ಕೃತಕ ಗರ್ಭಧಾರಣೆಯಿಂದ ಪ್ರಪಂಚದ ಮೊದಲ ಸಿಂಹದ ಮರಿಗಳ ಜನನ

0
1373

ಮನುಷ್ಯ ಹಾಗೂ ಸಾಕು ಪ್ರಾಣಿಗಳಿಗೆ ಸೀಮಿತವಾಗಿದ್ದ ಕೃತಕ ಗರ್ಭಧಾರಣೆ ಈಗ ಸಿಂಹಗಳಿಗೆ ವಿಸ್ತರಣೆಯಾಗಿದೆ. ಹೀಗೆ ಕೃತಕ ಗರ್ಭಧಾರಣೆ ಪ್ರಕ್ರಿಯಿಂದ ವಿಶ್ವದ ಮೊದಲ ಎರಡು ಸಿಂಹದ ಮರಿಗಳು ದಕ್ಷಿಣ ಆಫ್ರಿಕಾದ ರಾಜಧಾನಿ ಪ್ರಿಟೋರಿಯಾ ಸಮೀಪದ ಸಂರಕ್ಷಣಾ ಕೇಂದ್ರದಲ್ಲಿ ಜನಿಸಿವೆ.

ಬ್ರಿಟ್ಸ್‌: ಮನುಷ್ಯ ಹಾಗೂ ಸಾಕು ಪ್ರಾಣಿಗಳಿಗೆ ಸೀಮಿತವಾಗಿದ್ದ ಕೃತಕ ಗರ್ಭಧಾರಣೆ ಈಗ ಸಿಂಹಗಳಿಗೆ ವಿಸ್ತರಣೆಯಾಗಿದೆ. ಹೀಗೆ ಕೃತಕ ಗರ್ಭಧಾರಣೆ ಪ್ರಕ್ರಿಯಿಂದ ವಿಶ್ವದ ಮೊದಲ ಎರಡು ಸಿಂಹದ ಮರಿಗಳು ದಕ್ಷಿಣ ಆಫ್ರಿಕಾದ ರಾಜಧಾನಿ ಪ್ರಿಟೋರಿಯಾ ಸಮೀಪದ ಸಂರಕ್ಷಣಾ ಕೇಂದ್ರದಲ್ಲಿ ಜನಿಸಿವೆ. 

ಆಫ್ರಿಕನ್‌ ಸಿಂಹಗಳ ಸಂತಾನೋತ್ಪತ್ತಿ ವ್ಯವಸ್ಥೆ ಕುರಿತು ಸಂಶೋಧನೆ ನಡೆಸುತ್ತಿರುವ ಪ್ರಿಟೋರಿಯಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ನಿಟ್ಟಿನಲ್ಲಿ ಸಾಧನೆ ಮಾಡಿದ್ದಾರೆ. 

ಕೃತಕ ಗರ್ಭಧಾರಣೆ ಮೂಲಕ ಎರಡು ಸಿಂಹದ ಮರಿಗಳು ಆಗಸ್ಟ್‌ 25ರಂದು ಜನಿಸಿದ್ದು, ಆರೋಗ್ಯವಾಗಿವೆ. 18 ತಿಂಗಳ ಸತತ ಶ್ರಮದ ನಂತರ ನಮ್ಮ ತಂಡ ಈ ಸಾಧನೆ ಮಾಡಿದೆ. ಇದಕ್ಕಾಗಿ ಆರೋಗ್ಯಯುತ ಗಂಡು ಸಿಂಹದಿಂದ ವೀರ್ಯವನ್ನು ಸಂಗ್ರಹಿಸಿ, ಅದನ್ನು ಸೂಕ್ತ ಸಮಯದಲ್ಲಿ ಹೆಣ್ಣು ಸಿಂಹಕ್ಕೆ ಕೃತಕವಾಗಿ ಇಂಜೆಕ್ಟ್ ಮಾಡಲಾಯಿತು. ಗರ್ಭಧಾರಣೆಯ ಕೆಲವು ತಿಂಗಳ ಸಾಮಾನ್ಯ ಪ್ರಕ್ರಿಯೆ ನಂತರ ಗಂಡು ಮತ್ತು ಹೆಣ್ಣು ಮರಿ ಸಿಂಹಗಳಿಗೆ ತಾಯಿ ಸಿಂಹ ಜನ್ಮ ನೀಡಿದೆ ಎಂದು ಪ್ರಿಟೋರಿಯಾ ವಿಶ್ವವಿದ್ಯಾಲಯದ ಸಸ್ತನಿ ಸಂಶೋಧನಾ ಸಂಸ್ಥೆಯ ನಿರ್ದೇಶಕ ಆಂಡ್ರೆ ಗೆನ್ಸ್ವಿಂಡ್‌ ತಿಳಿಸಿದ್ದಾರೆ. 

ಸಸ್ತನಿಗಳ ಸಂರಕ್ಷಣಾ ಕೇಂದ್ರದಲ್ಲಿ ಎರಡು ಸಿಂಹದ ಮರಿಗಳು ಉತ್ಸಾಹದಿಂದ ಆಟವಾಡುತ್ತಾ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.