ಕರ್ಣಾಟಕ ಬ್ಯಾಂಕ್​ಗೆ ಅತ್ಯುತ್ತಮ ಬ್ಯಾಂಕ್ ಪ್ರಶಸ್ತಿ

0
37

ವಿತ್ತೀಯ ಸೇರ್ಪಡೆಯಲ್ಲಿ ತಂತ್ರಜ್ಞಾನ ಬಳಕೆಗಾಗಿ ಕರ್ಣಾಟಕ ಬ್ಯಾಂಕ್​ಗೆ ಅತ್ಯುತ್ತಮ ಬೆಸ್ಟ್ ಬ್ಯಾಂಕ್ ಅವಾರ್ಡ್ ದೊರೆತಿದೆ.

ವಿತ್ತೀಯ ಸೇರ್ಪಡೆಯಲ್ಲಿ ತಂತ್ರಜ್ಞಾನ ಬಳಕೆಗಾಗಿ ಕರ್ಣಾಟಕ ಬ್ಯಾಂಕ್​ಗೆ ಅತ್ಯುತ್ತಮ ಬೆಸ್ಟ್ ಬ್ಯಾಂಕ್ ಅವಾರ್ಡ್ ದೊರೆತಿದೆ.

ಹೈದರಾಬಾದ್​ನಲ್ಲಿ ನಡೆದ ಇನ್​ಸ್ಟಿಟ್ಯೂಟ್ ಫಾರ್ ಡೆವಲಪ್​ವೆುಂಟ್ ಆಂಡ್ ರಿಸರ್ಚ್ ಇನ್ ಬ್ಯಾಂಕಿಂಗ್ ಟೆಕ್ನಾಲಜಿ ಬ್ಯಾಂಕಿಂಗ್ ಟೆಕ್ನಾಲಜಿ ಎಕ್ಸಲೆನ್ಸ್ ಅವಾರ್ಡ್ ಸಮಾರಂಭದಲ್ಲಿ ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ ಎಂ.ಎಸ್, ಭಾರತೀಯ ರಿಸರ್ವ್ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕ ಸುದರ್ಶನ್ ಸೇನ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.

ಕರ್ಣಾಟಕ ಬ್ಯಾಂಕ್ ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಕೆ ಮಾಡಿರುವು ದನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಬ್ಯಾಂಕ್​ಗೆ ಹೆಮ್ಮೆ ತಂದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಣಾಮಕಾರಿ ಕಾರ್ಯ ನಿರ್ವಹಿಸಲು ಪ್ರೇರಣೆ ದೊರೆತಿದೆ ಎಂದು ಮಹಾಬಲೇಶ್ವರ ಹೇಳಿದರು. ಆರ್​ಬಿಐನ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಗಣೇಶ್ ಕುಮಾರ್, ಐಡಿಆರ್​ಬಿಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎ.ಎಸ್.ರಾಮ ಶಾಸ್ತ್ರಿ ಉಪಸ್ಥಿತರಿದ್ದರು.