ಕರ್ನಾಟಕ ರಾಜ್ಯ ಸರ್ಕಾರ: 2020ನೇ ಸಾಲಿಗೆ 18 ಸರ್ಕಾರಿ ರಜಾ ದಿನ

0
28

ರಾಜ್ಯ ಸರ್ಕಾರ 2020ನೇ ಸಾಲಿಗೆ ಸಾರ್ವತ್ರಿಕ ರಜಾ ದಿನಗಳನ್ನು ಪ್ರಕಟಿಸಿದ್ದು, ನೌಕರರಿಗೆ 18 ದಿನಗಳು ರಜೆ ಸಿಗಲಿವೆ. ಪ್ರತಿ ತಿಂಗಳ 2ನೇ ಹಾಗೂ 4ನೇ ಶನಿವಾರದ ರಜೆಗಳು ಮುಂದುವರಿದಿವೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ತಿಳಿಸಿದೆ.

ಬೆಂಗಳೂರು: ರಾಜ್ಯ ಸರ್ಕಾರ 2020ನೇ ಸಾಲಿಗೆ ಸಾರ್ವತ್ರಿಕ ರಜಾ ದಿನಗಳನ್ನು ಪ್ರಕಟಿಸಿದ್ದು, ನೌಕರರಿಗೆ 18 ದಿನಗಳು ರಜೆ ಸಿಗಲಿವೆ. ಪ್ರತಿ ತಿಂಗಳ 2ನೇ ಹಾಗೂ 4ನೇ ಶನಿವಾರದ ರಜೆಗಳು ಮುಂದುವರಿದಿವೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ತಿಳಿಸಿದೆ.

ಭಾನುವಾರ ಬಂದಿರುವ ಗಣರಾಜ್ಯೋತ್ಸವ (ಜನವರಿ 26), ಬಸವ ಜಯಂತಿ, ಅಕ್ಷಯ ತೃತೀಯ (ಏಪ್ರಿಲ್ 26), ಮೊಹರಂ ಕಡೇ ದಿನ (ಆಗಸ್ಟ್ 30), ಆಯುಧಪೂಜೆ (ಅಕ್ಟೋಬರ್ 25), ಕನ್ನಡ ರಾಜ್ಯೋತ್ಸವ (ನವೆಂಬರ್ 1) ಹಾಗೂ ಎರಡನೇ ಶನಿವಾರ ಬಂದಿರುವ ನರಕ ಚತುರ್ದಶಿ (ನವೆಂಬರ್ 14), ನಾಲ್ಕನೇ ಶನಿವಾರದಂದು ಬಂದಿರುವ ವರಸಿದ್ಧಿ ವಿನಾಯಕ ವ್ರತ (ಆಗಸ್ಟ್ 22) ರಜಾ ದಿನಗಳನ್ನು ಪಟ್ಟಿಯಲ್ಲಿ ಸೇರಿಸಿಲ್ಲ.

ಸೆಪ್ಟೆಂಬರ್ 3ರಂದು ಕೈಲ್ ಮುಹೂರ್ತ, ಅಕ್ಟೋಬರ್ 17ರಂದು ತುಲಾ ಸಂಕ್ರಮಣ, ಡಿಸೆಂಬರ್ 1ರಂದು ಹುತ್ತರಿ ಹಬ್ಬ ಆಚರಿಸಲು ಕೊಡಗು ಜಿಲ್ಲೆಗೆ ಮಾತ್ರ ಅನ್ವಯಿಸುವಂತೆ ಸ್ಥಳೀಯವಾಗಿ ಸಾರ್ವತ್ರಿಕ ರಜೆ ಘೋಷಿಸಲಾಗಿದೆ.

ಸಾರ್ವಜನಿಕ ರಜಾ ದಿನಗಳ ಜತೆಗೆ ಎರಡು ದಿನಗಳಿಗೆ ಮೀರದಂತೆ ನಿರ್ಬಂಧಿತ ರಜೆಯನ್ನು ಪೂರ್ವಾನುಮತಿ ಪಡೆದು ತೆಗೆದುಕೊಳ್ಳಬಹುದು. ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಪ್ರತ್ಯೇಕ ರಜಾ ದಿನಗಳ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಪ್ರಕಟಿಸಲಿದ್ದಾರೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ತಿಳಿಸಿದೆ.

