ಕರ್ನಾಟಕ ಹೈಕೋರ್ಟ್‌ಗೆ ನ್ಯಾಯಮೂರ್ತಿಗಳ ನೇಮಕಕ್ಕೆ ಶಿಫಾರಸು : ಕೊಲಿಜಿಯಂ ಸಮ್ಮತಿ

0
585

ಕರ್ನಾಟಕ ಹೈಕೋರ್ಟ್‌ಗೆ ಎಂಟು ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಶಿಫಾರಸಿಗೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಮೂವರು ಸದಸ್ಯರ ಕೊಲಿಜಿಯಂ ಮಾರ್ಚ್ 25 ರ ಸೋಮವಾರ ಸಮ್ಮತಿಸಿದೆ.

ಬೆಂಗಳೂರು: ಕರ್ನಾಟಕ ಹೈಕೋರ್ಟ್‌ಗೆ ಎಂಟು ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಶಿಫಾರಸಿಗೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಮೂವರು ಸದಸ್ಯರ ಕೊಲಿಜಿಯಂ ಸೋಮವಾರ ಸಮ್ಮತಿಸಿದೆ.

ಸವಣೂರು ವಿಶ್ವಜಿತ್‌ ಶೆಟ್ಟಿ, ಸಿಂಗಾಪುರಂ ರಾಘವಾಚಾರ್ ಕೃಷ್ಣಕುಮಾರ್, ಮರಳೂರು ಇಂದ್ರಕುಮಾರ್ ಅರುಣ್, ಮೊಹಮ್ಮದ್ ಗೌಸ್‌ ಶುಕುರೆ  ಕಮಾಲ್, ಅಶೋಕ್ ಸುಭಾಷ್‌ಚಂದ್ರ ಕಿಣಗಿ, ಗೋವಿಂದರಾಜ್ ಸೂರಜ್, ಇಂಗಳಗುಪ್ಪೆ ಸೀತಾರಾಮಯ್ಯ ಇಂದಿರೇಶ್ ಮತ್ತು ಸಚಿನ್ ಶಂಕರ್ ಮಗದುಂ ಅವರನ್ನು ಶಿಫಾರಸು ಮಾಡಲಾಗಿದೆ.