ಕಾಂಗ್ರೆಸ್ ಹಿರಿಯ ನಾಯಕ ಜಾಫರ್ ಷರೀಫ್ ಇನ್ನಿಲ್ಲ

0
381

ಹಿರಿಯ ಕಾಂಗ್ರೆಸ್ ನಾಯಕ ಜಾಫರ್​ ಷರೀಫ್ ಇಂದು ನಿಧನರಾಗಿದ್ದಾರೆ. ಮಾಜಿ ಕೇಂದ್ರ ರೈಲ್ವೆ ಸಚಿವರಾಗಿದ್ದ ಷರೀಫ್​ ಅವರಿಗೆ 85 ವರ್ಷ ವಯಸ್ಸಾಗಿತ್ತು. ವಯೋ ಸಹಜ ಕಾಯಿಲೆಯಿಂದ ಖಾಸಗಿ ಆಸ್ಪತ್ರೆಗೆ ಸೇರಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

ಬೆಂಗಳೂರು:ಹಿರಿಯ ಕಾಂಗ್ರೆಸ್ ನಾಯಕ ಜಾಫರ್​ ಷರೀಫ್ ಇಂದು ನಿಧನರಾಗಿದ್ದಾರೆ. ಮಾಜಿ ಕೇಂದ್ರ ರೈಲ್ವೆ ಸಚಿವರಾಗಿದ್ದ ಷರೀಫ್​ ಅವರಿಗೆ 85 ವರ್ಷ ವಯಸ್ಸಾಗಿತ್ತು. ವಯೋ ಸಹಜ ಕಾಯಿಲೆಯಿಂದ ಖಾಸಗಿ ಆಸ್ಪತ್ರೆಗೆ ಸೇರಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ನವೆಂಬರ್ 25 ರ ಶನಿವಾರ ನಿಧನರಾಗಿದ್ದಾರೆ.

ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು 2 ದಿನಗಳ ಹಿಂದೆ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಷರೀಫ್ ಅವರು ಎರಡು ವರ್ಷಗಳಿಂದ ಡಯಾಲಿಸಿಸ್​ನಲ್ಲಿದ್ದರು.

ನಿಜಲಿಂಗಪ್ಪ ಅವಧಿಯಲ್ಲಿ ರಾಜಕೀಯ ಜೀವನ ಪ್ರಾರಂಭಿಸಿದ ಜಾಫರ್​ ಅವರು ಕೇಂದ್ರದ ರೈಲ್ವೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ರಾಜ್ಯಕ್ಕೆ ಹಲವು ಅಭಿವೃದ್ಧಿ ಯೋಜನೆಗಳನ್ನು ತಂದಿದ್ದರು. ಬೆಂಗಳೂರಿನ ರೈಲ್ವೆ ಗಾಲಿ, ಅಚ್ಚು ಕಾರ್ಖಾನೆ ಆರಂಭಕ್ಕೆ ಕಾರಣರಾಗಿದ್ದರು. ಜಾಫರ್​ ಅವರು ಇಂದಿರಾ ಗಾಂಧಿಗೆ ತುಂಬಾ ಆಪ್ತರಾಗಿದ್ದರು.

1999ರಲ್ಲಿ ಕಿರಿಯ ಪುತ್ರ, 2008ರಲ್ಲಿ ಪತ್ನಿ, 2009ರಲ್ಲಿ ಹಿರಿಯ ಮಗ ನಿಧನದಿಂದ ವೈಯಕ್ತಿಕ ಬದುಕಿನಲ್ಲಿ ಜಾಫರ್​ ಸಾಕಷ್ಟು ನೊಂದಿದ್ದರು.