ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಕೊಡುಗೆ: ತುಟ್ಟಿಭತ್ಯೆ ಶೇ 4.75 ರಷ್ಟು ಹೆಚ್ಚಳ

0
40

ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ದರವನ್ನು ಮೂಲವೇತನದ ಶೇ 6.50 ರಿಂದ ಶೇ 11.25 ಕ್ಕೆ ಹೆಚ್ಚಿಸಿ ಸರ್ಕಾರ ಅಕ್ಟೋಬರ್ 19 ರ ಶನಿವಾರ ಆದೇಶ ಹೊರಡಿಸಿದೆ.

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ  ತುಟ್ಟಿಭತ್ಯೆ ದರವನ್ನು ಮೂಲವೇತನದ ಶೇ 6.50 ರಿಂದ ಶೇ 11.25 ಕ್ಕೆ ಹೆಚ್ಚಿಸಿ  ಸರ್ಕಾರ ಅಕ್ಟೋಬರ್ 19 ರ ಶನಿವಾರ ಆದೇಶ ಹೊರಡಿಸಿದೆ.

2018 ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ 2019 ರ ಜುಲೈ 1 ರಿಂದ ಜಾರಿಗೆ ಬರುವಂತೆ ತುಟ್ಟಿಭತ್ಯೆ ಹೆಚ್ಚಳ ಮಾಡಲಾಗಿದೆ. ಜುಲೈ 1 ರಿಂದ ಪೂರ್ವಾನ್ವಯವಾಗುವಂತೆ ಶೇ 4.75 ರಷ್ಟು ತುಟ್ಟಿಭತ್ಯೆ ಹೆಚ್ಚಳವಾಗಿದೆ.

ರಾಜ್ಯ ಸರ್ಕಾರದ ನಿವೃತ್ತಿ ವೇತನದಾರರು/ ಕುಟುಂಬ ವೇತನದಾರರಿಗೂ ಹಾಲಿ ಲಭ್ಯವಿರುವ ತುಟ್ಟಿಭತ್ಯೆ ದರವನ್ನು ಮೂಲ ನಿವೃತ್ತಿ ವೇತನದ  ಶೇ 6.50 ರಿಂದ ಶೇ 11.25 ಕ್ಕೆ ಹೆಚ್ಚಿಸಲಾಗಿದೆ.

2006 ರ ಪರಿಷ್ಕೃತ ಯುಜಿಸಿ/ಎಐಸಿಟಿಇ/ಐ.ಸಿ.ಎ.ಆರ್ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿದ್ದ ಹಾಗೂ 01/01/2016 ರ ಪೂರ್ವದಲ್ಲಿ ನಿವೃತ್ತರಾದ ಪಿಂಚಣಿದಾರರಿಗೆ ಈ ಆದೇಶ ಅನ್ವಯಿಸುತ್ತದೆ. ಉಳಿದಂತೆ ಪ್ರತ್ಯೇಕ ಆದೇಶ ಹೊರಡಿಸುವುದಾಗಿ ಸರ್ಕಾರ ಆದೇಶದಲ್ಲಿ ತಿಳಿಸಿದೆ