ಕಾಂಗೋ ವೈದ್ಯ ಮುಕ್ವೆಜ್​, ಹೋರಾಟಗಾರ್ತಿ ನಾದಿಯಾ ಮುರಾದ್​ಗೆ 2018 ನೇ ನೋಬೆಲ್​ ಶಾಂತಿ ಪ್ರಶಸ್ತಿ

0
701

ಜಗತ್ತಿನಾದ್ಯಂತ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ, ಯುದ್ಧಗಳಲ್ಲಿ ಲೈಂಗಿಕ ಹಿಂಸೆಯನ್ನು ಅಸ್ತ್ರವಾಗಿ ಬಳಸಿಕೊಳ್ಳುವುದರ ವಿರುದ್ಧ ಶಾಂತಿಯಿಂದ ನಿರಂತರವಾಗಿ ಹೋರಾಡಿದ ಕಾಂಗೋ ವೈದ್ಯ ಡೇನಿಸ್​ ಮುಕ್ವೆಜ್ ಮತ್ತು ಇರಾಕಿನ ಯಝಿದಿ ಚಳವಳಿಗಾರ್ತಿ ನಾದಿಯಾ ಮುರಾದ್​ ಅವರು 2018 ರ ನೋಬೆಲ್​ ಶಾಂತಿ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.

ಓಸ್ಲೋ: ಜಗತ್ತಿನಾದ್ಯಂತ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ, ಯುದ್ಧಗಳಲ್ಲಿ ಲೈಂಗಿಕ ಹಿಂಸೆಯನ್ನು ಅಸ್ತ್ರವಾಗಿ ಬಳಸಿಕೊಳ್ಳುವುದರ ವಿರುದ್ಧ ಶಾಂತಿಯಿಂದ ನಿರಂತರವಾಗಿ ಹೋರಾಡಿದ ಕಾಂಗೋ ವೈದ್ಯ ಡೇನಿಸ್​ ಮುಕ್ವೆಜ್ ಮತ್ತು ಇರಾಕಿನ ಯಝಿದಿ ಚಳವಳಿಗಾರ್ತಿ ನಾದಿಯಾ ಮುರಾದ್​ ಅವರು 2018 ರ ನೋಬೆಲ್​ ಶಾಂತಿ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. 

ಲೈಂಗಿಕವಾಗಿ ದೌರ್ಜನ್ಯವೆಸುಗುವುದನ್ನೇ ಯುದ್ಧಾಸ್ತ್ರವನ್ನಾಗಿಸಿಕೊಂಡಿರುವುದರ ವಿರುದ್ಧ ಧ್ವನಿ ಎತ್ತಿದ್ದ ಇವರಿಬ್ಬರಿಗೆ ಈ ಬಾರಿಯ ನೋಬೆಲ್​ ಶಾಂತಿ ಪ್ರಶಸ್ತಿ ನೀಡಲು ಸಮಿತಿ ನಿರ್ಧರಿಸಿದ್ದಾಗಿ ಅಧ್ಯಕ್ಷೆ ಬೆರಿತ್​ ರೀಸ್​ ಆ್ಯಂಡ್ರಸನ್​ ನಾರ್ವೆಯ ಓಸ್ಲೋದಲ್ಲಿ ಹೇಳಿದ್ದಾರೆ. 

ಮುಕ್ವೆಜ್​ ಹಾಗೂ ನಾದಿಯಾ ಮುರಾದ್​ ಇಬ್ಬರೂ ತಮ್ಮ ಹೋರಾಟಗಳಿಗಾಗಿ ಖಾಸಗಿ ಜೀವನವನ್ನೇ ಮುಡಿಪಾಗಿಟ್ಟವರು ಎಂದು ನೊಬೆಲ್​ ಸಮಿತಿ ತಿಳಿಸಿದೆ. 

ಮುಕ್ವೆಜ್​ ಹಾಗೂ ಮುರಾದ್​ ಇಬ್ಬರೂ ಯಾವುದೇ ಘರ್ಷಣೆ ಮಧ್ಯೆ ನಡೆಯುವ ಲೈಂಗಿಕ ಹಿಂಸೆಯ ವಿರುದ್ಧ ಹೋರಾಟ ಮಾಡಿದ್ದಾರೆ. ಅಲ್ಲಿ ಯುದ್ಧಕ್ಕೂ ಮೀರಿ ನಡೆಯುವ ಶೋಷಣೆಯನ್ನು ತಡೆಯಲು ಚಳವಳಿ ನಡೆಸಿದವರಾಗಿದ್ದಾರೆ. 

ಕಾಂಗೋ ವೈದ್ಯ ಮುಕ್ವೆಜ್​ಗೆ 63 ವರ್ಷ ವಯಸ್ಸಾಗಿದ್ದು ಸುಮಾರು 20 ದಶಕಗಳಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ, ಅತ್ಯಾಚಾರಕ್ಕೆ ಒಳಪಟ್ಟ ಅನೇಕ ಮಹಿಳೆಯರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಕಾಂಗೋದ ಪೂರ್ವ ಡೆಮಾಕ್ರಟಿಕ್​ ರಿಪಬ್ಲಿಕ್​ ಯುದ್ಧದ ವೇಳೆ ಲೈಂಗಿಕವಾಗಿ ಶೋಷಣೆಗೆ ಒಳಗಾದ ಮಹಿಳೆಯರು, ಪುಟ್ಟ ಮಕ್ಕಳು, ವೃದ್ಧೆಯರು ಸೇರಿ ಸುಮಾರು 10 ಸಾವಿರ ಮಹಿಳೆಯರಿಗೆ ದಕ್ಷಿಣ ಕಿವುದ ಪಾಂಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಅವರ ಸೇವೆ ಮಾಡಿದ್ದಾರೆ. 

ಇರಾಕಿನ 25ವರ್ಷದ ಮಹಿಳೆ ಮುರಾದ್​ ಯಝಿದಿ ಸಮುದಾಯಕ್ಕೆ ಸೇರಿದವರು. 2014ರಲ್ಲಿ ಐಸಿಸ್ ಉಗ್ರರರಿಂದ ಅಪಹೃತಗೊಂಡಿದ್ದರು. ಸತತ ಮೂರು ತಿಂಗಳ ಕಾಲ ಉಗ್ರರಿಂದ ಅತ್ಯಾಚಾರಕ್ಕೆ ಒಳಪಟ್ಟಿದ್ದರು. ಕೊನೆಗೆ ಅಲ್ಲಿಂದ ಪಾರಾಗಿ ಬಂದವರು.