ಕಾರ್ಮಿಕ ದಿನಾಚರಣೆ : ವಿಶ್ವದಾದ್ಯಂತ ಮೊಳಗಿದ ಕಾರ್ಮಿಕರ ದನಿ

0
48

ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ಹಲವು ರಾಷ್ಟ್ರಗಳಲ್ಲಿ ರ‍್ಯಾಲಿಗಳು ನಡೆದವು. ಈ ಸಂದರ್ಭದಲ್ಲಿ ಕಾರ್ಮಿಕರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಇಸ್ತಾಂಬುಲ್‌ (ಎಪಿ): ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ಹಲವು ರಾಷ್ಟ್ರಗಳಲ್ಲಿ ರ‍್ಯಾಲಿಗಳು ನಡೆದವು.

ಈ ಸಂದರ್ಭದಲ್ಲಿ ಕಾರ್ಮಿಕರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಇಸ್ತಾಂಬುಲ್‌ನಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿ ಟಕ್ಸಿಂ ಸ್ಕ್ವೇರ್‌ ಕಡೆಗೆ ನುಗ್ಗಲು ಯತ್ನಿಸಿದ ನೂರಾರು ಕಾರ್ಮಿಕರನ್ನು ಪೊಲೀಸರು ಬಂಧಿಸಿದರು. ಕಾರ್ಮಿಕರು ಪೊಲೀಸರ ವಿರುದ್ಧ ಘೋಷಣೆಗಳನ್ನು ಹಾಕಿದರು.

ಶ್ರೀಲಂಕಾದಲ್ಲಿ ಮೇ 2ರವರೆಗೆ ಬುದ್ಧ ಪೂರ್ಣಿಮೆ (ವೆಸಕ್‌) ಆಚರಣೆ ಗಳು ನಡೆಯುವ ಕಾರಣ ಮೇ ದಿನಾ ಚರಣೆ ಮುಂದೂಡುವಂತೆ ಸರ್ಕಾರ ಆದೇಶಿಸಿದೆ.

ರ‍್ಯಾಲಿಗಳನ್ನು ಹಮ್ಮಿಕೊಳ್ಳದಂತೆ ಕಾರ್ಮಿಕ ಸಂಘಟನೆಗಳಿಗೆ ಸೂಚಿಸಿತ್ತು. ಆದರೆ, ವಿವಿಧ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಕಾರ್ಯಕ್ರಮ ಆಯೋಜಿಸಿದ್ದವು.

ಫಿಲಿಪ್ಪೀನ್ಸ್‌ನ ಮನಿಲಾದಲ್ಲಿ ಗುತ್ತಿಗೆ ಉದ್ಯೋಗ ವ್ಯವಸ್ಥೆಯನ್ನು ರದ್ದುಪಡಿಸಬೇಕು ಮತ್ತು ವೇತನ ಹೆಚ್ಚಳ ಹಾಗೂ ಉದ್ಯೋಗಗಳ ಸೃಷ್ಟಿ ಸೇರಿದಂತೆ ಇತರ ಬೇಡಿಕೆಗಳನ್ನು ಮುಂದಿಟ್ಟು ಐದು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಇಲ್ಲಿನ ಅಧ್ಯಕ್ಷರ ನಿವಾಸದ ಸಮೀಪ ಪ್ರತಿಭಟನೆ ನಡೆಸಿದರು.

ದಕ್ಷಿಣ ಕೊರಿಯಾದ ಸೋಲ್‌ನಲ್ಲಿ ಕನಿಷ್ಠ ವೇತನ ಜಾರಿಗೆ ಆಗ್ರಹಿಸಿ ಹತ್ತು ಸಾವಿರಕ್ಕೂ ಹೆಚ್ಚು ಜನರು ಕಾರ್ಮಿಕ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಇಂಡೊನೇಷ್ಯಾ ಮತ್ತು ಕಾಂಬೋಡಿಯಾದಲ್ಲೂ ಪ್ರತಿಭಟನಾ ರ‍್ಯಾಲಿಗಳು ನಡೆದವು.

ಗಾರ್ಮೆಂಟ್‌ ಮಿಲ್‌ಗಳ ಕಾರ್ಮಿಕರು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಾಂಬೋಡಿಯಾ ಪ್ರಧಾನಿ ಹನ್‌ ಸನ್‌ ಅವರು ಭಾಗವಹಿಸಿದ್ದರು.