ಕವಿ ಚನ್ನವೀರ ಕಣವಿ, ಗಾಯಕಿ ಅನುರಾಧಾಗೆ ‘ಕೆಎಸ್‌ನ’ ಪ್ರಶಸ್ತಿ

0
306

ಕಿಕ್ಕೇರಿಯ ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್‌ ನೀಡುವ, ಪ್ರಸಕ್ತ ಸಾಲಿನ ‘ಕೆಎಸ್‌ನ’ ಪ್ರಶಸ್ತಿಗೆ ಹಿರಿಯ ಕವಿ ಡಾ. ಚನ್ನವೀರ ಕಣವಿ ಮತ್ತು ಗಾಯಕಿ ಅನುರಾಧಾ ಧಾರೇಶ್ವರ ಅವರನ್ನು ಆಯ್ಕೆ ಮಾಡಲಾಗಿದೆ.

ಧಾರವಾಡ: ಕಿಕ್ಕೇರಿಯ ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್‌ ನೀಡುವ, ಪ್ರಸಕ್ತ ಸಾಲಿನ ‘ಕೆಎಸ್‌ನ’ ಪ್ರಶಸ್ತಿಗೆ ಹಿರಿಯ ಕವಿ ಡಾ. ಚನ್ನವೀರ ಕಣವಿ ಮತ್ತು ಗಾಯಕಿ ಅನುರಾಧಾ ಧಾರೇಶ್ವರ ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯು ತಲಾ 25 ಸಾವಿರ ನಗದು, ಪ್ರಶಸ್ತಿ ಫಲಕ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಇದೇ 25ರಂದು ಧಾರವಾಡದಲ್ಲಿ ನಡೆಯುವ ಸಮಾರಂಭದಲ್ಲಿ, ಇತಿಹಾಸಕಾರ ಡಾ. ಷ.ಶೆಟ್ಟರ್‌ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಡಾ. ಕಿಕ್ಕೇರಿ ಕೃಷ್ಣಮೂರ್ತಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.