ಕರ್ನಾಟಕ ಸರ್ಕಾರ : ರಾಜ್ಯದ ಎಂಟು ಮಂದಿಗೆ ಹಿರಿಯ ನಾಗರಿಕರ ಪ್ರಶಸ್ತಿ

0
867

ಕಲಬುರ್ಗಿಯ ಡಾ.ಪಿ.ಎಸ್‌.ಶಂಕರ್ ಸೇರಿದಂತೆ ಎಂಟು ಮಂದಿಗೆ ಕರ್ನಾಟಕ ರಾಜ್ಯ ಸರ್ಕಾರ ನೀಡುವ ಹಿರಿಯ ನಾಗರಿಕರ ಪ್ರಶಸ್ತಿ ಲಭಿಸಿದೆ.ರಾಜ್ಯ ಪ್ರಶಸ್ತಿಯ ಮೊತ್ತ ತಲಾ ₹ 1 ಲಕ್ಷ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಅಕ್ಟೋಬರ್‌ 1ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರು: ಕಲಬುರ್ಗಿಯ ಡಾ.ಪಿ.ಎಸ್‌.ಶಂಕರ್ ಸೇರಿದಂತೆ ಎಂಟು ಮಂದಿಗೆ ಕರ್ನಾಟಕ ರಾಜ್ಯ ಸರ್ಕಾರ ನೀಡುವ ಹಿರಿಯ ನಾಗರಿಕರ ಪ್ರಶಸ್ತಿ ಲಭಿಸಿದೆ.

ರಾಜ್ಯ ಪ್ರಶಸ್ತಿಯ ಮೊತ್ತ ತಲಾ  1 ಲಕ್ಷ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಅಕ್ಟೋಬರ್‌ 1ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

 ಪ್ರಶಸ್ತಿಗೆ ಆಯ್ಕೆಯಾದವರು: ಸಮಾಜ ಸೇವೆ ಕ್ಷೇತ್ರದಲ್ಲಿ ಡಾ.ವಿಜಯಲಕ್ಷ್ಮಿ ದೇಶಮಾನೆ, ಮಹಾದೇವಿ ಹುಲ್ಗೂರ್‌, ಜಗದಾಂಬ,  ಡಾ.ಪಿಎಸ್‌.ಶಂಕರ್‌(ಸಾಹಿತ್ಯ) ಡಾ.ಬಿ.ವಿ ಕೆರೆ ಮಾರ್ತಾಂಡೆ (ಶಿಕ್ಷಣ, ಉಡುಪಿ ಜಿಲ್ಲೆ), ಚಿಂದೋಡಿ ಬಂಗಾರೇಶ್‌ (ರಂಗಭೂಮಿ, ದಾವಣಗೆರೆ), ಡಿ.ಎನ್‌.ಸಂಪತ್‌ (ಕ್ರೀಡೆ, ಮಂಡ್ಯ), ಸದಾಶಿವ ಸಿದ್ದಪ್ಪ ಬೆಳಗಲಿ (ಕಾನೂನು, ಬಾಗಲಕೋಟೆ) ಹಾಗೂ ಯೆನೆಪೋಯ ಮೆಡಿಕಲ್‌ ಕಾಲೇಜು (ಮಂಗಳೂರು) ಸಾಂಸ್ಥಿಕ ಪ್ರಶಸ್ತಿ ಪಡೆದಿದೆ.

ಹಿರಿಯ ನಾಗರಿಕರ ರಾಷ್ಟ್ರ ಪ್ರಶಸ್ತಿ ರಾಜ್ಯದ ಎರಡು ಸಂಸ್ಥೆ ಹಾಗೂ ಇಬ್ಬರು ಹಿರಿಯರಿಗೆ ಲಭಿಸಿದೆ. ಬ್ಯಾಪ್ಟಿಸ್ಟ್‌ ಆಸ್ಪತ್ರೆ (ಹಿರಿಯ ನಾಗರಿಕರ ಕ್ಷೇತ್ರ, ಬೆಂಗಳೂರು) ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ (ಹಿರಿಯ ನಾಗರಿಕರ ಕ್ಷೇತ್ರ)ಕ್ಕೆ ಪ್ರಶಸ್ತಿ ಸಿಕ್ಕಿದೆ. ಮಾದರಿ ತಾಯಿ ಪ್ರಶಸ್ತಿಗೆ ತುಮಕೂರು ಜಿಲ್ಲೆಯ ಮುನಿಯಮ್ಮ, ಸೃಜನಶೀಲ ಕಲೆ ಪ್ರಶಸ್ತಿಗೆ ಬಳ್ಳಾರಿಯ ಬೆಳಗಲ್ಲು ವೀರಣ್ಣ ಆಯ್ಕೆಯಾಗಿದ್ದಾರೆ.