ಕರೆನ್ಸಿ ನೋಟುಗಳ ಮೇಲೆ ಮೊಟ್ಟಮೊದಲು ಮಹಾತ್ಮ ಗಾಂಧಿ ಚಿತ್ರ ಮುದ್ರಿಣ

0
1002

ಸರಿಯಾಗಿ ಅರ್ಧ ಶತಮಾನದ ಹಿಂದೆ. ಅಂದು ದೇಶದ ಪಿತಾಮಹ ಮಹಾತ್ಮಾ ಗಾಂಧಿಯವರ 100ನೇ ಜಯಂತಿ. ಅವರ ಸ್ಮರಣಾರ್ಥ 100 ರೂಪಾಯಿ ಮುಖಬೆಲೆಯ ನೋಟಿನಲ್ಲಿ ಮೊದಲ ಬಾರಿಗೆ ಅವರ ಭಾವಚಿತ್ರವನ್ನು ಮುದ್ರಿಸಲಾಯಿತು.

1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ನಂತರ ಭಾರತೀಯ ಕರೆನ್ಸಿಗಳಲ್ಲಿ ಬ್ರಿಟಿಷ್ ರಾಜನ ಚಿತ್ರದ ಜಾಗಕ್ಕೆ ಮಹಾತ್ಮಾ ಗಾಂಧಿಯವರ ಭಾವಚಿತ್ರವನ್ನು ತರಬೇಕೆಂದು ಸರ್ಕಾರದ ಮಟ್ಟದಲ್ಲಿ ಚಿಂತನೆ ಬಂತು. ಅದು ಕಾರ್ಯರೂಪಕ್ಕೆ ಬರಲು ಸ್ವಲ್ಪ ಸಮಯ ಹಿಡಿಯಿತು. ಇದೇ ಹೊತ್ತಿಗೆ ಗಾಂಧಿಯವರ ಭಾವಚಿತ್ರದ ಬದಲಿಗೆ ಬ್ರಿಟಿಷ್ ದೊರೆಯ ಭಾವಚಿತ್ರದ ಸ್ಥಳದಲ್ಲಿ ಸಾರನಾಥದ ಸಿಂಹದ ರಾಜಧಾನಿ ಚಿತ್ರವನ್ನು ಮುದ್ರಿಸಲಾಯಿತು.

ಭಾರತೀಯ ರಿಸರ್ವ್ ಬ್ಯಾಂಕ್ 1969ರಲ್ಲಿ 100 ರೂಪಾಯಿ ನೋಟಿನಲ್ಲಿ ಸೇವಾಗ್ರಾಮ ಆಶ್ರಮದ ಹಿಂದೆ ಮಹಾತ್ಮಾ ಗಾಂಧಿಯವರು ಕುಳಿತಿರುವ ಚಿತ್ರವನ್ನು ಮುದ್ರಿಸಿತು. ನಂತರ ಭಾರತೀಯ ಕರೆನ್ಸಿಗಳಲ್ಲಿ ನಿಗದಿತವಾಗಿ ಮಹಾತ್ಮಾ ಗಾಂಧಿಯವರ ಚಿತ್ರವನ್ನು ಮುದ್ರಿಸಲು ಆರಂಭಿಸಿದ್ದು 1987ರ ನಂತರ. 500 ರೂಪಾಯಿ ಸರಣಿ ನೋಟುಗಳಲ್ಲಿ ಗಾಂಧೀಜಿಯ ನಗುವ ಮುಖದ ಚಿತ್ರವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಮುದ್ರಿಸಿತು. ನಂತರ ಬೇರೆ ಬೇರೆ ಮುಖ ಬೆಲೆಯ ನೋಟುಗಳಲ್ಲಿ ಕೂಡ ಗಾಂಧೀಜಿ ಚಿತ್ರ ಮುದ್ರಣವಾಗಲು ಪ್ರಾರಂಭವಾಯಿತು.

ಗಾಂಧೀಜಿಯ ಫೋಟೋವನ್ನು ನೋಟುಗಳಲ್ಲಿ ಮುದ್ರಿಸುವ ಮೊದಲು ಹಲವು ವಿನ್ಯಾಸ ಮತ್ತು ಚಿತ್ರಗಳಲ್ಲಿ ಭಾರತೀಯ ಕರೆನ್ಸಿಗಳು ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದ್ದವು. 1949ರಲ್ಲಿ ಅಂದಿನ ಸರ್ಕಾರ 1 ರೂಪಾಯಿ ನೋಟುಗಳಲ್ಲಿ ಅಶೋಕ ಸ್ಥಂಭವನ್ನು ಮುದ್ರಿಸಿತ್ತು. 1953ರಲ್ಲಿ ಹೊಸ ನೋಟುಗಳಲ್ಲಿ ಹಿಂದಿ ಭಾಷೆಗೆ ವಿಶೇಷ ಪ್ರಾಧಾನ್ಯತೆ ಇತ್ತು. ಹಿಂದಿ ಭಾಷೆಯಲ್ಲಿ ನೋಟಿಗೆ ಬಹುವಚನವಾಗಿ ಹೇಳಲಾಗುತ್ತಿದ್ದ ರುಪಯಾ ಹೋಗಿ ರೂಪಾಯೆಯಾಯಿತು. 1954ರಲ್ಲಿ 1,000, 5,0000 ಮತ್ತು 10,000ದ ಅಧಿಕ ಮುಖಬೆಲೆಯ ನೋಟುಗಳನ್ನು ಮಾರುಕಟ್ಟೆಗೆ ಮರು ಜಾರಿಗೆ ತರಲಾಯಿತು.

ಸಾವಿರ ಮುಖಬೆಲೆಯ ನೋಟುಗಳಲ್ಲಿ ತಂಜಾವೂರು ದೇವಾಲಯ ವಿಶೇಷತೆಗಳು, 5 ಸಾವಿರ ರೂಪಾಯಿ ನೋಟುಗಳಲ್ಲಿ ಗೇಟ್ ವೇ ಆಫ್ ಇಂಡಿಯಾ ಮತ್ತು 10 ಸಾವಿರ ರೂ ನೋಟಿನಲ್ಲಿ ಲಯನ್ ಕ್ಯಾಪಿಟಲ್ ಆಫ್ ಅಶೋಕ, ಅಶೋಕ ಸ್ಥಂಭಗಳನ್ನು ಮುದ್ರಿಸಲಾಗುತ್ತಿತ್ತು.  ಇನ್ನು ಅಧಿಕ ಮುಖಬೆಲೆಯ ನೋಟುಗಳ ಚಲಾವಣೆಯನ್ನು 1978ರಲ್ಲಿ ಮಾರುಕಟ್ಟೆಯಿಂದ ಹಿಂತೆಗೆದುಕೊಳ್ಳಲಾಯಿತು.