ಕಲ್ಲಿದ್ದಲಿನಿಂದ ವಾಯುಮಾಲಿನ್ಯ: ಮಾರ್ಗಸೂಚಿಗೆ ಚಿಂತನೆ(ಸಲಹೆ ನೀಡುವಂತೆ ಪರಿಸರ ಸಚಿವಾಲಯ ಸೂಚನೆ)

0
484

ವಿದ್ಯುತ್ ಉತ್ಪಾದನಾ ಘಟಕಗಳು, ಹೆಚ್ಚಿನ ಪ್ರಮಾಣದ ಬೂದಿ ಹೊಮ್ಮಿಸುವ ಕಲ್ಲಿದ್ದಲು ಬಳಸುವುದನ್ನು ನಿಯಂತ್ರಿಸಲು ಮಾರ್ಗಸೂಚಿಗಳನ್ನು ರೂಪಿಸಲು ‍ಪರಿಸರ ಸಚಿವಾಲಯ ಚಿಂತನೆ ನಡೆಸಿದೆ.

ನವದೆಹಲಿ (ಪಿಟಿಐ): ವಿದ್ಯುತ್ ಉತ್ಪಾದನಾ ಘಟಕಗಳು, ಹೆಚ್ಚಿನ ಪ್ರಮಾಣದ ಬೂದಿ ಹೊಮ್ಮಿಸುವ ಕಲ್ಲಿದ್ದಲು ಬಳಸುವುದನ್ನು ನಿಯಂತ್ರಿಸಲು ಮಾರ್ಗಸೂಚಿಗಳನ್ನು ರೂಪಿಸಲು ‍ಪರಿಸರ ಸಚಿವಾಲಯ ಚಿಂತನೆ ನಡೆಸಿದೆ. 

ಈ ನಿಟ್ಟಿನಲ್ಲಿ ಸಲಹೆಗಳನ್ನು ನೀಡುವಂತೆ ಕಲ್ಲಿದ್ದಲು ಬಳಕೆ ಮಾಡುವ ವಿದ್ಯುತ್ ಉತ್ಪಾದನಾ ಘಟಕಗಳು, ಕಲ್ಲಿದ್ದಲು ಉತ್ಪಾದನಾ ಕಂಪನಿಗಳು ಹಾಗೂ ಕೆಲವು ಪರಿಸರ ಸಂಘಟನೆಗಳಿಗೆ ಸಚಿವಾಲಯದ ಅಧಿಕಾರಿಗಳು ಸೂಚಿಸಿದ್ದಾರೆ. 

 

‘ಹೆಚ್ಚು ಪ್ರಮಾಣದ ಬೂದಿ ಹೊಮ್ಮುವ ಕಲ್ಲಿದ್ದಲು ಬಳಕೆಯಿಂದ ಇಂಗಾಲ, ಗಂಧಕಾಮ್ಲ ಅನಿಲ ಉತ್ಪಾದನೆಯಾಗುತ್ತದೆ. ಇದು ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಉತ್ತಮ ಗುಣಮಟ್ಟದ ಕಲ್ಲಿದ್ದಲು ಬಳಸುವುದರಿಂದ ವಿದ್ಯುತ್ ಘಟಕಗಳ ಕಾರ್ಯಸಾಮರ್ಥ್ಯ ಹೆಚ್ಚುತ್ತದೆ ಜತೆಗೆ ಮಾಲಿನ್ಯಕ್ಕೂ ಕಡಿವಾಣ ಹಾಕಬಹುದು’ ಎಂದು ಸಚಿವಾಲಯದ ಅಧಿಕಾರಿ ತಿಳಿಸಿದ್ದಾರೆ. 

ದೇಶದಲ್ಲಿ ಬಳಕೆ ಮಾಡುವ ಶೇ 80ಕ್ಕೂ ಹೆಚ್ಚು ಪ್ರಮಾಣದ ಕಲ್ಲಿದ್ದಲನ್ನು, ಕಲ್ಲಿದ್ದಲು ಸಚಿವಾಲಯದ ಅಡಿಯಲ್ಲಿರುವ ಕೋಲ್ ಇಂಡಿಯಾ ಲಿ. ಉತ್ಪಾದಿಸುತ್ತದೆ. ಈ ಕಲ್ಲಿದ್ದಲು ಗುಣಮಟ್ಟದ ಕುರಿತು ಸರ್ಕಾರಿ ಸ್ವಾಮ್ಯದ ಎನ್‌ಟಿಪಿಸಿ ಸೇರಿದಂತೆ ಹಲವು ಕಂಪನಿಗಳು ದೂರು ಸಲ್ಲಿಸಿವೆ.

ಮಾರ್ಗಸೂಚಿಗಳನ್ನು ರೂಪಿಸುವುದರಿಂದ, ದೇಶದಲ್ಲಿ ಉತ್ಪಾದನೆ ಮಾಡುವ ಕಲ್ಲಿದ್ದಲು ಗುಣಮಟ್ಟ ಉತ್ತಮವಾಗಿರುವಂತೆ ನೋಡಿಕೊಳ್ಳಲು ಸಾಧ್ಯ.