ಕಳೆದ ಐದು ವರ್ಷಗಳಲ್ಲಿ ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಲ್ಲಿ ಭಾರತವೂ ಒಂದು: ಐಎಂಎಫ್‌

0
398

ವಿಶ್ವದ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕ ವ್ಯವಸ್ಥೆಗಳಲ್ಲಿ ಭಾರತವೂ ಒಂದಾಗಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಹೇಳಿದ್ದು, ಕಳೆದ ಐದು ವರ್ಷಗಳಲ್ಲಿ ದೇಶವು ಹಲವಾರು ಪ್ರಮುಖ ಸುಧಾರಣೆಗಳನ್ನು ಮಾಡಿದೆ. ಆದರೆ, ಮತ್ತಷ್ಟು ಆಗಬೇಕಿದೆ ಎಂದು ಹೇಳಿದೆ.

ವಾಷಿಂಗ್ಟನ್: ವಿಶ್ವದ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕ ವ್ಯವಸ್ಥೆಗಳಲ್ಲಿ ಭಾರತವೂ ಒಂದಾಗಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಹೇಳಿದ್ದು, ಕಳೆದ ಐದು ವರ್ಷಗಳಲ್ಲಿ ದೇಶವು ಹಲವಾರು ಪ್ರಮುಖ ಸುಧಾರಣೆಗಳನ್ನು ಮಾಡಿದೆ. ಆದರೆ, ಮತ್ತಷ್ಟು ಆಗಬೇಕಿದೆ ಎಂದು ಹೇಳಿದೆ.

ಕಳೆದ ಐದು ವರ್ಷಗಳಲ್ಲಿ ಭಾರತದ ಆರ್ಥಿಕ ಅಭಿವೃದ್ಧಿ ಕುರಿತಾದ ಪ್ರಶ್ನೆಗೆ ಉತ್ತರಿಸಿರುವ ಐಎಂಎಫ್‌ನ ಸಂಪರ್ಕ ನಿರ್ದೇಶಕ ಗೆರ್ರಿ ರೈಸ್‌ ಮಾತನಾಡಿ, ಕಳೆದ ಐದು ವರ್ಷಗಳಿಂದ ಭಾರತದ ಆರ್ಥಿಕತೆಯು ಶೇ. ಏಳರಷ್ಟು ಏರಿಕೆಯಾಗುತ್ತಿದ್ದು, ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕ ವ್ಯವಸ್ಥೆಗಳಲ್ಲಿ ಒಂದಾಗಿದೆ. ಆದರೆ, ಅದಕ್ಕಾಗಿ ಹಲವು ಪ್ರಮುಖ ಸುಧಾರಣೆಗಳನ್ನು ಅಳವಡಿಸಿಕೊಳ್ಳಲಾಗಿದೆ ಮತ್ತು ಹೆಚ್ಚಿನ ಬೆಳವಣಿಗೆಯನ್ನು ಉಳಿಸಿಕೊಳ್ಳಲು ಜನಸಂಖ್ಯಾ ಲಾಂಭಾಂಶದ ಅವಕಾಶವನ್ನು ಬಳಸಿಕೊಳ್ಳುವುದು ಸೇರಿದಂತೆ ಇನ್ನಷ್ಟು ಹೆಚ್ಚಿನ ಸುಧಾರಣೆಗಳು ಅಗತ್ಯವೆಂದು ನಾವು ಭಾವಿಸುತ್ತೇವೆ ಎಂದು ಅವರು ಹೇಳಿದರು.

ಮುಂಬರುವ ವಿಶ್ವ ಆರ್ಥಿಕತೆ ನೋಟ (WEO) ಸಮೀಕ್ಷೆ ವರದಿಯಲ್ಲಿ ಭಾರತದ ಆರ್ಥಿಕತೆಯ ಬಗ್ಗೆ ವಿವರವನ್ನು ವಿಶ್ವ ಬ್ಯಾಂಕಿನ ಮುಂದಿನ ವಾರ್ಷಿಕ ಸಭೆಯ ಮುಂದೆ IMF ಬಿಡುಗಡೆಗೊಳಿಸಲಿದ್ದು, ಐಎಂಎಫ್‌ನ ಮುಖ್ಯ ಅರ್ಥಶಾಸ್ತ್ರಜ್ಞೆಯಾಗಿ ಅಧಿಕಾರ ವಹಿಸಿಕೊಂಡಿರುವ ಭಾರತೀಯ ಮೂಲದ ಅಮೆರಿಕನ್ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ ಅವರ ಅಡಿಯಲ್ಲಿ ಮೊದಲನೆಯದು ಎಂದು ತಿಳಿಸಿದ್ದಾರೆ.

ನೀತಿ ಆದ್ಯತೆಗಳ ನಡುವೆ WEO ಬ್ಯಾಂಕುಗಳು ಮತ್ತು ಕಾರ್ಪೊರೇಟ್‌ ಬ್ಯಾಲೆನ್ಸ್‌ ಶೀಟ್‌ಗಳನ್ನು ಸ್ವಚ್ಛಗೊಳಿಸುವುದು, ಹಣಕಾಸಿನ ಬಲವರ್ಧನೆ, ಕೇಂದ್ರ ಮತ್ತು ರಾಜ್ಯಗಳೆರಡೂ, ಫ್ಯಾಕ್ಟರ್ ಮಾರುಕಟ್ಟೆಗಳಲ್ಲಿ ವಿಶಾಲ ರಚನಾತ್ಮಕ ಸುಧಾರಣೆಗಳ ದೃಷ್ಟಿಯಿಂದ ಸುಧಾರಣೆಯ ವೇಗವನ್ನು ನಿರ್ವಹಿಸುವುದು, ಕಾರ್ಮಿಕ, ಭೂ ಸುಧಾರಣೆ ಮತ್ತು ಮತ್ತಷ್ಟು ವೇಗವಾಗಿ ಮತ್ತು ಹೆಚ್ಚು ಅಂತರ್ಗತ ಬೆಳವಣಿಗೆ ಸಾಧಿಸಲು ವ್ಯಾಪಾರದ ವಾತಾವರಣವನ್ನು ಹೆಚ್ಚಿಸುವ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆಯುತ್ತದೆ ಎಂದು ಹೇಳಿದರು. (ಏಜೆನ್ಸೀಸ್)