ಕುಸ್ತಿಪಟು “ಬಜರಂಗ್‌ ಪುನಿಯಾ”ಗೆ ಜಿಂದಾಲ್‌ ನೆರವು

0
621

ಏಷ್ಯನ್‌ ಹಾಗೂ ಕಾಮನ್‌ವೆಲ್ತ್‌ ಕ್ರೀಡಾಕೂಟಗಳಲ್ಲಿ ಚಿನ್ನದ ಸಾಧನೆ ಮಾಡಿದ್ದ ಕುಸ್ತಿಪಟು ಬಜರಂಗ್‌ ಪುನಿಯಾ ಅವರು ಜಿಂದಾಲ್ ಸ್ಟೀಲ್‌ ವರ್ಕ್ಸ್‌ (ಜೆಎಸ್‌ಡಬ್ಲ್ಯು)ಸ್ಪೋರ್ಟ್ಸ್‌ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.

ನವದೆಹಲಿ (ಪಿಟಿಐ): ಏಷ್ಯನ್‌ ಹಾಗೂ ಕಾಮನ್‌ವೆಲ್ತ್‌ ಕ್ರೀಡಾಕೂಟಗಳಲ್ಲಿ ಚಿನ್ನದ ಸಾಧನೆ ಮಾಡಿದ್ದ ಕುಸ್ತಿಪಟು ಬಜರಂಗ್‌ ಪುನಿಯಾ ಅವರು ಜಿಂದಾಲ್ ಸ್ಟೀಲ್‌ ವರ್ಕ್ಸ್‌ (ಜೆಎಸ್‌ಡಬ್ಲ್ಯು)ಸ್ಪೋರ್ಟ್ಸ್‌ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.

‘ಒಪ್ಪಂದದ ಪ್ರಕಾರ ಬಜರಂಗ್‌ ಅವರಿಗೆ ಎಲ್ಲಾ ರೀತಿಯ ನೆರವು ನೀಡಲಿದ್ದೇವೆ. ಮುಂಬರುವ ವಿಶ್ವ ಚಾಂಪಿಯನ್‌ಷಿಪ್‌ ಹಾಗೂ ಇನ್ನಿತರ ಕ್ರೀಡಾಕೂಟಗಳಿಗೆ ಅವರು ಸಿದ್ಧತೆ ಮಾಡಿಕೊಳ್ಳಲು ಸಹಕರಿಸುತ್ತೇವೆ’ ಎಂದು ಜೆಎಸ್‌ಡಬ್ಲ್ಯು ಸ್ಪೋರ್ಟ್ಸ್‌ ಸಂಸ್ಥೆಯು ತಿಳಿಸಿದೆ. 

ಈ ಸಂಸ್ಥೆಯು 2012ರಿಂದ ಸ್ಪೋರ್ಟ್ಸ್‌ ಎಕ್ಸಲೆನ್ಸ್‌ ಕಾರ್ಯಕ್ರಮದಡಿ 50ಕ್ಕೂ ಹೆಚ್ಚು ಭಾರತೀಯ ಅಥ್ಲೀಟ್‌ ಗಳೊಂದಿಗೆ ಈ ಒಪ್ಪಂದ ಮಾಡಿ ಕೊಂಡಿದೆ. ಇದರಲ್ಲಿ ನೀರಜ್‌ ಚೋಪ್ರಾ, ಸಾಕ್ಷಿ ಮಲಿಕ್‌, ನಿಖತ್‌ ಜರೀನ್‌ ಹಾಗೂ ಎಂ. ಶ್ರೀಶಂಕರ್‌ ಅವರು ಸೇರಿದ್ದಾರೆ.