ಕಾರ್ನ್‌ ಫೆರ್‍ರಿ ವರದಿ : “ಮಹಿಳೆಯರಿಗೆ ಕಡಿಮೆ ಸಂಬಳ”

0
23

ಭಾರತವೂ ಸೇರಿದಂತೆ ವಿಶ್ವದಾದ್ಯಂತ, ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ಸರಾಸರಿ ಶೇ 16.1ರಷ್ಟು ಕಡಿಮೆ ವೇತನ ನೀಡಲಾಗುತ್ತಿದೆ ಎಂದು ಕಾರ್ನ್‌ ಫೆರ್‍ರಿವರದಿಯಲ್ಲಿ ತಿಳಿಸಲಾಗಿದೆ.

ನವದೆಹಲಿ : ಭಾರತವೂ ಸೇರಿದಂತೆ ವಿಶ್ವದಾದ್ಯಂತ, ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ಸರಾಸರಿ ಶೇ 16.1ರಷ್ಟು ಕಡಿಮೆ ವೇತನ ನೀಡಲಾಗುತ್ತಿದೆ ಎಂದು ಕಾರ್ನ್‌ ಫೆರ್‍ರಿವರದಿಯಲ್ಲಿ ತಿಳಿಸಲಾಗಿದೆ.

ವೇತನ ಪಾವತಿ ವಿಷಯದಲ್ಲಿ ಸ್ತ್ರೀ – ಪುರುಷರ ಮಧ್ಯೆ ಎಲ್ಲೆಡೆ ಅಂತರ ಇರುವುದು ನಿಜ. ಒಂದೇ ಸಂಸ್ಥೆ, ಒಂದೇ ಕೆಲಸಕ್ಕೆ ಸಂಬಂಧಿಸಿ ಹೇಳುವುದಾದರೆ, ಈ ಅಂತರದ ಪ್ರಮಾಣ ತುಂಬ ಕಡಿಮೆ ಇರುತ್ತದೆ. ಆದರೂ, ಕೆಲ ಕಂಪನಿಗಳಲ್ಲಿ ಒಂದೇ ಬಗೆಯ ಕೆಲಸಕ್ಕೂ ಮಹಿಳೆಯರಿಗೆ ಸಮಾನ ವೇತನವನ್ನು ನಿರಾಕರಿಸಲಾಗುತ್ತಿದೆ.

ಕಾರ್ನ್‌ ಫೆರ್‍ರಿ ವೇತನ ಸೂಚ್ಯಂಕದ ಪ್ರಕಾರ, ಭಾರತದಲ್ಲಿ ಸ್ತ್ರೀ – ಪುರುಷರು ಒಂದೇ ಬಗೆಯ ಕೆಲಸ ಮಾಡುವ ಕಡೆಗಳಲ್ಲಿ ವೇತನ ಅಂತರವು ಶೇ 4ರಷ್ಟಿದೆ. ಆದರೆ, ಒಂದೇ ಸಂಸ್ಥೆಯಲ್ಲಿ, ಒಂದೆ ಬಗೆಯ ಹುದ್ದೆ ನಿಭಾಯಿಸುತ್ತಿದ್ದರೆ ಈ ಅಂತರ ಶೇ 0.4ರಷ್ಟು ಮಾತ್ರ ಕಡಿಮೆ ಇದೆ. ಕೆಲವು ಸಂಸ್ಥೆಗಳಲ್ಲಿ ಈ ವ್ಯತ್ಯಾಸ ಕೇವಲ ಶೇ 0.2ರಷ್ಟು ಇದೆ. ‌ವಿವಿಧ ಬಗೆಯ ಉದ್ಯೋಗ ವಲಯಗಳಲ್ಲಿ, ಗರಿಷ್ಠ ವೇತನ ಪಡೆಯುವ ಮಹಿಳೆಯರ ಸಂಖ್ಯೆಯೂ ತುಂಬ ಕಡಿಮೆ ಪ್ರಮಾಣದಲ್ಲಿ ಇದೆ. 53 ದೇಶಗಳಲ್ಲಿನ 14 ಸಾವಿರ ಸಂಸ್ಥೆಗಳ 1.23  ಕೋಟಿ ಸಿಬ್ಬಂದಿಯ ವೇತನ ವಿವರಗಳನ್ನು ವಿಶ್ಲೇಷಿಸಿ ಈ ವರದಿ ಸಿದ್ಧಪಡಿಸಲಾಗಿದೆ.
**
ದೇಶ; ವೇತನ ತಾರತಮ್ಯ (ಶೇಕಡಾವಾರು ಪ್ರಮಾಣ)

ಬ್ರೆಜಿಲ್‌; 26.2
ಇಂಗ್ಲೆಂಡ್‌; 23.8
ಅಮೆರಿಕ; 17.6
ಜರ್ಮನಿ; 16.8
ಭಾರತ; 16.1
ಫ್ರಾನ್ಸ್‌; 14.1
ಚೀನಾ; 12.1