ಕರ್ನಾಟಕ ಮುಖ್ಯ ಮಾಹಿತಿ ಆಯುಕ್ತರಾಗಿ “ಎನ್‌.ಸಿ. ಶ್ರೀನಿವಾಸ” ನೇಮಕ

0
593

ಕರ್ನಾಟಕ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತರಾಗಿ ಎನ್.ಸಿ.ಶ್ರೀನಿವಾಸ ಅವರನ್ನು ಸರ್ಕಾರ ನೇಮಕ ಮಾಡಿದೆ.

ಬೆಂಗಳೂರು: ಕರ್ನಾಟಕ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತರಾಗಿ ಎನ್.ಸಿ.ಶ್ರೀನಿವಾಸ ಅವರನ್ನು ಸರ್ಕಾರ ನೇಮಕ ಮಾಡಿದೆ.

ಎಸ್.ಎಂ. ಸೋಮಶೇಖರ ಮತ್ತು ಕೆ.ಪಿ. ಮಂಜುನಾಥ ಅವರನ್ನು ಮಾಹಿತಿ ಆಯುಕ್ತರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.

ಶ್ರೀನಿವಾಸ ಅವರು ಈ ಮೊದಲು ಕಾನೂನು ಇಲಾಖೆ ಕಾರ್ಯದರ್ಶಿಯಾಗಿದ್ದರು. ಅದಕ್ಕೂ ಮುನ್ನ ಹಾಸನ, ಮಂಡ್ಯ ಜಿಲ್ಲಾ ನ್ಯಾಯಾಲಯ ಸೇರಿ ಹಲವೆಡೆ ನ್ಯಾಯಾಧೀಶರಾಗಿ ಕೆಲಸ ಮಾಡಿದ್ದಾರೆ.

ಸೋಮಶೇಖರ್ ಅವರು ನಿವೃತ್ತ ಐಎಫ್‌ಎಸ್ ಅಧಿಕಾರಿಯಾಗಿದ್ದು, ಮಂಜುನಾಥ್ ಅವರು ಶಿಕಾರಿಪುರದ ವಕೀಲರು ಎಂದು ಮಾಹಿತಿ ಆಯೋಗದ ಮೂಲಗಳು ತಿಳಿಸಿವೆ.