ಕಷ್ಟದಲ್ಲಿರುವ ಮಕ್ಕಳನ್ನು ಮಾತನಾಡಲು ಪ್ರೇರೇಪಿಸಿ :ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಸೂಚನೆ

0
435

ಮಕ್ಕಳ ತುರ್ತು ಸಹಾಯವಾಣಿಗೆ ಕರೆ ಮಾಡುವ ಮಕ್ಕಳು ಒಂದು ವೇಳೆ ಮೌನವಾಗಿದ್ದಲ್ಲಿ, ಮಾತನಾಡುವಂತೆ ಅವರನ್ನು ಪ್ರೇರೇಪಿಸಬೇಕು ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಸೂಚನೆ ನೀಡಿದೆ.

ನವದೆಹಲಿ (ಪಿಟಿಐ): ಮಕ್ಕಳ ತುರ್ತು ಸಹಾಯವಾಣಿಗೆ ಕರೆ ಮಾಡುವ ಮಕ್ಕಳು ಒಂದು ವೇಳೆ ಮೌನವಾಗಿದ್ದಲ್ಲಿ, ಮಾತನಾಡುವಂತೆ ಅವರನ್ನು ಪ್ರೇರೇಪಿಸಬೇಕು ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಸೂಚನೆ ನೀಡಿದೆ. 

ಕರೆ ಮಾಡಿದ ಮೂವರ ಪೈಕಿ ಒಂದು ಮಗು (ಸೈಲೆಂಟ್ ಅಥವಾ ಮ್ಯೂಟೆಡ್ ಕಾಲ್) ಮಾತನಾಡದೇ ಮೌನವಾಗಿತ್ತು ಎಂದು ಇತ್ತೀಚೆಗೆ ಸಹಾಯವಾಣಿ ಪ್ರತಿಷ್ಠಾನವು ವರದಿ ಮಾಡಿತ್ತು. 

 ‘ಸಹಾಯವಾಣಿಗೆ ಕರೆ ಮಾಡುವ ಮಗು ಭಯದಿಂದ ಮಾತನಾಡದೇ ಇರಬಹುದು. ತನ್ನ ಹತ್ತಿರದ ಸಂಬಂಧಿ ವಿರುದ್ಧ ದೂರು ನೀಡುವುದೋ ಬಿಡುವುದೋ ಎಂಬ ಗೊಂದಲದಲ್ಲಿ ಇರಬಹುದು. ಅಂತಹ ಮಕ್ಕಳಿಗೆ ಮಾತನಾಡಲು ಧೈರ್ಯ ತುಂಬಿ’ ಎಂದು ಸಹಾಯವಾಣಿಗೆ ನಿರ್ದೇಶನ ನೀಡಲಾಗಿದೆ.