ಕಳಪೆ ಸಾಧನೆ: 1,200 ಐಪಿಎಸ್‌ ಅಧಿಕಾರಿಗಳ ಮೇಲೆ ನಿಗಾ

0
11

ವಿವಿಧ ರಾಜ್ಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಐಪಿಎಸ್‌ ಅಧಿಕಾರಿಗಳ ಸಾಧನೆಯನ್ನು ಮೌಲ್ಯಮಾಪನ ಮಾಡುತ್ತಿರುವ ಗೃಹ ಸಚಿವಾಲಯ, 1,200 ಅಧಿಕಾರಿಗಳ ಕಾರ್ಯಕ್ಷಮತೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದೆ.

ನವದೆಹಲಿ (ಪಿಟಿಐ): ವಿವಿಧ ರಾಜ್ಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಐಪಿಎಸ್‌ ಅಧಿಕಾರಿಗಳ ಸಾಧನೆಯನ್ನು ಮೌಲ್ಯಮಾಪನ ಮಾಡುತ್ತಿರುವ ಗೃಹ ಸಚಿವಾಲಯ, 1,200 ಅಧಿಕಾರಿಗಳ ಕಾರ್ಯಕ್ಷಮತೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದೆ.

ಕಳೆದ ಮೂರು ವರ್ಷಗಳ ಅವಧಿಯಲ್ಲಿ ಗೃಹ ಸಚಿವಾಲಯ 1,181 ಐಪಿಎಸ್‌ ಅಧಿಕಾರಿಗಳ ಸೇವಾ ಪುಸ್ತಕ (ಎಸ್‌.ಆರ್‌) ಅವಲೋಕನ ಮಾಡಿದೆ. ಎಸ್‌.ಆರ್‌ ಪರಿಶೀಲನಾ ಪ್ರಕ್ರಿಯೆ ನಿರಂತರವಾಗಿ ಸಾಗಲಿದೆ ಎಂದೂ ಹೇಳಿದೆ.

ರಾಜ್ಯ ಸರ್ಕಾರದೊಂದಿಗೆ ಸಮಾಲೋಚನೆ ನಂತರ, ಕಳಪೆ ಸಾಧನೆ ತೋರುವ ಅಧಿಕಾರಿಗೆ ನಿವೃತ್ತಿಯಾಗುವಂತೆ ಸೂಚಿಸಲು ಕಾಯ್ದೆಯಡಿ ಅವಕಾಶ ಇದೆ. ಜನರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ, ನಿವೃತ್ತನಾಗ ಬಯಸುವ ಅಧಿಕಾರಿ ಮೂರು ತಿಂಗಳ ಮುಂಚಿತವಾಗಿ ಸರ್ಕಾರಕ್ಕೆ ಲಿಖಿತ ಮಾಹಿತಿ ನೀಡಬೇಕು ಇಲ್ಲವೇ ಮೂರು ತಿಂಗಳ ವೇತನ ಹಾಗೂ ಭತ್ಯೆಗಳನ್ನು ಹಿಂದಿರುಗಿಸಬೇಕು.

ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ, ಕಳಪೆ ಸಾಧನೆ ತೋರುವ ಐಪಿಎಸ್‌ ಅಧಿಕಾರಿಗಳನ್ನು ಗುರುತಿಸುವ ಸಲುವಾಗಿ ಅವರ ಎಸ್‌.ಆರ್‌ ಪರಿಶೀಲಿಸುವ ಕಾರ್ಯಕ್ಕೆ ಚಾಲನೆ ನೀಡಿದೆ.

ನಾಲ್ವರಿಗೆ ಕಡ್ಡಾಯ ನಿವೃತ್ತಿ: 2015ರಿಂದ 2018ರ ವರೆಗಿನ ಅವಧಿಯಲ್ಲಿ 1,143 ಐಎಎಸ್‌ ಅಧಿಕಾರಿಗಳ ಸೇವಾ ಪುಸ್ತಕ ಪರಿಶೀಲಿಸಿರುವ ಕೇಂದ್ರ ಸರ್ಕಾರ, ನಾಲ್ವರು ಅಧಿಕಾರಿಗಳು ನಿವೃತ್ತರಾಗುವಂತೆ ಶಿಫಾರಸು ಮಾಡಿದೆ.