ಕುಸ್ತಿಗೆ ರಿತು ಪೋಗಟ್ ವಿದಾಯ ಎಂಎಂಎಗೆ ಸೇರ್ಪಡೆ

0
410

ಖ್ಯಾತ ಕುಸ್ತಿ ಕೋಚ್ ಮಹಾವೀರ್ ಸಿಂಗ್ ಪೋಗಟ್​ರ 3ನೇ ಪುತ್ರಿ ರೆಸ್ಲರ್ ರಿತು ಪೋಗಟ್ ಸೋಮವಾರ ಅಚ್ಚರಿಯ ನಿರ್ಧಾರ ಪ್ರಕಟಿಸಿದ್ದು, ಕುಸ್ತಿ ಕ್ರೀಡೆಗೆ ವಿದಾಯ ಪ್ರಕಟಿಸಿ ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ (ಎಂಎಂಎ) ಸೇರಿಕೊಳ್ಳುವ ತೀರ್ಮಾನ ಕೈಗೊಂಡಿದ್ದಾರೆ.

ನವದೆಹಲಿ: ಖ್ಯಾತ ಕುಸ್ತಿ ಕೋಚ್ ಮಹಾವೀರ್ ಸಿಂಗ್ ಪೋಗಟ್​ರ 3ನೇ ಪುತ್ರಿ ರೆಸ್ಲರ್ ರಿತು ಪೋಗಟ್ ಸೋಮವಾರ ಅಚ್ಚರಿಯ ನಿರ್ಧಾರ ಪ್ರಕಟಿಸಿದ್ದು, ಕುಸ್ತಿ ಕ್ರೀಡೆಗೆ ವಿದಾಯ ಪ್ರಕಟಿಸಿ ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ (ಎಂಎಂಎ) ಸೇರಿಕೊಳ್ಳುವ ತೀರ್ಮಾನ ಕೈಗೊಂಡಿದ್ದಾರೆ.

ಅದರೊಂದಿಗೆ ಕುಸ್ತಿಯಲ್ಲಿನ ಅಮೋಘ ವೃತ್ತಿಜೀವನವನ್ನು ಕಳೆದುಕೊಂಡಿದ್ದಾರೆ. ಪೋಗಟ್ ಸಹೋದರಿಯರಾದ ಗೀತಾ, ಬಬಿತಾ, ರಿತು ಹಾಗೂ ಸಂಗೀತಾರ ಪೈಕಿ 24 ವರ್ಷದ ರಿತು 3ನೆಯವರು. ಕಳೆದ ವರ್ಷ ಪೋಲೆಂಡ್​ನಲ್ಲಿ ನಡೆದ 23 ವಯೋಮಿತಿ ವಿಶ್ವ ಕುಸ್ತಿ ಚಾಂಪಿಯನ್​ಷಿಪ್​ನ 48 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದರು.

ಸಿಂಗಾಪುರ ಮೂಲದ ಎವೋಲ್ವ್ ಫೈಟ್ ಟೀಮ್​ನ್ನು ರಿತು ಸೇರಿಕೊಳ್ಳ ಲಿದ್ದಾರೆ. ‘ಹೊಸ ಪ್ರಯಾಣ ವನ್ನು ಆರಂಭಿಸುವ ಬಗ್ಗೆ ಉತ್ಸುಕಳಾಗಿದ್ದೇನೆ. ಎಂಎಂಎ ಯನ್ನು ಆರಿಸಿಕೊಂಡ ಕಾರಣ ವನ್ನೂ ತಿಳಿಸುತ್ತೇನೆ. ಎಂಎಂಎ ವಿಶ್ವ ಚಾಂಪಿಯನ್ ಆದ ಮೊದಲ ಭಾರತೀಯ ಎನಿಸಿಕೊಳ್ಳುವ ಆಸೆ ನನಗಿದೆ’ ಎಂದು ಸಿಂಗಾಪುರದಿಂದಲೇ ಸುದ್ದಿಸಂಸ್ಥೆ ಯೊಂದಿಗೆ ಮಾತನಾಡಿದ್ದಾರೆ. ಈಕೆಯ ನಿರ್ಧಾರ ಡಬ್ಲ್ಯುಎಫ್​ಐನ ಅಚ್ಚರಿಗೆ ಕಾರಣ ವಾಗಿದೆ. ಈ ಕುರಿತಾಗಿ ಒಂದು ಸ್ವಲ್ಪವೂ ಮಾಹಿತಿ ನಮಗೆ ಇರಲಿಲ್ಲ ಎಂದು ತಿಳಿಸಿದೆ.

ಒಲಿಂಪಿಕ್ಸ್​ನಿಂದ ಔಟ್

ಈ ನಿರ್ಧಾರದಿಂದಾಗಿ ರಿತು 2020ರ ಟೋಕಿಯೋ ಒಲಿಂಪಿಕ್ಸ್ ಸ್ಪರ್ಧೆಯ ಅವಕಾಶವನ್ನು ಕಳೆದು ಕೊಳ್ಳಲಿದ್ದಾರೆ. ‘ಆಕೆಯ ನಿರ್ಧಾರ ಆಘಾತ ತಂಡಿದೆ. ಎಂಎಂಎಗೆ ಹೋಗಬೇಕು ಎಂದು ನಿರ್ಧಾರ ಮಾಡಿದಲ್ಲಿ, ಕುಸ್ತಿಯಲ್ಲಿ ಆಕೆಯ ಜೀವನ ಅಂತ್ಯ ಕಾಣಲಿದೆ. ರಿತು ಇತ್ತೀಚಿನ ಉದಯೋನ್ಮುಖ ರೆಸ್ಲರ್ ಆಗಿದ್ದರು’ ಎಂದು ಡಬ್ಲ್ಯುಎಫ್​ಐ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ತಿಳಿಸಿದ್ದಾರೆ.