ಕೆನರಾ ಬ್ಯಾಂಕ್‌ ಅವಧಿ ಠೇವಣಿ ಬಡ್ಡಿ ದರ ಏರಿಕೆ

0
16

ಕೆನರಾ ಬ್ಯಾಂಕ್‌, ಒಂದು ವರ್ಷಕ್ಕಿಂತ ಹೆಚ್ಚಿನ ಮತ್ತು 2 ವರ್ಷಗಳ ಒಳಗಿನ ಅವಧಿಯ ₹ 1 ಕೋಟಿಗಿಂತ ಕಡಿಮೆ ಮೊತ್ತದ ಠೇವಣಿಗಳ ಮೇಲಿನ ಬಡ್ಡಿ ದರ ಪರಿಷ್ಕರಿಸಿದೆ.

ಬೆಂಗಳೂರು: ಕೆನರಾ ಬ್ಯಾಂಕ್‌, ಒಂದು ವರ್ಷಕ್ಕಿಂತ ಹೆಚ್ಚಿನ ಮತ್ತು 2 ವರ್ಷಗಳ ಒಳಗಿನ ಅವಧಿಯ  1 ಕೋಟಿಗಿಂತ ಕಡಿಮೆ ಮೊತ್ತದ ಠೇವಣಿಗಳ ಮೇಲಿನ ಬಡ್ಡಿ ದರ ಪರಿಷ್ಕರಿಸಿದೆ.

ಒಂದು ವರ್ಷಕ್ಕಿಂತ ಹೆಚ್ಚಿನ ಮತ್ತು ಎರಡು ವರ್ಷಗಳ ಒಳಗಿನ ಠೇವಣಿಗಳ ಬಡ್ಡಿ ದರವನ್ನು ಶೇ 7ಕ್ಕೆ ನಿಗದಿಪಡಿಸಲಾಗಿದೆ.

444 ದಿನಗಳ ಠೇವಣಿಗೆ ಶೇ 7.05 ಮತ್ತು 555 ದಿನಗಳ ಠೇವಣಿಗೆ ಶೇ 7.10ರಷ್ಟು ಬಡ್ಡಿ ದರ ನಿಗದಿಪಡಿಸಲಾಗಿದೆ.

ಹಿರಿಯ ನಾಗರಿಕರಿಗೆ ಹೆಚ್ಚುವರಿಯಾಗಿ ಶೇ 0.50ರಷ್ಟು ಬಡ್ಡಿ ನೀಡಲಾಗುವುದು ಎಂದು ಬ್ಯಾಂಕ್‌ನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.