ಕಾಮನ್‌ವೆಲ್ತ್ ಕ್ರೀಡಾಕೂಡ : ಮಹಿಳೆಯರ 25 ಮೀಟರ್ಸ್‌ ಏರ್‌ ಪಿಸ್ತೂಲ್ : ಹೀನಾ ಸಿಧುಗೆ ಚಿನ್ನದ ಪದಕ

0
30

ಕಾಮನ್‌ವೆಲ್ತ್‌ ಕ್ರೀಡಾಕೂಟದ ಶೂಟಿಂಗ್ ವಿಭಾಗದಲ್ಲಿ ಭಾರತದ ಹೀನಾ ಸಿಧು ಅವರು ಚಿನ್ನದ ಪದಕವನ್ನು ಕೊರಳಿಗೇರಿಸಿಕೊಳ್ಳುವ ಮೂಲಕ ಹಿಂದಿನ ದಾಖಲೆಯನ್ನು ಮುರಿದು ಹಾಕಿದ್ದಾರೆ.

ಗೋಲ್ಡ್‌ಕೋಸ್ಟ್: ಕಾಮನ್‌ವೆಲ್ತ್‌ ಕ್ರೀಡಾಕೂಟದ ಶೂಟಿಂಗ್ ವಿಭಾಗದಲ್ಲಿ ಭಾರತದ ಹೀನಾ ಸಿಧು ಅವರು ಚಿನ್ನದ ಪದಕವನ್ನು ಕೊರಳಿಗೇರಿಸಿಕೊಳ್ಳುವ ಮೂಲಕ ಹಿಂದಿನ ದಾಖಲೆಯನ್ನು ಮುರಿದು ಹಾಕಿದ್ದಾರೆ.

ಈ ಮೂಲಕ ಆರನೇ ದಿನದ ಆಟಕ್ಕೆ ಉತ್ತಮ ಶುಭಾರಂಭ ನೀಡಿದರು. ಮಹಿಳೆಯರ 25 ಮೀಟರ್ಸ್‌ ಏರ್‌ ಪಿಸ್ತೂಲ್ ವಿಭಾಗದಲ್ಲಿ ಸಾಧನೆ ಮಾಡಿರುವ ಸಿಧು ಅವರು ಒಟ್ಟು ಕಲೆಹಾಕಿದ್ದು 38 ಅಂಕಗಳು.

ಆಸ್ಟ್ರೇಲಿಯಾದ ಎಲೆನಾ ಗಾಲಿಯಾ ಗೋವಿಂಚ್(35 ಅಂಕ) ಬೆಳ್ಳಿ ಪದಕ, ಮಲೇಷಿಯಾದ ಅಲಿಯಾ ಸಜನಾ ಅಜಹರಿ (26–ಅಂಕ) ಕಂಚಿನ ಪದಕ ಪಡೆದುಕೊಂಡಿದ್ದಾರೆ.
ಇನ್ನು ಪುರುಷರ ವಿಭಾಗದ ವೇಯ್ಟ್‌ ಲಿಫ್ಟಿಂಗ್‌ನಲ್ಲಿ ಭಾರತದ ಬಾಕ್ಸರ್ ಅಮಿತ್ ಪಂಘಾಲ್  ಸೆಮಿ ಫೈನಲ್ ತಲುಪಿದ್ದಾರೆ.

ಪುರುಷರ 50 ಮೀಟರ್ಸ್‌ ಏರ್‌ ಪಿಸ್ತೂಲ್ ವಿಭಾಗದಲ್ಲಿ ಚೈನ್ ಸಿಂಗ್ ಹಾಗೂ ಗಗನ್ ನಾರಾಂಗ್ ಯಾವುದೇ ಪದಕ ಗಳಿಸದೆ ನಿರಾಸೆ ಮೂಡಿಸಿದ್ದಾರೆ.