಿಜಿ ಸಬ್ಸಿಡಿ ಬಿಟ್ಟುಕೊಟ್ಟಿರುವ ಗ್ರಾಹಕರಿಂದಲೂ ಕೆವೈಸಿಯನ್ನು ಕಡ್ಡಾಯವಾಗಿ ಪಡೆಯುವಂತೆ ಸೂಚಿಸಲಾಗಿದೆ. ಎಲ್​ಪಿಜಿ ಸಬ್ಸಿಡಿ ಪಡೆಯಲು ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ವಿವರ ನೀಡಿರುವವರು ಮತ್ತು ಸ್ವಯಂಪ್ರೇರಿತವಾಗಿ ಸಬ್ಸಿಡಿ ತ್ಯಜಿಸಿರುವ ಲಕ್ಷಾಂತರ ಗ್ರಾಹಕರು ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿಲ್ಲ. ಇಂಥವರಿಂದ ಕೆವೈಸಿ ಪಡೆಯುವಂತೆ ಸರ್ಕಾರ ಈ ಸುತ್ತೋಲೆ ಹೊರಡಿಸಿದೆ. ಫೋಟೋ ಗುರುತಿನ ಚೀಟಿ, ಗ್ರಾಹಕರ ಸಿಲಿಂಡರ್ ಸಂಖ್ಯೆ, ಆಧಾರ್, ಡ್ರೖೆವಿಂಗ್ ಲೈಸೆನ್ಸ್, ಬಾಡಿಗೆ ಕ್ರಯಪತ್ರ, ವೋಟರ್ ಐಡಿ, ವಿದ್ಯುತ್ ಬಿಲ್, ಪಾಸ್​ಪೋರ್ಟ್, ಪಡಿತರ ಕಾರ್ಡ್, ಮನೆ ನೋಂದಣಿ ದಾಖಲೆ, ಎಲ್​ಐಸಿ ಪಾಲಿಸಿ, ಬ್ಯಾಂಕ್ ಅಥವಾ ಕ್ರೆಡಿಟ್ ಕಾರ್ಡ್​ಗಳ ಪೈಕಿ ಯಾವ ದಾಖಲೆಗಳನ್ನಾದರೂ ಕೆವೈಸಿ ಅಡಿ ಗ್ರಾಹಕರು ಸಲ್ಲಿಸಬಹುದಾಗಿದೆ.