ಕುಲ್‌ದೀಪ್ ಚೊಚ್ಚಲ 5 ವಿಕೆಟ್ ಸಾಧನೆ

0
19

ಇಂಗ್ಲೆಂಡ್ ವಿರುದ್ಧದ ಟ್ವೆಂಟಿ-20 ಪಂದ್ಯದಲ್ಲಿ ಐದು ವಿಕೆಟುಗಳನ್ನು ಕಬಳಿಸಿರುವ ಕುಲ್‌ದೀಪ್ ಯಾದವ್, ಟೀಮ್ ಇಂಡಿಯಾ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಮ್ಯಾಂಚೆಸ್ಟರ್: ಜುಲೈ 3 ರಂದು ನಡೆದ ಇಂಗ್ಲೆಂಡ್ ವಿರುದ್ಧದ ಟ್ವೆಂಟಿ-20 ಪಂದ್ಯದಲ್ಲಿ ಐದು ವಿಕೆಟುಗಳನ್ನು ಕಬಳಿಸಿರುವ ಕುಲದೀಪ್ ಯಾದವ್, ಟೀಮ್ ಇಂಡಿಯಾ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. 

ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ ಕೇವಲ 24 ರನ್ ಮಾತ್ರ ಬಿಟ್ಟುಕೊಟ್ಟಿರುವ ಕುಲ್‌ದೀಪ್ ಐದು ವಿಕೆಟುಗಳನ್ನು ಕಬಳಿಸಿದ್ದರು. ಪರಿಣಾಮ ಮೊದಲ ಟಿ-20ನಲ್ಲಿ ಎಂಟು ವಿಕೆಟುಗಳ ಅಂತರದ ಗೆಲುವು ದಾಖಲಿಸಿರುವ ಭಾರತ, ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ 1-0 ಅಂತರದ ಮುನ್ನಡೆ ದಾಖಲಿಸಿತ್ತು. 

ಇದು ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಕುಲ್‌ದೀಪ್ ಅವರ ಚೊಚ್ಚಲ ಐದು ವಿಕೆಟ್ ಸಾಧನೆಯಾಗಿದೆ. ಹಾಗೆಯೇ ಟ್ವೆಂಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಐದು ವಿಕೆಟುಗಳನ್ನು ಪಡೆದಿರುವ ಮೂರನೇ ಭಾರತೀಯ ಬೌಲರ್ ಎಂಬ ಗೌರವಕ್ಕೆ ಪಾತ್ರವಾಗಿದ್ದಾರೆ. 

ಅಷ್ಟೇ ಯಾಕೆ ಇಂಗ್ಲೆಂಡ್ ನೆಲದಲ್ಲಿ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಐದು ವಿಕೆಟ್ ಪಡೆದಿರುವ ಭಾರತದ ಮೊದಲ ಬೌಲರ್ ಎಂಬ ಖ್ಯಾತಿಗೂ ಕುಲ್‌ದೀಪ್ ಪಾತ್ರವಾಗಿದ್ದಾರೆ.