ಕಾರ್ಯಾಚರಣೆ ನಿಲ್ಲಿಸುವುದಾಗಿ

0
15

ರಾಜಕೀಯ ವಿಶ್ಲೇಷಣೆ ಹಾಗೂ ಚುನಾವಣಾ ಪ್ರಚಾರ ಸೇವೆ ನೀಡುವ ಕೇಂಬ್ರಿಡ್ಜ್‌ ಅನಾಲಿಟಿಕ ಖಾಸಗಿ ಸಂಸ್ಥೆ ಇನ್ನು ಮುಂದೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದಾಗಿ ಪ್ರಕಟಿಸಿದೆ.

ವಾಷಿಂಗ್ಟನ್‌: ರಾಜಕೀಯ ವಿಶ್ಲೇಷಣೆ  ಹಾಗೂ ಚುನಾವಣಾ ಪ್ರಚಾರ ಸೇವೆ ನೀಡುವ ಕೇಂಬ್ರಿಡ್ಜ್‌ ಅನಾಲಿಟಿಕ ಖಾಸಗಿ ಸಂಸ್ಥೆ ಇನ್ನು ಮುಂದೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದಾಗಿ ಪ್ರಕಟಿಸಿದೆ. 

ಅಮೆರಿಕ ಮತ್ತು ಬ್ರಿಟನ್‌ನಲ್ಲಿ ದಿವಾಳಿಯಾಗಿರುವುದಾಗಿಯೂ ಅದು ತಿಳಿಸಿದೆ. ಅಮೆರಿಕದ ಅಧ್ಯಕ್ಷಿಯ ಚುನಾವಣೆ ಸಂದರ್ಭದಲ್ಲಿ ಟ್ರಂಪ್ ಪರವಾಗಿ ಕೇಂಬ್ರಿಡ್ಜ್‌ ಅನಾಲಿಟಿಕ ಸಂಸ್ಥೆ ಕೆಲಸ ಮಾಡಿತ್ತು. ಈ ವೇಳೆ ಲಕ್ಷಾಂತರ ಫೇಸ್‌ಬುಕ್‌ ಖಾತೆದಾರರ ಮಾಹಿತಿ ಕದ್ದು ಅದನ್ನು ಚುನಾವಣೆ ಪ್ರಚಾರಕ್ಕೆ ಬಳಸಿಕೊಳ್ಳಲಾಗಿತ್ತು. 

ಕಳೆದ ಮಾರ್ಚ್‌ ತಿಂಗಳಲ್ಲಿ ಭಾರತ ಸೇರಿದಂತೆ ಹಲವು ದೇಶಗಳಲ್ಲಿನ ಲಕ್ಷಾಂತರ ಫೇಸ್‌ಬುಕ್‌ ಬಳಕೆದಾರರ ಮಾಹಿತಿ ಕದ್ದು ಪ್ರಕರಣ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಜನರ ವಿಶ್ವಾಸಾರ್ಹತೆ ಕಳೆದುಕೊಂಡಿರುವುದರಿಂದ ಇನ್ನು ಮುಂದೆ ಸೇವೆಯನ್ನು ಮುಂದುವರೆಸಲಾಗುವುದಿಲ್ಲ ಎಂದು ಕೇಂಬ್ರಿಡ್ಜ್‌ ಅನಾಲಿಟಿಕ ಸಂಸ್ಥೆ ತಿಳಿಸಿದೆ.

ಆದಾಗ್ಯೂ ಕೇಂಬ್ರಿಡ್ಜ್‌ ಅನಾಲಿಟಿಕ ಸಂಸ್ಥೆ ಫೇಸ್‌ಬುಕ್‌ ಬಳಕೆಯನ್ನು ಸಮರ್ಥಿಸಿಕೊಂಡಿದೆ. ರಾಜಕೀಯ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಆನ್‌ಲೈನ್‌ ಜಾಹೀರಾತಿಗೆ ಗ್ರಾಹಕರ ದತ್ತಾಂಶವನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಅದು ಹೇಳಿದೆ.