2020ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳು

# 15/01/2020 – ಮಕರ ಸಂಕ್ರಾಂತಿ

# 15/01/2020 – ಮಹಾ ಶಿವರಾತ್ರಿ

# 25/03/2020 – ಯುಗಾದಿ ಹಬ್ಬ

# 06/04/2020 – ಮಹಾವೀರ ಜಯಂತಿ

# 10/04/2020 – ಗುಡ್ ಫ್ರೈಡೆ

# 14/04/2020 –  ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ

# 01/05/2020 – ಕಾರ್ಮಿಕ ದಿನಾಚರಣೆ

# 25/05/2020 – ಕುತುಬ್ ಎ ರಂಜಾನ್

# 01/08/2020 –  ಬಕ್ರೀದ್

# 15/08/2020 –  ಸ್ವಾತಂತ್ರ್ಯ ದಿನಾಚರಣೆ

# 17/09/2020 – ಮಹಾಲಯ ಅಮವಾಸ್ಯೆ

# 02/10/2020 – ಗಾಂಧಿ ಜಯಂತಿ

# 26/10/2020 – ವಿಜಯ ದಶಮಿ

# 30/10/2020 –  ಈದ್ ಮಿಲಾದ್

# 31/10/2020 – ಮಹರ್ಷಿ ವಾಲ್ಮೀಕಿ ಜಯಂತಿ

# 16/11/2020 – ಬಲಿಪಾಡ್ಯ ದೀಪಾವಳಿ

# 03/12/2020 – ಕನಕದಾಸ ಜಯಂತಿ

# 25/12/2020 – ಕ್ರಿಸ್ ಮಸ್

 

2020ನೇ ಸಾಲಿನ ಪರಿಮಿತ ರಜಾ ದಿನಗಳು

# 01/01/2020 –  ಹೊಸ ವರ್ಷಾರಂಭ

# 03/02/2020 – ಮಾಧ್ವನವಮಿ

# 09/03/2020 –  ಹೋಳಿ ಹಬ್ಬ

# 02/04/2020 –  ರಾಮನವಮಿ

# 09/04/2020 –  ಸಬ್‌ ಎ ಬರಾತ್‌

# 13/04/2020 –  ಸೌರಮಾನ ಯುಗಾದಿ

# 28/04/2020 –  ಶಂಕರಾಚಾರ್ಯ ಜಯಂತಿ

# 07/05/2020 –  ಬುದ್ಧ ಪೂರ್ಣಿಮೆ

# 20/05/2020 –  ಷಬ್‌ ಎ ಬಕ್ರೀದ್‌

# 22/05/2020 –  ಜುಮಾತ್‌ ಉಲ್‌ ವಿದಾ

# 31/07/2020 –  ವರಮಹಾಲಕ್ಷ್ಮೀ ಹಬ್ಬ

# 11/08/2020 –  ಶ್ರೀಕೃಷ್ಣ ಜನ್ಮಾಷ್ಠಮಿ

# 21/08/2020 –  ಸ್ವರ್ಣಗೌರಿ ವೃತ

# 31/08/2020 – ಓಣಂ ಹಬ್ಬ, ಅನಂತ ಪದ್ಮನಾಭ ವೃತ, ಋಗ್‌ ಉಪಾಕರ್ಮ

# 01/09/2020 –  ಯಜುರ್‌ ಉಪಾಕರ್ಮ

# 02/09/2020 – ಬ್ರಹ್ಮಶ್ರೀ ನಾರಾಯಣ ಗುರೂಜಿ ಜಯಂತಿ

# 08/09/2020 –  ಕನ್ಯಾಕುಮಾರಿಯಮ್ಮ ಜಯಂತಿ

# 17/10/2020 –  ತುಲಾ ಸಂಕ್ರಮಣ

# 30/11/2020 –  ಗುರುನಾನಕ್‌ ಜಯಂತಿ

# 01/12/2020 –  ಹುತ್ತರಿ ಹಬ್ಬ

# 24/12/2020 –  ಕ್ರಿಸ್‌ಮಸ್‌ ಈವ್‌