ಕರ್ನಾಟಕದ ಐವರಿಗೆ 2019 ನೇ ಸಾಲಿನ ‘ಪದ್ಮಶ್ರೀ’ ಪುರಸ್ಕಾರ

0
1218

ಸರೋದ್‌ ಮಾಂತ್ರಿಕ ರಾಜೀವ್‌ ತಾರಾನಾಥ್‌, ಪರಿಸರ ಕಾರ್ಯಕರ್ತೆ ಸಾಲುಮರದ ತಿಮ್ಮಕ್ಕ, ಭೌತ ವಿಜ್ಞಾನಿ ರೋಹಿಣಿ ಗೋಡಬೋಲೆ, ಪುರಾತತ್ವ ಶಾಸ್ತ್ರಜ್ಞೆ ಶಾರದಾ ಶ್ರೀನಿವಾಸನ್‌ ಮತ್ತು ಕನ್ನಡ–ತೆಲುಗು ನಟ ಪ್ರಭುದೇವ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಲಾಗಿದೆ.

ನವದೆಹಲಿ: ಸರೋದ್‌ ಮಾಂತ್ರಿಕ ರಾಜೀವ್‌ ತಾರಾನಾಥ್‌, ಪರಿಸರ ಕಾರ್ಯಕರ್ತೆ ಸಾಲುಮರದ ತಿಮ್ಮಕ್ಕ, ಭೌತ ವಿಜ್ಞಾನಿ ರೋಹಿಣಿ ಗೋಡಬೋಲೆ, ಪುರಾತತ್ವ ಶಾಸ್ತ್ರಜ್ಞೆ ಶಾರದಾ ಶ್ರೀನಿವಾಸನ್‌ ಮತ್ತು ಕನ್ನಡ–ತೆಲುಗು ನಟ ಪ್ರಭುದೇವ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಲಾಗಿದೆ.

ಗಣರಾಜ್ಯ ಮುನ್ನಾ ದಿನವಾದ 2019 ಜನೇವರಿ 25 ರ ಶುಕ್ರವಾರ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಒಟ್ಟು 112 ಮಂದಿಗೆ ಪದ್ಮ ಗೌರವ ಸಮರ್ಪಿಸಲು ತೀರ್ಮಾನಿಸಲಾಗಿದೆ. ಛತ್ತೀಸಗಡದ ಸಂಗೀತಗಾರ್ತಿ ತೀಜನ್‌ ಬಾಯಿ, ವ್ಯಾಪಾರ ಮತ್ತು ಉದ್ಯಮ ಕ್ಷೇತ್ರದ ಸಾಧನೆಗಾಗಿ ಅನಿಲ್‌ ಕುಮಾರ್‌ ಮಣಿಬಾಯಿ ನಾಯ್ಕ್‌ ಮತ್ತು ರಂಗಕರ್ಮಿ ಬಲ್ವಂತ್‌ ಮೋರೇಶ್ವರ್‌ ಪುರಂದರೆ, ಇತ್ತೀಚೆಗೆ ನಿಧನರಾದ ಹಿಂದಿ ನಟ ಖಾದರ್‌ ಖಾನ್‌ ಅವರಿಗೆ ದೇಶದ ಎರಡನೇ ಅತ್ಯುನ್ನತ ಗೌರವವಾದ ಪದ್ಮವಿಭೂಷಣ ಘೋಷಿಸಲಾಗಿದೆ.

 

ಜಿಬೂಟಿಯ ಅಧ್ಯಕ್ಷ ಇಸ್ಮಾಯಿಲ್‌ ಒಮರ್‌ ಗುಲೇಹ್‌ ಅವರಿಗೂ ಪದ್ಮವಿಭೂಷಣ ನೀಡಲು ನಿರ್ಧರಿಸಲಾಗಿದೆ.