ಕರ್ನಾಟಕ ಒಲಿಂಪಿಕ್ ಸಂಸ್ಥೆ (ಕೆಒಎ)ಯ ವಾರ್ಷಿಕ ಕ್ರೀಡಾ ಪ್ರಶಸ್ತಿಗೆ 20 ಮಂದಿ ಕ್ರೀಡಾ ಸಾಧಕರು ಆಯ್ಕೆ

0
7

ಬ್ಯಾಸ್ಕೆಟ್‌ಬಾಲ್ ಆಟ ಗಾರ್ತಿ ಲೋಪಾಮುದ್ರಾ ಮತ್ತು ಸೈಕ್ಲಿಂಗ್ ಪಟು ರಾಜು ಎ ಭಾಟಿ ಸೇರಿದಂತೆ ಇಪ್ಪತ್ತು ಮಂದಿ ಕ್ರೀಡಾ ಸಾಧಕರು ಕರ್ನಾಟಕ ಒಲಿಂಪಿಕ್ ಸಂಸ್ಥೆ (ಕೆಒಎ)ಯ ವಾರ್ಷಿಕ ಕ್ರೀಡಾ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.

ಬೆಂಗಳೂರು: ಬ್ಯಾಸ್ಕೆಟ್‌ಬಾಲ್ ಆಟ ಗಾರ್ತಿ ಲೋಪಾಮುದ್ರಾ ಮತ್ತು ಸೈಕ್ಲಿಂಗ್ ಪಟು ರಾಜು ಎ ಭಾಟಿ ಸೇರಿದಂತೆ ಇಪ್ಪತ್ತು ಮಂದಿ ಕ್ರೀಡಾ ಸಾಧಕರು ಕರ್ನಾಟಕ ಒಲಿಂಪಿಕ್ ಸಂಸ್ಥೆ (ಕೆಒಎ)ಯ ವಾರ್ಷಿಕ ಕ್ರೀಡಾ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.

ಕಂಠೀರವ ಕ್ರೀಡಾಂಗಣದಲ್ಲಿರುವ ಒಲಿಂಪಿಕ್ ಭವನದಲ್ಲಿ ದಿಸೆಂಬರ್ 4 ರ ಬುಧವಾರ ಸಂಜೆ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಜ್ಯ ಕ್ರೀಡಾ ಸಚಿವ ಕೆ.ಎಸ್. ಈಶ್ವರಪ್ಪ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಪ್ರಶಸ್ತಿ ವಿಜೇತರು: ಕೆ. ಅಶ್ವಿನಿ ಭಟ್ (ಬ್ಯಾಡ್ಮಿಂಟನ್), ಲೋಪಾಮುದ್ರಾ (ಬ್ಯಾಸ್ಕೆಟ್‌ಬಾಲ್), ರಾಜು ಎ ಭಾಟಿ (ಸೈಕ್ಲಿಂಗ್), ಬಿ. ನೈದಿಲೆ (ಫೆನ್ಸಿಂಗ್), ಎಂ. ಸುನಿಲಕುಮಾರ್ (ಫುಟ್‌ಬಾಲ್), ಸಿ.ಎ. ನಿಕ್ಕಿನ್ ತಿಮ್ಮಯ್ಯ (ಹಾಕಿ), ಮನು (ಕೊಕ್ಕೊ), ಬಿ.ಆರ್.  ನಿತೀಶ್ (ಕಬಡ್ಡಿ), ಬಿ.ಆರ್. ನಿಕ್ಷೇಪ್ (ಟೆನಿಸ್), ಎಲ್.ಜಿ. ನಂದಿನಿ (ನೆಟ್‌ಬಾಲ್), ಸಿ.ಪಿ. ಜ್ಯೋತಿ (ರೋಯಿಂಗ್), ಎಸ್. ಶಿವಾ (ಈಜು),  ಟಿ.ಆರ್. ಶ್ರೀಜಯ್ (ಶೂಟಿಂಗ್), ಯಶಸ್ವಿನಿ ಡಿ ಘೋರ್ಪಡೆ (ಟೇಬಲ್ ಟೆನಿಸ್), ಅಕ್ಷತಾ ಬಿ ಕಮತಿ (ವೇಟ್‌ಲಿಫ್ಟಿಂಗ್), ಕೆ. ರವಿ (ಪತ್ರಿಕಾ ಛಾಯಾಗ್ರಾಹಕ), ಯು. ವಿಮಲ್‌ ಕುಮಾರ್ (ದ್ರೋಣಾಚಾರ್ಯ ಪುರಸ್ಕೃತ–ಬ್ಯಾಡ್ಮಿಂಟನ್), ಚೆನಂಡ ಅಚ್ಚಯ್ಯ ಕುಟ್ಟಪ್ಪ (ದ್ರೋಣಾಚಾರ್ಯ ಪುರಸ್ಕೃತ –ಬಾಕ್ಸಿಂಗ್), ನೋಯಲ್ ಅಂಥೋನಿ ವಿಲ್ಸನ್ (ಅಂತರರಾಷ್ಟ್ರೀಯ ಫುಟ್‌ಬಾಲ್ ಆಟಗಾರ –ವೆಟರನ್ಸ್), ಎಂ. ವಿನೋದ್ ಚಿಣ್ಣಪ್ಪ (ಅಂತರರಾಷ್ಟ್ರೀಯ ಹಾಕಿ ಆಟಗಾರ –ವೆಟರನ್ಸ್‌).