ಕಾಮನ್‌ವೆಲ್ತ್ ವೈಫಲ್ಯ : ಭಾರತ ಹಾಕಿ ತಂಡಗಳ ಕೋಚ್‌ ಅದಲು ಬದಲು

0
20

ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ವೈಫಲ್ಯ ಕಂಡ ಕಾರಣ ಭಾರತ ಹಾಕಿ ತಂಡದ ಕೋಚ್‌ ಶೊರ್ಡ್ ಮ್ಯಾರಿಜ್ ಅವರನ್ನು ಬದಲಿಸಲಾಗಿದೆ. ಅವರನ್ನು ಮಹಿಳಾ ತಂಡದ ಕೋಚ್ ಆಗಿ ನೇಮಿಸಿದ್ದು ಮಹಿಳೆಯರ ಕೋಚ್ ಆಗಿದ್ದ ಹರೇಂದರ್ ಸಿಂಗ್ ಅವರನ್ನು ಪುರುಷ ತಂಡಕ್ಕೆ ಕರೆಸಿಕೊಳ್ಳಲಾಗಿದೆ.

ನವದೆಹಲಿ (ಎಎಫ್‌ಪಿ): ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ವೈಫಲ್ಯ ಕಂಡ ಕಾರಣ ಭಾರತ ಹಾಕಿ ತಂಡದ ಕೋಚ್‌ ಶೊರ್ಡ್ ಮ್ಯಾರಿಜ್ ಅವರನ್ನು ಬದಲಿಸಲಾಗಿದೆ. ಅವರನ್ನು ಮಹಿಳಾ ತಂಡದ ಕೋಚ್ ಆಗಿ ನೇಮಿಸಿದ್ದು ಮಹಿಳೆಯರ ಕೋಚ್ ಆಗಿದ್ದ ಹರೇಂದರ್ ಸಿಂಗ್ ಅವರನ್ನು ಪುರುಷ ತಂಡಕ್ಕೆ ಕರೆಸಿಕೊಳ್ಳಲಾಗಿದೆ.

ಏಳು ತಿಂಗಳ ಹಿಂದೆ ರೋಲಂಟ್‌ ಓಲ್ಟಮನ್ಸ್ ಅವರನ್ನು ವಜಾ ಮಾಡಲಾಗಿತ್ತು. ಆಗ ಮಹಿಳಾ ತಂಡದ ಕೋಚ್‌ ಆಗಿದ್ದ ಶೊರ್ಡ್ ಅವರನ್ನು ಪುರುಷ ತಂಡಕ್ಕೆ ನೇಮಕ ಮಾಡಲಾಗಿತ್ತು. ಆರಂಭದಲ್ಲಿ ಅವರು ತಂಡವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸಿದ್ದರು. ಆದರೆ ಕಾಮನ್‌ವೆಲ್ತ್ ಕೂಟದ ಹಾಕಿಯಲ್ಲಿ ತಂಡಕ್ಕೆ ಕಂಚು ಗೆಲ್ಲುವುದಕ್ಕೂ ಆಗಲಿಲ್ಲ.

ಬದಲಾವಣೆಗೆ ಸಂತಸ ವ್ಯಕ್ತಪಡಿಸಿರುವ ಶೊರ್ಡ್‌ ‘ಮಹಿಳಾ ತಂಡಕ್ಕೆ ತರಬೇತಿ ನೀಡಲು ಮತ್ತೊಂದು ಅವಕಾಶ ಲಭಿಸಿರುವುದು ಖುಷಿಯ ಸಂಗತಿ. ಇಂಗ್ಲೆಂಡ್‌ನಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ತಂಡವನ್ನು ಯಶಸ್ಸಿನ ಹಾದಿಯಲ್ಲಿ ನಡೆಸಲು ಪ್ರಯತ್ನಿಸುತ್ತೇನೆ’ ಎಂದರು.

ಇದೇ ತಿಂಗಳು 13ರಂದು ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ ಏಷ್ಯನ್ ಚಾಂಪಿಯನ್‌ಷಿಪ್‌ ಶೊರ್ಡ್ ಅವರಿಗೆ ಮೊದಲ ಸವಾಲಾಗಲಿದೆ.

ಮಂಗಳವಾರದ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಹಾಕಿ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಮುಷ್ತಾಕ್‌ ಅಹಮ್ಮದ್‌ ‘ಹಾಕಿ ಕ್ರೀಡೆಯ ಒಳಿತಿಗಾಗಿ ಬದಲಾವಣೆ ಮಾಡಲಾಗಿದೆ’ ಎಂದು ಹೇಳಿದ್ದಾರೆ. ‌