ಕರ್ನಾಟಕದಲ್ಲಿ ನೀಡಲಾಗುವ ವಿವಿಧ ಪ್ರಶಸ್ತಿಗಳು

0
24

ಈ ಕೆಳಗೆ ಕರ್ನಾಟಕಲ್ಲಿ ನೀಡುವಂತಹ ವಿವಿಧ ಪ್ರಶಸ್ತಿಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಣೆ ನೀಡಲಾಗಿದೆ.

ದಂಡೆ ದಂಪತಿಗೆ ಎಂ.ಎಂ.ಕಲಬುರ್ಗಿ ಪ್ರಶಸ್ತಿ

ಬಸವಕಲ್ಯಾಣ (ಬೀದರ್‌ ಜಿಲ್ಲೆ): ಇಲ್ಲಿಯ ವಿಶ್ವ ಬಸವಧರ್ಮ ವಿಶ್ವಸ್ಥ ಮಂಡಳಿ ನೀಡುವ ಡಾ.ಎಂ.ಎಂ.ಕಲಬುರ್ಗಿ ಸಂಶೋಧನಾ ಪ್ರಶಸ್ತಿಗೆ ಕಲಬುರ್ಗಿಯ ಡಾ.ವೀರಣ್ಣ ದಂಡೆ ಹಾಗೂ ಡಾ.ಜಯಶ್ರೀ ದಂಡೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವಿಶ್ವಸ್ಥ ಮಂಡಳಿ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ತಿಳಿಸಿದ್ದಾರೆ.

ಪ್ರಶಸ್ತಿಯು 50 ಸಾವಿರ ನಗದು, ಫಲಕ ಒಳಗೊಂಡಿದೆ. ನವೆಂಬರ್ 23 ಹಾಗೂ 24 ರಂದು ಇಲ್ಲಿ ನಡೆಯುವ 40 ನೇ ಅನುಭವ ಮಂಟಪ ಉತ್ಸವ ಹಾಗೂ ಶರಣ ಕಮ್ಮಟದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

 

ಅಂಬರೀಷ್‌ಗೆ ಸರೋಜಾದೇವಿ ಪ್ರಶಸ್ತಿ

ಬೆಂಗಳೂರು: ಭಾರತೀಯ ವಿದ್ಯಾಭವನದ ವತಿಯಿಂದ ನೀಡಲಾಗುವ ಬಿ.ಸರೋಜಾದೇವಿ ರಾಷ್ಟ್ರೀಯ ಪ್ರಶಸ್ತಿಗೆ ದಿವಂಗತ ಅಂಬರೀಷ್‌ ಆಯ್ಕೆಯಾಗಿದ್ದಾರೆ.

ನವೆಂಬರ್‌ 17ರಂದು ಸಂಜೆ 11 ಗಂಟೆಗೆ ಭಾರತೀಯ ವಿದ್ಯಾಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪ್ರಶಸ್ತಿ ಪ್ರದಾನ ಮಾಡಲಿದ್ದು, ಸುಮಲತಾ ಅಂಬರೀಷ್‌ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

 

ರಾಜೇಂದ್ರ ಪ್ರಸಾದ್ ಗೆ  ‘ನರಹಳ್ಳಿ ಪ್ರಶಸ್ತಿ’

ಬೆಂಗಳೂರು: ಡಾ.ನರಹಳ್ಳಿ ಪ್ರತಿಷ್ಠಾನದ ವತಿಯಿಂದ ಯುವ ಸಾಹಿತಿಗಳಿಗೆ ನೀಡಲಾಗುವ ಈ ಸಾಲಿನ ‘ನರಹಳ್ಳಿ ಪ್ರಶಸ್ತಿ’ಗೆ ಮಂಡ್ಯದ ರಾಜೇಂದ್ರ ಪ್ರಸಾದ್ ಆಯ್ಕೆಯಾಗಿದ್ದಾರೆ.

ಪ್ರಶಸ್ತಿ 10 ಸಾವಿರ ನಗದು ಹಾಗೂ ಪ್ರಶಸ್ತಿ‍ ಪತ್ರಗಳನ್ನು ಒಳಗೊಂಡಿದೆ. ನವೆಂಬರ್‌ 17ರಂದು ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಲೇಖಕಿ ಎಂ.ಆರ್‌.ಕಮಲ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.