’ಕೃಷಿ ಕೃಷಕ್‌ ಬಂಧು‘ ಯೋಜನೆ ಅಡಿಯಲ್ಲಿ ರೈತರು ಸಾವನ್ನಪ್ಪಿದರೆ, ಕುಟುಂಬ ಸದಸ್ಯರಿಗೆ ₹2 ಲಕ್ಷ ಪರಿಹಾರ

0
828

ರೈತರು ಮೃತಪಟ್ಟರೆ, ಅವರ ಕುಟುಂಬ ಸದಸ್ಯರಿಗೆ ₹2ಲಕ್ಷ ನೆರವು ನೀಡಲಾಗುವುದು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು 2018 ಡಿಸೆಂಬರ್ 31 ರ ಸೋಮವಾರ ಇಲ್ಲಿ ಘೋಷಣೆ ಮಾಡಿದರು.

ಕೋಲ್ಕತ್ತ (ಪಿಟಿಐ): ರೈತರು ಮೃತಪಟ್ಟರೆ, ಅವರ ಕುಟುಂಬ ಸದಸ್ಯರಿಗೆ 2ಲಕ್ಷ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋಮವಾರ ಇಲ್ಲಿ ಘೋಷಣೆ ಮಾಡಿದರು.

18ರಿಂದ 60 ವರ್ಷದ ಒಳಗಿನ ರೈತರು ಸಹಜ ಅಥವಾ ಅಸಹಜವಾಗಿ ಸಾವನ್ನಪ್ಪಿದರೆ, ’ಕೃಷಿ ಕೃಷಕ್‌ ಬಂಧು‘ ಯೋಜನೆ ಅಡಿಯಲ್ಲಿ ಈ ನೆರವು ನೀಡಲಾಗುತ್ತದೆ. ಜ.1ರಿಂದಲೇ ಈ ಯೋಜನೆ ಜಾರಿಗೆ ಬರಲಿದೆ‘ ಎಂದು ತಿಳಿಸಿದರು.

’ರಾಜ್ಯದಲ್ಲಿ 72 ಲಕ್ಷ ರೈತ ಕುಟುಂಬಗಳಿವೆ. ಇವರು ಸಂಕಷ್ಟಕ್ಕೆ ಸಿಲುಕದಂತೆ ಕಾಪಾಡುವುದು ನಮ್ಮ ಹೊಣೆಗಾರಿಕೆ. ಸೋಮವಾರದಿಂದ ಈ ಯೋಜನೆ ಜಾರಿಗೆ ಬರಲಿದ್ದು, ಫೆಬ್ರುವರಿಯಿಂದ ಅರ್ಜಿ ಸಲ್ಲಿಸಬಹುದಾಗಿದೆ‘ ಎಂದು ಬ್ಯಾನರ್ಜಿ ತಿಳಿಸಿದರು.

’ಇದೇ ಯೋಜನೆಯಲ್ಲಿ ಪ್ರತಿ ಎಕರೆಯಲ್ಲಿ ಒಂದು ಬೆಳೆಗೆ ಪ್ರತಿ ವರ್ಷ ಎರಡು ಸಲ 2,500 ಮೊತ್ತವನ್ನು ರೈತರಿಗೆ ನೀಡಲಾಗುತ್ತದೆ. ಈ ಯೋಜನೆ ಜಾರಿಗೆ ಕೃಷಿ ಇಲಾಖೆಗೆ ಬಜೆಟ್‌ನಲ್ಲಿ ಅನುದಾನ ನೀಡಲಾಗುವುದು‘ ಎಂದು ತಿಳಿಸಿದರು.