ಕರ್ನಾಟಕ ರಾಜ್ಯ ಪೊಲೀಸರ ವೇತನ ಪರಿಷ್ಕರಣೆ

0
110

ರಾಘವೇಂದ್ರ ಔರಾದಕರ ವರದಿಯ ಶಿಫಾರಸಿನ ಅನುಸಾರ ಪೊಲೀಸ್‌ ಅಧಿಕಾರಿ ಹಾಗೂ ಸಿಬ್ಬಂದಿಗೆ ವೇತನ ಪರಿಷ್ಕರಿಸಿ ಆದೇಶ ಹೊರಡಿಸಿದ್ದು, ನೂತನ ವೇತನ ಶ್ರೇಣಿ ಆಗಸ್ಟ್ 1ರಿಂದಲೇ ಪೂರ್ವಾನ್ವಯವಾಗಲಿದೆ.

ಬೆಂಗಳೂರು:ರಾಘವೇಂದ್ರ ಔರಾದಕರ ವರದಿಯ ಶಿಫಾರಸಿನ  ಅನುಸಾರ ಪೊಲೀಸ್‌ ಅಧಿಕಾರಿ ಹಾಗೂ ಸಿಬ್ಬಂದಿಗೆ ವೇತನ ಪರಿಷ್ಕರಿಸಿ ಆದೇಶ ಹೊರಡಿಸಿದ್ದು, ನೂತನ ವೇತನ ಶ್ರೇಣಿ ಆಗಸ್ಟ್ 1ರಿಂದಲೇ ಪೂರ್ವಾನ್ವಯವಾಗಲಿದೆ.

‘ಕಷ್ಟ ಪರಿಹಾರ ಭತ್ಯೆ’ ಹೆಚ್ಚಿಸಬೇಕು ಎಂಬ ‍ಪೊಲೀಸರ ಬೇಡಿಕೆಗೆ ಸ್ಪಂದಿಸಿರುವ ಸರ್ಕಾರ,ಎಲ್ಲ ಶ್ರೇಣಿಯವರಿಗೆ ತಲಾ 1 ಸಾವಿರ ಕಷ್ಟ ಪರಿಹಾರ ಭತ್ಯೆ ಹೆಚ್ಚಳಮಾಡಿದೆ. ಇದರಿಂದಾಗಿ ಕಾನ್‌ಸ್ಟೆಬಲ್‌ಗಳಿಗೆ 3 ಸಾವಿರ ಹಾಗೂಇಲ್ಲಿಯವರೆಗೆ ಈ ಭತ್ಯೆ ಪಡೆಯದ ಇನ್‌ಸ್ಪೆಕ್ಟರ್‌ಗಳಿಗೆ ತಲಾ 1 ಸಾವಿರ ಭತ್ಯೆ ಸಿಗಲಿದೆ.

ಔರಾದಕರ ಶಿಫಾರಸು ಜಾರಿ ಮಾಡುವಾಗ ಆರನೇ ವೇತನ ಆಯೋಗದ ಶಿಫಾರಸುಗಳನ್ನು ಅಳವಡಿಸಿಕೊಂಡಿದ್ದರಿಂದ ಸಿಬ್ಬಂದಿಗೆ ತಾರತಮ್ಯ ಆಗಿದೆ ಎಂಬ ಕೂಗೆದ್ದಿತ್ತು. ಆದೇಶ ತಡೆಹಿಡಿದಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ತಾರತಮ್ಯ ನಿವಾರಿಸಿ ಆದೇಶ ಹೊರಡಿಸಲು ಸೂಚಿಸಿದ್ದರು. ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮ್ಮುಖದಲ್ಲಿ ಸಭೆ ನಡೆದಿತ್ತು. ‘ಹೊಸದಾಗಿ ಕೆಲಸಕ್ಕೆ ಸೇರುವ ಪೊಲೀಸ್‌ಕಾನ್‌ಸ್ಟೆಬಲ್‌ಗಳ ವೇತನ 30,427 ರಿಂದ  34,267ಕ್ಕೆ ಏರಿಕೆಯಾಗಲಿದೆ’ ಎಂದು ಯಡಿಯೂರಪ್ಪ ತಿಳಿಸಿದ್ದಾರೆ. 

ಪರಿಷ್ಕೃತ ವೇತನ ಶ್ರೇಣಿ

ಹುದ್ದೆ                    2012 ರ ವೇತನ ಶ್ರೇಣಿ    ಪರಿಷ್ಕೃತ ವೇತನ ಶ್ರೇಣಿ

ಕಾನ್ ಸ್ಟೇಬಲ್            11,600 – 21,000       23,500 – 47,650

ಹೆಡ್ ಕಾನ್ ಸ್ಟೇಬಲ್      12,500 – 24,000       27,650 – 52,650

ಎ.ಎಸ್.ಐ                14,550 – 26,700       30,350 – 58,250

ಇನ್ ಸ್ಪೆಕ್ಟರ್              21,600 – 40,050      43,100 – 83,900

ಎಸ್.ಪಿ(ನಾನ್ ಐಪಿಎಸ್) 36,300 – 53,850      70,850 – 1,07,100

 

ಕಷ್ಟ ಪರಿಹಾರ ಭತ್ಯೆ

      ಹುದ್ದೆ                   ಪ್ರಸ್ತುತ ಕಷ್ಟ ಪರಿಹಾರ ಭತ್ಯೆ     ಪರಿಷ್ಕೃತ ಭತ್ಯೆ

ಅನುಯಾಯಿ/ ಜಮೇದಾರ        1000                        2000

ಪೊಲೀಸ್ ಕಾನ್ ಸ್ಟೇಬಲ್         2000                        3000

ಹೆಡ್ ಕಾನ್ ಸ್ಟೇಬಲ್               1000                        2000

ಎ.ಎಸ್.ಐ                          1000                        2000

ಎಸ್.ಐ                             1000                        2000

ಇನ್ ಸ್ಪೆಕ್ಟರ್                         –                           1000