ಕರ್ನಾಟಕ ರಾಜ್ಯದಲ್ಲಿ 12 ಹೊಸ ತಾಲ್ಲೂಕು ಘೋಷಣೆ : ಕಂದಾಯ ಇಲಾಖೆ ಆದೇಶ

0
885

ರಾಜ್ಯದಲ್ಲಿ 12 ಹೊಸ ತಾಲ್ಲೂಕುಗಳ ರಚಿಸಿ ಕಂದಾಯ ಇಲಾಖೆ ಗುರುವಾರ ಆದೇಶ ಹೊರಡಿಸಿದೆ.

ಬೆಂಗಳೂರು: ರಾಜ್ಯದಲ್ಲಿ 12 ಹೊಸ ತಾಲ್ಲೂಕುಗಳ ರಚಿಸಿ ಕಂದಾಯ ಇಲಾಖೆ 2019 ಫೆಬ್ರುವರಿ 28 ರ ಗುರುವಾರ ಆದೇಶ ಹೊರಡಿಸಿದೆ.

ರಾಮನಗರ ಜಿಲ್ಲೆಯ ಹಾರೋಹಳ್ಳಿ, ಚಿಕ್ಕಬಳ್ಳಾಪುರದ ಚೇಳೂರು, ಬಾಗಲಕೋಟೆಯ ತೇರದಾಳ, ಚಿಕ್ಕಮಗಳೂರಿನ ಕಳಸಾ, ಕೊಡಗು ಜಿಲ್ಲೆಯ ಪೊನ್ನಂಪೇಟೆ, ಕುಶಾಲನಗರ, ವಿಜಯಪುರದ ಆಲಮೇಲ, ದಕ್ಷಿಣ ಕನ್ನಡದ ಮೂಲ್ಕಿ, ಉಳ್ಳಾಲ, ಮೈಸೂರು ಜಿಲ್ಲೆಯ ಸಾಲಿಗ್ರಾಮ, ಹಾಸನ ಜಿಲ್ಲೆಯ ಶಾಂತಿಗ್ರಾಮ, ಹಾಗೂ ಬೆಳಗಾವಿಯ ಯರಗಟ್ಟಿ ಹೊಸ ತಾಲ್ಲೂಕುಗಳು ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರು ಮಾಹಿತಿ ನೀಡಿದರು.