ಕೃತಕ ಸರೋವರ ಸೃಷ್ಟಿಸಿದ ಚೀನಾ ಭೂ ಕುಸಿತ

0
761

ಟಿಬೆಟ್‌ನಲ್ಲಿ ಗುರುವಾರ ಸಂಭವಿಸಿದ ಭೂಕುಸಿತ ಪ್ರದೇಶದ ಪ್ರಮುಖ ನದಿಯ ಹರಿವನ್ನು ತಡೆಗಟ್ಟಿ ಕೃತಕ ಸರೋವರ ಸೃಷ್ಟಿಯಾಗಿದ್ದು, ಇದರಿಂದ ನದಿಗಳ ಕೆಳ ದಂಡೆಗಳ ಮೇಲಿರುವ ಭಾರತದ ಪ್ರದೇಶಗಳಿಗೆ ಅಪಾಯ ಉಂಟಾಗಬಹುದೆಂದು ಚೀನಾದ ತುರ್ತು ಸೇವೆಗಳು ಎಚ್ಚರಿಕೆ ನೀಡಿವೆ.

# ಭೂ ಕುಸಿತದ ಬಳಿಕ ಸುಮಾರು 6,000 ಜನರನ್ನು ಸ್ಥಳಾಂತರಿಸಲಾಗಿದ್ದು, ಸಾವು- ನೋವಿನ ವರದಿಯಾಗಿಲ್ಲ. ಪರಿಸ್ಥಿತಿಯ ಬಗ್ಗೆ ಚೀನಾ ಭಾರತಕ್ಕೆ ಆಗಾಗ ಮಾಹಿತಿ ನೀಡುತ್ತಲೇ ಇದೆ. 

# ಯಾರ್ಲುಂಗ್ ತ್ಸಾಂಗ್‌ಪೋ (ಬ್ರಹ್ಮಪುತ್ರಾದ ಮೂಲ ತೊರೆ) ನದಿ ಹರಿಯುವ ಆಳವಾದ ಕಣಿವೆಯಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದ ಕುಸಿತ ಅಣೆಕಟ್ಟು-ತರಹದ ತಡೆಗೋಡೆ ಸೃಷ್ಟಿಸಿದೆ ಎಂದು ಸ್ಥಳೀಯ ತುರ್ತು ಸ್ಥಿತಿ ನಿರ್ವಹಣಾ ಕಚೇರಿ ತಿಳಿಸಿದೆ. 

# ಮೆನ್ಲಿಂಗ್ ಕೌಂಟಿ ಗ್ರಾಮದ ಬಳಿ ಕುಸಿತವಾಗಿದ್ದು ಸರೋವರದಲ್ಲಿ ನೀರಿನ ಮಟ್ಟ 40 ಮೀಟರ್ (130 ಅಡಿ) ಎತ್ತರಕ್ಕೆ ಏರಿದೆ ಎಂದು ವರದಿಯಾಗಿದೆ.