ಕರ್ತಾರಪುರದಲ್ಲಿ ರೈಲು ನಿಲ್ದಾಣ

0
379

ಸಿಖ್‌ ಯಾತ್ರಾ ಸ್ಥಳ ಇರುವ ಕರ್ತಾರಪುರದಲ್ಲಿ ರೈಲು ನಿಲ್ದಾಣ ನಿರ್ಮಿಸಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ. ಭಕ್ತರಿಗಾಗಿ ವಸತಿ ಗೃಹ ಹಾಗೂ ವಿಶ್ರಾಂತಿ ಕೊಠಡಿ ವ್ಯವಸ್ಥೆ ಕಲ್ಪಿಸಲೂ ಮುಂದಾಗಿದೆ.

ಇಸ್ಲಾಮಾಬಾದ್‌ (ಪಿಟಿಐ): ಸಿಖ್ ಧರ್ಮ ಸಂಸ್ಥಾಪಕ ಗುರು ನಾನಕ್ ದೇವ್‌ ಅವರು ತಮ್ಮ ಕೊನೆಯ 18 ವರ್ಷಗಳನ್ನು ಕರ್ತಾರಪುರದಲ್ಲೇ ಕಳೆದಿದ್ದರು. ಧರ್ಮ ಸ್ಥಾಪನೆಗಾಗಿ ಅವರು ಸಿಖ್ಖರನ್ನು ಒಗ್ಗೂಡಿಸಿದ ಸ್ಥಳವೂ ಇದೇ ಆಗಿದೆ. ಭಾರತದ ಪಂಜಾಬ್‌ನ ಗಡಿಯಿಂದ 3 ಕಿ.ಮೀ.ನಷ್ಟು ದೂರದಲ್ಲಿ ರಾವಿ ನದಿಯ ದಡದ ಪಾಕಿಸ್ತಾನದ ನೆಲದಲ್ಲಿ ಈ ಗುರುದ್ವಾರವಿದೆ.‌ ಸಿಖ್‌ ಯಾತ್ರಾ ಸ್ಥಳ ಇರುವ ಕರ್ತಾರಪುರದಲ್ಲಿ ರೈಲು ನಿಲ್ದಾಣ ನಿರ್ಮಿಸಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ. ಭಕ್ತರಿಗಾಗಿ ವಸತಿ ಗೃಹ ಹಾಗೂ ವಿಶ್ರಾಂತಿ ಕೊಠಡಿ ವ್ಯವಸ್ಥೆ ಕಲ್ಪಿಸಲೂ ಮುಂದಾಗಿದೆ.

ನಿಲ್ದಾಣ ಸ್ಥಾಪಿಸಲು ರೈಲ್ವೆ ಇಲಾಖೆಯು ಕರ್ತಾರಪುರ ಹಾಗೂ ನಾಂಕಾನ್‌ ಸಾಹಿಬ್‌ ನಗರದಲ್ಲಿ ತಲಾ 10 ಎಕರೆ ಭೂಮಿ ಹಾಗೂ ನಾರೊಲ್‌ ಪ್ರದೇಶದಲ್ಲಿ ಅತ್ಯಾಧುನಿಕ ಪಂಚತಾರಾ ಹೋಟೆಲ್‌ ನಿರ್ಮಿಸಲು ಐದು ಎಕರೆ ಭೂಮಿ ನೀಡಲಾಗುವುದು ಎಂದು ರೈಲ್ವೆ ಸಚಿವ ಷೇಕ್ ರಶೀದ್‌ ಅಹ್ಮದ್ ಮಂಗಳವಾರ ತಿಳಿಸಿದ್ದಾರೆ.